Thumbnail for UGCET-2026:ಪರೀಕ್ಷೆ ಪೂರ್ವ ಸಿದ್ಧತೆ ಮತ್ತು ಪಾಲಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ KEA ED ಹೆಚ್.ಪ್ರಸನ್ನ ಮಾತು by kea vikasana

UGCET-2026:ಪರೀಕ್ಷೆ ಪೂರ್ವ ಸಿದ್ಧತೆ ಮತ್ತು ಪಾಲಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ KEA ED ಹೆಚ್.ಪ್ರಸನ್ನ ಮಾತು

kea vikasana

12m 54s1,600 words~8 min read
YouTube auto captions
Transcript source

YouTube auto captions

This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.

Timestamped outline
[0:06]Section 1

ಎಲ್ಲರಿಗೂ ನಮಸ್ಕಾರ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2026 ನ್ನ ಕರ್ನಾಟಕ ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ 3,30,00...

[5:11]Section 2

ಹಾಗಾಗಿ ಎಕ್ಸ್ಟ್ರಾ ಲಗೇಜ್ ಅನ್ನು ತಗೊಂಡು ಒಳಗಡೆ ಹೋಗೋದಿಕ್ಕೆ ಹೋಗಬೇಡಿ ಬೇರೆ ನಿಮ್ಮ ಬಿಲಾಂಗಿಂಗ್ಸ್ ಯಾವುದಾದರೂ ಕಾಸ್ಟ್ಲಿ ಬ್ಯಾಗ್ ಮೊಬೈಲು ಅಂತದ್ದೆಲ್ಲದನ್ನು ತರಲ...

[6:33]Section 3

ಆರಂಭದಲ್ಲಿ ಪರೀಕ್ಷೆ ಬರೆಯುವಾಗ ತಮಗೆ ಕಷ್ಟ ಆಗಬಹುದು ಯಾವುದೋ ಒಂದು ಆರಂಭದ್ದು ನಾವು ಬೇರೆ ಬೇರೆ ಸೀರೀಸ್ ಮಾಡಿರೋದ್ರಿಂದ ಆರಂಭದ್ದು ಪ್ರಶ್ನೆಗಳನ್ನು ನಿಮಗೆ ಕಷ್ಟ ಅನ...

[8:50]Section 4

ಹಿಂದೆ ಹಂಗೆ ಏನಾದ್ರೂ ಹಿಂದಿನವನು ಮುಂದಿಂದ ನೋಡ್ಬಿಟ್ಟು ಅವನು ಕ್ವೆಶ್ಚನ್ ನಂಬರ್ ಒಂದಿಗೆ ಬಿ ಹಾಕಿದ್ದಾನೆ ನಾನು ಬಿ ಹಾಕೋಣ ಅಂತ ಅಂದ್ರೆ ಅದು ಅವನ ಕ್ವೆಶ್ಚನ್ ಓದ ಆ...

Pull quotes
[0:06]ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2026 ನ್ನ ಕರ್ನಾಟಕ ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ 3,30,000 ವಿದ್ಯಾರ್ಥಿಗಳು ಬರೆಯಲಿಕ್ಕೆ ಎಲ್ಲಾ ವ್ಯವಸ್ಥೆಯನ್ನ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.
[0:06]ತಾವೆಲ್ಲ ವಿದ್ಯಾರ್ಥಿಗಳು ಈಗಾಗಲೇನೇ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿದ್ದೀರಾ ಅಂತ ಭಾವಿಸುತ್ತೀನಿ.
[0:06]ಕೆಲವು ವಿದ್ಯಾರ್ಥಿಗಳು ಒಂದೆರಡು ಸಬ್ಜೆಕ್ಟ್ ಅಲ್ಲಿ ಏನಾದ್ರೂ ಫೈಲ್ ಆಗಿತ್ತು ಅಂತ ಅಂದ್ರೆ ನಾನ್ಯಾಕೆ ಸಿಇಟಿ ಬರೀಬೇಕು ನಾನು ಹೆಂಗಿದ್ರೂನು ಫೈಲ್ ಆಗಿದ್ದೀನಾ ಅಂತ ತಾವು ಭಾವಿಸಿರಬಹುದು.
[0:06]ತಾವೇನು ಚಿಂತೆ ಮಾಡಾಗುತ್ತೆ ಇಲ್ಲ ತಮಗೆಲ್ಲಾ ಗೊತ್ತಿರುವಂತೆ ಎರಡನೇ ಪಿಯುಸಿ ಪರೀಕ್ಷೆಯನ್ನ ಎರಡನೇ ಪರೀಕ್ಷೆಯನ್ನ ಅವರು ನಡೆಸಲಿಕ್ಕೆ ಎಲ್ಲ ವ್ಯವಸ್ಥೆಯನ್ನ ಮಾಡಿಕೊಂಡಿದ್ದಾರೆ.
Use this transcript
Related transcript hubs

[0:06]ಎಲ್ಲರಿಗೂ ನಮಸ್ಕಾರ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2026 ನ್ನ ಕರ್ನಾಟಕ ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ 3,30,000 ವಿದ್ಯಾರ್ಥಿಗಳು ಬರೆಯಲಿಕ್ಕೆ ಎಲ್ಲಾ ವ್ಯವಸ್ಥೆಯನ್ನ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ತಾವೆಲ್ಲ ವಿದ್ಯಾರ್ಥಿಗಳು ಈಗಾಗಲೇನೇ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿದ್ದೀರಾ ಅಂತ ಭಾವಿಸುತ್ತೀನಿ. ಯಾರಾದರೂ ಕೆಲವರು ಮಾಡಿಲ್ಲ ಅಂತ ಅಂದ್ರೆ ದಯಮಾಡಿ ಹಾಲ್ ಟಿಕೆಟ್ ಅನ್ನ ಡೌನ್ಲೋಡ್ ಮಾಡ್ಕೊಳ್ಳಿ. ತಮಗೆಲ್ಲಾ ಗೊತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ಶೇಕಡ 40 ರಿಂದ 45 ರಷ್ಟು ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶೇಕಡ 100 ರಷ್ಟು ಮತ್ತೆ ಶೇಕಡ 100 ರಷ್ಟು ಫಾರ್ಮ್ ಸೈನ್ಸ್, ವೆಟರ್ನರಿ, ನರ್ಸಿಂಗ್ ಎಲ್ಲಾ ಸೀಟ್ಗಳನ್ನ ಈ ಪರೀಕ್ಷೆಯ ಒಂದು ರ‍್ಯಾಂಕ್ ಆಧಾರದ ಮೇಲೆ ನಾವು ಹಂಚಿಕೆ ಮಾಡೋದ್ರಿಂದ ಮೆರಿಟೋರಿಯಸ್ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಫೀ ಸಹ ಇರೋದ್ರಿಂದ ಪರೀಕ್ಷೆಯನ್ನ ತಾವು ಒಳ್ಳೆ ರೀತಿಯಲ್ಲಿ ಬರೆದು ತಾವು ರ‍್ಯಾಂಕ್ ಅನ್ನ ಪಡೆಯುವಂತದ್ದು ಕೌನ್ಸಿಲಿಂಗ್ ಗೆ ಭಾಗವಹಿಸುವಂತದ್ದು ಅನಿವಾರ್ಯ. ಕೆಲವು ವಿದ್ಯಾರ್ಥಿಗಳು ಒಂದೆರಡು ಸಬ್ಜೆಕ್ಟ್ ಅಲ್ಲಿ ಏನಾದ್ರೂ ಫೈಲ್ ಆಗಿತ್ತು ಅಂತ ಅಂದ್ರೆ ನಾನ್ಯಾಕೆ ಸಿಇಟಿ ಬರೀಬೇಕು ನಾನು ಹೆಂಗಿದ್ರೂನು ಫೈಲ್ ಆಗಿದ್ದೀನಾ ಅಂತ ತಾವು ಭಾವಿಸಿರಬಹುದು. ತಾವೇನು ಚಿಂತೆ ಮಾಡಾಗುತ್ತೆ ಇಲ್ಲ ತಮಗೆಲ್ಲಾ ಗೊತ್ತಿರುವಂತೆ ಎರಡನೇ ಪಿಯುಸಿ ಪರೀಕ್ಷೆಯನ್ನ ಎರಡನೇ ಪರೀಕ್ಷೆಯನ್ನ ಅವರು ನಡೆಸಲಿಕ್ಕೆ ಎಲ್ಲ ವ್ಯವಸ್ಥೆಯನ್ನ ಮಾಡಿಕೊಂಡಿದ್ದಾರೆ. ಆ ಎರಡನೇ ಪಿಯುಸಿಯ ಎರಡನೇ ಪರೀಕ್ಷೆಯ ಫಲಿತಾಂಶವನ್ನು ಸಹ ನಾವು ಆದರಿಸಿ ಸಿಇಟಿ ರ‍್ಯಾಂಕ್ ಅನ್ನ ನಾವು ಕೊಡೋದ್ರಿಂದ ನಿಮಗೆ ಇನ್ನೂ ಅವಕಾಶ ಇದೆ ಹಾಗಾಗಿ ತಾವು ಸಿಇಟಿ ನ ಬರೀಬೇಕು ಅಂತ ಅನ್ನುವಂತದ್ದು ನನ್ನ ಒಂದು ವಿನಂತಿ. ಹಾಲ್ ಟಿಕೆಟ್ ಜೊತೆ ಒಂದಷ್ಟು ಇನ್ಸ್ಟ್ರಕ್ಷನ್ ಗಳನ್ನ ವಿದ್ಯಾರ್ಥಿಗಳಿಗೆ ಕೊಟ್ಟಿದ್ದೀವಿ ದಯಮಾಡಿ ಆ ಇನ್ಸ್ಟ್ರಕ್ಷನ್ಸ್ ಗಳು ಏನಿದೆ ಸೂಚನೆಗಳು ಏನಿದೆ ಪ್ರಾಧಿಕಾರ ಕೊಟ್ಟಿರುವಂತದ್ದು ತಾವು ದಯಮಾಡಿ ಸ್ಟಡಿ ಮಾಡಿ ಒಂದು ಹತ್ತು ನಿಮಿಷ ತಾವು ಅದನ್ನ ಗಮನವಿಟ್ಟು ಓದಿದ್ರೆ ನಿಮ್ಮ ಪರೀಕ್ಷೆ ಬಹಳ ಸುಗಮವಾಗಿ ಆಗುತ್ತೆ ಅಂತ ಅನ್ನುವಂತದ್ದು. ತಾವೆಲ್ಲರೂನೂ ಹಾಲ್ ಟಿಕೆಟ್ ಡೌನ್ಲೋಡ್ ಮಾಡ್ಕೊಂಡಿರೋರಿಗೆ ತಮಗೆ ಗೊತ್ತಿದೆ ತಾವು ಹಾಲ್ ಟಿಕೆಟ್ ಡೌನ್ಲೋಡ್ ಮಾಡುವಾಗ ಒಂದು ಡ್ರಾಫ್ಟ್ ಪ್ರಾಕ್ಟೀಸ್ ಒಎಂಆರ್ ಅನ್ನ ನಾವು ಕೊಟ್ಟಿದ್ದೀವಿ. ವಿದ್ಯಾರ್ಥಿಗಳೇ ದಯಮಾಡಿ ಅರ್ಥ ಮಾಡಿಕೊಳ್ಳಿ ತಾವು ಕೆಲವರು ಖಾಸಗಿ ಕಾಲೇಜ್ ಅವರು ಓಎಂಆರ್ ಅಲ್ಲಿ ಪ್ರಾಕ್ಟೀಸ್ ಮಾಡಿರಬಹುದು ಕೆಲವು ಸರ್ಕಾರಿ ಕಾಲೇಜಲ್ಲೂ ಮಾಡಿರಬಹುದು ಆದರೆ ಕೆಲವು ವಿದ್ಯಾರ್ಥಿಗಳು ಓಎಂಆರ್ ಅಲ್ಲಿ ಸರ್ಕಲ್ ಗಳನ್ನ ಬಬಲ್ ಮಾಡುವಂತದ್ದನ್ನ ಅಭ್ಯಾಸ ಮಾಡಿರಲ್ಲ. ತಾವು ದಯಮಾಡಿ ಒಂದು ಅರ್ಧ ಗಂಟೆ ಕುಳಿತುಕೊಂಡು ಈ ಓಎಂಆರ್ ತಿದ್ದುವಂತ ಕೆಲಸವನ್ನ ಮಾಡಿ ನಿಮಗೆ ಸ್ವಲ್ಪ ಕಾನ್ಫಿಡೆನ್ಸ್ ಬರುತ್ತೆ ಮೊದಲ ದಿನ ಮೊದಲ ಪತ್ರಿಕೆನಲ್ಲಿ ನಿಮಗೆ ಗೊಂದಲ ಆಗುವಂತದ್ದು ತಪ್ಪುತ್ತೆ. ದಯಮಾಡಿ ಅದನ್ನ ಮಾಡಿ ಮತ್ತೆ ಆ ಪ್ರಾಕ್ಟೀಸ್ ಓಎಂಆರ್ ನ ತಾವು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗೋ ಅವಶ್ಯಕತೆ ಇಲ್ಲ ಹಾಲ್ ಟಿಕೆಟ್ ಅನ್ನು ತೆಗೆದುಕೊಂಡು ಹೋದರೆ ಸಾಕು ಪ್ರಾಕ್ಟೀಸ್ ಓಎಂಆರ್ ನ ಪ್ರಾಕ್ಟೀಸ್ ಮಾಡಿ ತಾವು ಅದನ್ನ ಹರಿದು ಹಾಕುವಂತದ್ದು ಒಳ್ಳೆಯದು. ಡ್ರೆಸ್ ಕೋಡಿ ಗೆ ಸಂಬಂಧಪಟ್ಟಂತೆ ಸಾಕಷ್ಟು ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಾಟ್ಸಪ್ ಅಲ್ಲಿ ಎಲ್ಲಾ ಬೇರೆ ಬೇರೆ ತರ ಗೊಂದಲ ಏನು ತಾವು ತುಂಬಾ ಟೆನ್ಶನ್ ಡ್ರೆಸ್ ಕೋಡ್ ಗೋಸ್ಕರ ಮಾಡಿಕೊಳ್ಳುವಂತ ಅವಶ್ಯಕತೆ ಇಲ್ಲ ತಾವೇ ಅರ್ಥ ಮಾಡಿಕೊಳ್ಳಿ. ಪಾರದರ್ಶಕವಾಗಿ ಪರೀಕ್ಷೆ ನಡೆಸಲಿಕ್ಕೆ ನಾವು ಕೆಲವೊಂದು ಡ್ರೆಸ್ ಕೋಡ್ ಗಳನ್ನ ಅಂದ್ರೆ ಫುಲ್ ದೋಳ ಇರುವಂತ ಶರ್ಟ್ ಬೇಡ ಇಡೀ ಮೈ ಕವರ್ ಆಗುವಂತದ್ದು ಕಿವಿ ಎಲ್ಲಾ ಮುಚ್ಚಿಕೊಂಡು ತಾವು ಪರೀಕ್ಷೆಗೆ ಬರುವಂತದ್ದು ಬೇಡ ಲೆದರ್ ಶೂ ತುಂಬಾ ದೊಡ್ಡದಾಗಿ ಶೂ ಹಾಕುವಂತ ಅಂದ್ರೆ ತಾವು ಹೇಳಿ ಅಂದ್ರೆ ಎಲ್ಲೆಲ್ಲಿ ಏನಾದರೂ ಮಾಲ್ ಪ್ರಾಕ್ಟೀಸ್ ಮಾಡಲಿಕ್ಕೆ ಸಾಧ್ಯ ಆಗಬಹುದು ಚೀಟಿ ಮತ್ತೆ ಏನಾದರೂ ಎಲೆಕ್ಟ್ರಾನಿಕ್ ಡಿವೈಸಸ್ ಏನಾದರೂ ಇಟ್ಕೊಂಡು ಹೋಗಬಹುದು ಅನ್ನುವಂತದ್ದು ಡ್ರೆಸ್ ಕೋಡ್ ಅಷ್ಟೇನೆ ಅದಕ್ಕೋಸ್ಕರ ನೀವು ತುಂಬಾ ಟೆನ್ಶನ್ ಮಾಡ್ಕೊಂಡು ಡ್ರೆಸ್ ಕೋಡ್ ಗೋಸ್ಕರ ನೀವು ಪರೀಕ್ಷೆಯನ್ನು ಗೊಂದಲದಲ್ಲಿ ಬರೆಯುವಂತ ಅಗತ್ಯ ಇಲ್ಲ ತಾವು ಸಿಂಪಲ್ ಆಗಿ ಸಾದಾ ಸೇದುವಾಗಿ ತಾವು ಹೋಗಿ ಪರೀಕ್ಷೆ ಧೈರ್ಯವಾಗಿ ಬರೆಯಿರಿ. ಏನ್ ಡ್ರೆಸ್ ಹಾಕೊಂಡು ಹೋಗಬಹುದು ಏನ್ ಹಾಕೊಂಡು ಹೋಗಬಾರದು ಹಾಕೊಂಡು ಹೋಗಬಾರದು ಅನ್ನುವಂತದ್ದು ನಾನು ತಮಗೆ ವಾಟ್ಸಪ್ ಅಲ್ಲಿ ಕಳಿಸಿದ್ದೀನಿ ಒಮ್ಮೆ ತಾವು ನೋಡಿಕೊಳ್ಳಿ ತುಂಬಾ ಕಠಿಣವಾಗಿರುವಂತದ್ದು ಏನಲ್ಲ ದಯಮಾಡಿ ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸಲಿಕ್ಕೆ ಈ ಡ್ರೆಸ್ ಕೋಡ್ ಅನ್ನು ಪಾಲನೆ ಮಾಡುವಂತದ್ದಕ್ಕೆ ಸಹಕರಿಸಿ ಅಂತ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಾನು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ತಾವು ಆಲ್ ಟಿಕೆಟ್ ಜೊತೆಯಲ್ಲಿ ಏನು ಫೋಟೋ ಇದೆ ಅಲ್ಲಿ ಒಂದು ಕ್ಯೂಆರ್ ಕೋಡ್ ಸಹ ಇದೆ. ಆ ಕ್ಯೂಆರ್ ಕೋಡ್ ಅನ್ನ ನಮ್ಮ ವಾಲಂಟಿಯರ್ಸ್ ತಾವು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಸ್ಕ್ಯಾನ್ ಮಾಡ್ತಾರೆ ಸ್ಕ್ಯಾನ್ ಮಾಡಿದಾಗ ತಾವು ಪರೀಕ್ಷೆಗೆ ಅರ್ಜಿ ಹಾಕುವಂತ ಸಂದರ್ಭದಲ್ಲಿ ಅಪ್ಲೋಡ್ ಮಾಡಿರುವಂತಹ ಫೋಟೋ ಅವರ ವಾಲಂಟಿಯರ್ಸ್ ಮೊಬೈಲ್ ಅಲ್ಲಿ ಬರುತ್ತೆ. ನೀವು ಯಾರು ಬಂದಿದ್ದೀರಾ ನಿಮ್ಮದು ಲೈವ್ ಫೋಟೋನ ಕ್ಯಾಪ್ಚರ್ ಮಾಡ್ತಾರೆ ಎರಡು ಒಂದಾಣಿಕೆ ಆದ್ಮೇಲೆ ಒಳಗಡೆ ನಿಮ್ಮನ್ನು ಬಿಡ್ತಾರೆ. ಶೇಕಡಾ ನೂರರಷ್ಟು ಪರೀಕ್ಷೆ ಯಾರು ಅರ್ಜಿ ಹಾಕಿದ್ದಾರೋ ಅದೇ ವಿದ್ಯಾರ್ಥಿಗಳು ಬಂದು ಪರೀಕ್ಷೆಯನ್ನು ಬರೆಯಬೇಕು ಯಾವುದೇ ರೀತಿ ಬದಲಿ ಅಭ್ಯರ್ಥಿಗಳು ಬರಬಾರದು ಅನ್ನುವಂತಹ ಒಂದು ಕಠಿಣ ನಿರ್ಧಾರಕ್ಕೋಸ್ಕರ ನಾವು ವ್ಯವಸ್ಥೆ ಮಾಡಿದ್ದೀವಿ. ಅದಕ್ಕೆ ನಾವು ನೀವು ಕೊನೆಯ ಮೂಮೆಂಟ್ ಅಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಇದು ತುಂಬಾ ಗೊಂದಲ ಆಗದಕ್ಕಿಂತ ಸ್ವಲ್ಪ ಬೇಗ ಪರೀಕ್ಷಾ ಕೇಂದ್ರಕ್ಕೆ ಬನ್ನಿ ಮತ್ತೆ ಹಾಲ್ ಟಿಕೆಟ್ ಅಲ್ಲಿ ಪರೀಕ್ಷಾ ಕೇಂದ್ರದ ವಿಳಾಸವನ್ನು ನೋಡಿಕೊಳ್ಳಿ. ಕೆಲವೊಮ್ಮೆ ಏನಾಗುತ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಸರು ಇರುತ್ತೆ ಅದರಲ್ಲಿ ಮುಂದುಗಡೆ ಬ್ಲಾಕ್ ಬೇರೆ ಬೇರೆ ಇರುತ್ತೆ ತಾವು ಅದನ್ನು ಸ್ವಲ್ಪ ನೋಡಿಕೊಳ್ಳಿ ಮೊದಲ ದಿವಸ ತಾವು ಖಂಡಿತ ಬೇಗ ಹೋಗಿ ಅವಾಗ ನಿಮಗೆ ಟೆನ್ಷನ್ ಆಗುವಂತದ್ದು ತಪ್ಪುತ್ತೆ. ಅದೆಲ್ಲ ವಿದ್ಯಾರ್ಥಿ ಮತ್ತೆ ಪೋಷಕರಿಗೆ ನನ್ನ ಒಂದು ವಿನಂತಿ. ಫುಡ್ ವಾಟರ್ ಬಾಟ್ಲಿ ಬೇರೆ ಯಾವುದು ನಾವು ಒಳಗಡೆ ತಗೊಂಡು ಬರಬೇಡಿ ಅಂತ ಹೇಳಿದ್ದೀವಿ ಕುಡಿಯುವ ನೀರಿನ ವ್ಯವಸ್ಥೆಯನ್ನ ನಾವೇನೇ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದೀವಿ ಮಕ್ಕಳಿಗೆ ಯಾರಾದರೂ ನೀರು ಬೇಕು ಅಂತ ಅಂದ್ರೆ ಅವರು ನಿಮ್ಮ ಪರೀಕ್ಷೆ ಬರೆಯುವಂತಹ ಸ್ಥಳಕ್ಕೆ ತೆಗೆದುಕೊಂಡು ಬರ್ತಾರೆ.

[5:11]ಹಾಗಾಗಿ ಎಕ್ಸ್ಟ್ರಾ ಲಗೇಜ್ ಅನ್ನು ತಗೊಂಡು ಒಳಗಡೆ ಹೋಗೋದಿಕ್ಕೆ ಹೋಗಬೇಡಿ ಬೇರೆ ನಿಮ್ಮ ಬಿಲಾಂಗಿಂಗ್ಸ್ ಯಾವುದಾದರೂ ಕಾಸ್ಟ್ಲಿ ಬ್ಯಾಗ್ ಮೊಬೈಲು ಅಂತದ್ದೆಲ್ಲದನ್ನು ತರಲಿಕ್ಕೆ ಹೋಗಬೇಡಿ ಯಾಕೆಂದರೆ ಅದಕ್ಕೋಸ್ಕರ ನಾವು ಯಾವುದೇ ಕ್ಲಾಕ್ ರೂಮ್ ವಿಶೇಷವಾಗಿ ಭದ್ರತೆಯನ್ನು ಒದಗಿಸಲಿಕ್ಕೆ ಯಾವುದೇ ವ್ಯವಸ್ಥೆ ಮಾಡಿರಲ್ಲ. ಪೇರೆಂಟ್ಸ್ ಬಂದರೆ ದಯಮಾಡಿ ಹೊರಗಡೆ ಪೇರೆಂಟ್ಸ್ ಹತ್ರ ಕೊಟ್ಟು ಒಳಗಡೆ ಬಂದು ಪರೀಕ್ಷೆಯನ್ನು ಬರೆಯಿರಿ. ಮತ್ತೆ ನಾನು ವಿನಂತಿ ಮಾಡಿಕೊಳ್ಳುವಂತದ್ದು ಈ ನಾವು ಎಲ್ಲ ನಿರ್ಧಾರಗಳು ಏನಿದೆ ಡ್ರೆಸ್ ಕೋಡ್ ಇರಬಹುದು ಫೇಶಿಯಲ್ ಆಪ್ ಇರಬಹುದು ಇದೆಲ್ಲದನ್ನು ವಿದ್ಯಾರ್ಥಿಗಳು ಯಾರು ಕಷ್ಟಪಟ್ಟು ಓದಿದ್ದಾರೆ ಅವರಿಗೆ ಒಂದು ಒಳ್ಳೆ ರೀತಿ ಪರೀಕ್ಷೆ ಆಗಬೇಕು ಅಂತ ಮಾಡಿರುವಂತ ನಿಯಮವೇ ಹೊರತು ಯಾರಿಗೆ ಒಂದು ತೊಂದರೆ ಆಗಬೇಕು ಅಂತ ಮಾಡಿರುವಂತದ್ದಲ್ಲ. ಹಾಗಾಗಿ ಎಲ್ಲಾ ಪೋಷಕರು ಮತ್ತೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಂಡು ನಮಗೆ ಸಹಕರಿಸ್ತೀರಾ ಅಂತ ನನ್ನ ಭಾವಿಸಿದ್ದೀನಿ. ಪರೀಕ್ಷೆ ಪಾರದರ್ಶಕವಾಗ ಆಗಲಿಕ್ಕೆ ತಮಗೆಲ್ಲ ಗೊತ್ತಿದೆ ಸಿಸಿ ಕ್ಯಾಮೆರಾಗಳು ಎಲ್ಲಾ ಕ್ಲಾಸ್ ರೂಮ್ ಅಲ್ಲಿ ನಾವು ಅಳವಡಿಸಿರ್ತೀವಿ ಆಯುಧ ಕೇಂದ್ರಗಳಲ್ಲಿ ಜಾಮರ್ ಗಳನ್ನು ಸಹ ನಾವು ಅಳವಡಿಸಿರ್ತೀವಿ. ಪರೀಕ್ಷಾ ದಿವಸ ತಾವು ಮೊದಲು ನಾಲ್ಕು ಪತ್ರಿಕೆಗಳು ಇರುತ್ತೆ ಕೆಲವರು ಬಯಲಜಿನ ಬರೆದೆ ಇರಬಹುದು ಇಂಜಿನಿಯರಿಂಗ್ ಗೋಸ್ಕರ ಬರಿ ಪಿಸಿಎಂ ಬರಬಹುದು. ವಿದ್ಯಾರ್ಥಿಗಳಿಗೆ ನಾನು ಹೇಳುವಂತದ್ದು ಮೊದಲ ಪತ್ರಿಕೆ ಸ್ವಲ್ಪ ಕಷ್ಟ ಇದ್ದಿರಬಹುದು ನೀವು ಚಿಂತೆ ಮಾಡೋದಕ್ಕೆ ಹೋಗಬೇಡಿ ಇನ್ನು ಮೂರು ಪತ್ರಿಕೆ ಇರುತ್ತೆ ಎರಡನೇ ಪತ್ರಿಕೆ ಸಹ ಸ್ವಲ್ಪ ಕಷ್ಟ ಇದ್ದಿರಬಹುದು.

[6:33]ಆರಂಭದಲ್ಲಿ ಪರೀಕ್ಷೆ ಬರೆಯುವಾಗ ತಮಗೆ ಕಷ್ಟ ಆಗಬಹುದು ಯಾವುದೋ ಒಂದು ಆರಂಭದ್ದು ನಾವು ಬೇರೆ ಬೇರೆ ಸೀರೀಸ್ ಮಾಡಿರೋದ್ರಿಂದ ಆರಂಭದ್ದು ಪ್ರಶ್ನೆಗಳನ್ನು ನಿಮಗೆ ಕಷ್ಟ ಅನ್ಸಬಾರದು ಹಂಗೆ ಅಂತಿತ್ತಂಗೆನೆ ನೀವು ಟೆನ್ಶನ್ ಗೊಂದಲ ಮಾಡ್ಕೊಂಡ್ರೆ ಉಳಿದ ಪ್ರಶ್ನೆಗಳನ್ನು ನಿಮಗೆ ಗೊಂದಲ ಆಗುತ್ತೆ ಯಾಕೆಂದರೆ ತಮಗೆಲ್ಲಾ ಗೊತ್ತಿದೆ. ಪಿಯುಸಿಯ ಶೇಕಡ 50 ರಷ್ಟು ಮಾರ್ಕ್ಸ್ ಸಿಇಟಿಯ ಶೇಕಡ 50 ರಷ್ಟು ಮಾರ್ಕ್ಸ್ ಅನ್ನು ತಗೊಂಡು ನಾವು ಸಿಇಟಿ ರ‍್ಯಾಂಕ್ ಕೊಡುವಂತದ್ದು ಹಾಗಾಗಿ ನೀವು ಕಾನ್ಫಿಡೆಂಟ್ ಆಗಿ ಎಕ್ಸಾಮ್ ಬರೆಯಿರಿ. ಒಂದೆರಡು ಪ್ರಶ್ನೆ ಒಂದೆರಡು ಪ್ರಶ್ನೆಗಳು ಅಥವಾ ಆರಂಭದ ದಿನದ ಪತ್ರಿಕೆಗಳು ತಮಗೆ ಟಫ್ ಆಗಿದೆ ಅಂತ ಇದ್ದಂಗೆನೆ ಉಳಿದ ಪತ್ರಿಕೆಗಳಲ್ಲೆಲ್ಲಾ ನೀವು ಗೊಂದಲ ಮಾಡಿಕೊಂಡು ಸುಮ್ಮನೆ ಟೆನ್ಶನ್ ಮಾಡಿಕೊಂಡು ಬಿಟ್ಟು ಆ ಪತ್ರಿಕೆಗಳನ್ನು ಹಾಳು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಹಾಗಾಗಿ ಇನ್ನ ಏನು ಮೂರ್ನಾಲ್ಕು ದಿನ ಇದೆ ಪರೀಕ್ಷೆಗೆ ತಾವು ಶಾಂತ ರೀತಿಯಿಂದ ತಾವು ಅಭ್ಯಾಸ ಮಾಡಿ ಪರೀಕ್ಷಾ ಕೇಂದ್ರಕ್ಕೆ ಬೇಗ ಹೋಗಿ ಶಾಂತವಾಗಿ ಪರೀಕ್ಷೆಯನ್ನು ಬರೆಯಿರಿ ತಮಗೆಲ್ಲ ಗೊತ್ತಿರುವಂತೆ ಇಂಜಿನಿಯರಿಂಗ್ ರ‍್ಯಾಂಕ್ ಗೆ ಪಿಸಿಎಂ ಸಿಇಟಿ ದು ಮತ್ತೆ 50% ಪಿಯುಸಿ ದು ತಗೊಳ್ತೀವಿ. ಫಾರ್ಮ್ ಸೈನ್ಸಸ್ ರ‍್ಯಾಂಕ್ ಗೆ ಪಿಸಿಎಂಬಿ 50% ಮತ್ತೆ ತಮ್ಮ ಪಿಯುಸಿಯ ಪಿಸಿಎಂಬಿ 50% ತಗೊಳ್ತೀವಿ ವೆಟರ್ನರಿಗೆ ಈ ಸಿಇಟಿ ದು ಪಿಸಿಬಿ ಮಾತ್ರ ತಗೊಳ್ತೀವಿ ಹಾಗಾಗಿ ಎಲ್ಲಾ 50% ತಗೊಳ್ಳುವುದರಿಂದ ನೀವು ಯಾವುದೋ ಒಂದು ಪತ್ರಿಕೆ ಸ್ವಲ್ಪ ಡಲ್ ಆಯ್ತು ಅಂತ ಚಿಂತೆ ಮಾಡೋಕೆ ಹೋಗಬೇಡಿ. ವಿಶೇಷವಾಗಿ ಪರೀಕ್ಷೆ ದಿನ ಪರೀಕ್ಷಾ ಕೇಂದ್ರದ ಒಳಗಡೆ ನಿಮಗೆ ಕಿವಿ ಮಾತು ಹೇಳುವಂತದ್ದು ಏನು ಅಂತ ಅಂದ್ರೆ ಓ ಎಂ ಆರ್ ಗೆ ಸಂಬಂಧಪಟ್ಟಂತೆ. ನಾವು ಓ ಎಂ ಆರ್ ನಿಮಗೆ ಪ್ರಾಕ್ಟೀಸ್ ಮಾಡ್ಲಿಕ್ಕೆ ಕೊಟ್ಟಿದ್ದೀವಿ ಜೊತೆಗೆ ಈಗ ನಿಮಗೆ ರಿಯಲ್ ಓ ಎಂ ಆರ್ ಪರೀಕ್ಷಾ ಕೇಂದ್ರದಲ್ಲಿ ಕ್ವೆಶ್ಚನ್ ಪೇಪರ್ ಕೊಡೋದಕ್ಕಿಂತ ಮೊದಲು ನಿಮಗೆ ಓ ಎಂ ಆರ್ ಪತ್ರಿಕೆಯನ್ನ ಕೊಡ್ತಾರೆ. ಮೊದಲು ದಿನ ವಿದ್ಯಾರ್ಥಿಗಳು ಸ್ವಲ್ಪ ಗೊಂದಲದಲ್ಲಿ ಸಾಕಷ್ಟು ತಪ್ಪು ಮಾಡ್ತಾರೆ ಅದನ್ನ ತಪ್ಪು ಮಾಡಬೇಡಿ ನಿಮಗೆ ಆರಂಭದಲ್ಲಿ ಬೇಗ ಕೊಡೋದ್ರಿಂದ ನೋಡಿ ನಿಮಗೆ ನಾಲ್ಕು ಕಾಲಂಗಳು ಮಾತ್ರ ಪ್ರಶ್ನೆ ಪತ್ರಿಕೆ ಬರೋದ್ರು ಒಳಗಡೆ ತುಂಬಿಸುವಂತದ್ದು ಅಂದ್ರೆ ಪ್ರಶ್ನೆ ಪತ್ರಿಕೆ ಅಧಿಕೃತವಾಗಿ ಶುರು ಮಾಡೋದಕ್ಕಿಂತ ಮೊದಲು ತುಂಬಿಸುವಂತದ್ದು. ದಯಮಾಡಿ ತಾವು ಓಎಂಆರ್ ಪತ್ರಿಕೆನಲ್ಲಿ ತಪ್ಪಿಲ್ಲದೇನೆ ತಮ್ಮ ಹೆಸರನ್ನು ಬರೆಯಬೇಕು. ಜೊತೆಗೆ ಸಿಇಟಿ ಸಂಖ್ಯೆ ಏನು ಒಂಬತ್ತು ನಂಬರ್ ನ ಒಂದು ಸಿಇಟಿ ಸಂಖ್ಯೆ ಇದೆ ಅದನ್ನ ತಾವು ದಯಮಾಡಿ ಬರೀಬೇಕು ಮತ್ತೆ ಪ್ರಶ್ನೆ ಪತ್ರಿಕೆನಲ್ಲಿ ವರ್ಷನ್ ಕೋಡ್ ತಮಗೆಲ್ಲ ಗೊತ್ತಿದೆ. ಎ1, b1, c1 ಮತ್ತೆ a2, a3 ತರ ವರ್ಷನ್ ಕೋಡ್ ಗಳನ್ನು ಬೇರೆ ಮಾಡಿರುತ್ತಾರೆ ತಮಗೆಲ್ಲ ಗೊತ್ತಿದೆ ಕ್ವೆಶ್ಚನ್ ಮತ್ತೆ ಆನ್ಸರ್ ಎಲ್ಲ ಜಂಬ್ಲಿಂಗ್ ಆಗಿರುತ್ತೆ ಯಾರು ಕಾಪಿ ಮಾಡ್ಲಿಕ್ಕೆ ಆಗಲ್ಲ.

[8:50]ಹಿಂದೆ ಹಂಗೆ ಏನಾದ್ರೂ ಹಿಂದಿನವನು ಮುಂದಿಂದ ನೋಡ್ಬಿಟ್ಟು ಅವನು ಕ್ವೆಶ್ಚನ್ ನಂಬರ್ ಒಂದಿಗೆ ಬಿ ಹಾಕಿದ್ದಾನೆ ನಾನು ಬಿ ಹಾಕೋಣ ಅಂತ ಅಂದ್ರೆ ಅದು ಅವನ ಕ್ವೆಶ್ಚನ್ ಓದ ಆಗಿರಲ್ಲ ಆನ್ಸರ್ ಓದಾಗಿರಲ್ಲ. ದಯಮಾಡಿ ಹಾಗಾಗಿ ಹಿಂದೆ ಮುಂದೆ ನೋಡಿ ಬರೆಯುವಂತದ್ದು ಮಾಡ ಯಾರಾದ್ರೂ ಸಣ್ಣ ಪುಟ್ಟ ಮನಸ್ಸು ಏನಾದ್ರೂ ಇದ್ರೆ ದಯಮಾಡಿ ಕೈ ಬಿಟ್ಟು ಬಿಡಿ ನಾವು ಜಂಬ್ಲಿಂಗ್ ಮಾಡಿರ್ತೀವಿ. ಅದಕ್ಕೇನೆ ಈ ಕ್ವೆಶ್ಚನ್ ಪ್ರಶ್ನೆ ಪತ್ರಿಕೆಯಲ್ಲಿ ವರ್ಷನ್ ಕೋಡ್ ಅಂತ ನಾವು ಬರುವಂತದ್ದು ಹಾಗಾಗಿ ಈ ವರ್ಷನ್ ಕೋಡ್ ಅನ್ನು ಕರೆಕ್ಟ್ ತುಂಬಿಸಬೇಕು ಯಾಕೆಂದರೆ ನಿಮ್ಮದು ವ್ಯಾಲ್ಯುವೇಷನ್ ನಾವು ಮಾಡುವಂತಹ ಸಂದರ್ಭದಲ್ಲಿ ವರ್ಷನ್ ಕೋಡ್ ಆಧಾರದ ಮೇಲೆ ನಾವು ಮ್ಯಾಪಿಂಗ್ ಮಾಡುವುದರಿಂದ ವರ್ಷನ್ ಕೋಡ್ ಮತ್ತೆ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ತಾವು ಬರೆಯಬೇಕಾಗುತ್ತೆ. ಇದು ಇಷ್ಟನ್ನ 60 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಯನ್ನ ಅಥವಾ ಓಪನ್ ಮಾಡಿ ಆನ್ಸರ್ ಮಾಡುವುದಕ್ಕೆ ಪೂರ್ವದಲ್ಲಿ ಈ ನಾಲ್ಕು ಕಾಲಂಗಳು ಸ್ಪಷ್ಟವಾಗಿ ತಾವು ತುಂಬಬೇಕು ಅಂತ ಅನ್ನುವಂತದ್ದು ನನ್ನ ವಿನಂತಿ. ಮತ್ತೆ ಓ ಎಂ ಆರ್ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಕ್ರಮ ಸಂಖ್ಯೆ ಒಂದೇ ಇರಬಹುದು ಇರದೇನೂ ಇರಬಹುದು ಅದಕ್ಕೆ ಏನು ಚಿಂತೆ ಮಾಡಬೇಡಿ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಈ ವರ್ಷನ್ ಕೋಡ್ ಮತ್ತೆ ತಮ್ಮ ಸಿಇಟಿ ನಂಬರ್ ನ ತಾವು ಓಎಂಆರ್ ಅಲ್ಲಿ ಸ್ಪಷ್ಟವಾಗಿ ತುಂಬುವಂತದ್ದು ಬಹಳ ಮುಖ್ಯ ಕೊನೆಗೆ ಲಾಸ್ಟಿಗೆ ಸೈ ಮಾಡುವಂತದ್ದು ಬಹಳ ಮುಖ್ಯ ತಾವು ದಯಮಾಡಿ ಇದನ್ನ ಮಾಡಬೇಕು. ತಪ್ಪಿಲ್ಲದೆ ಸಮಾಧಾನವಾಗಿ ಮಾಡಬೇಕು ಅಂತ ಹೇಳಿ ನನ್ನ ಒಂದು ವಿನಂತಿ. ಇದು ತಮಗೆಲ್ಲ ಮತ್ತೆ ತಮಗೆಲ್ಲ ಗೊತ್ತಿದೆ ಓಎಂಆರ್ ನಿಮಗೆ ಒಂದು ಕಾರ್ಬನ್ ಕಾಪಿ ನಾವು ಕೊಡ್ತೀವಿ ಆದ್ರೆ ನಿಮ್ಮ ಫ್ರೆಂಡ್ಸ್ ದು ಆ ಪರೀಕ್ಷಾ ಕೇಂದ್ರದಲ್ಲಿ ಬೇರೆ ಬೇರೆ ಅವರದೆಲ್ಲ ಏನು ನಿಮಗೆ ಸಿಕ್ಕಿರಲ್ಲ. ನಾವು ಪಾರದರ್ಶಕತೆಯ ಭಾಗವಾಗಿ ಸಿಇಟಿ ಪರೀಕ್ಷೆನಲ್ಲಿ ಸಹ 3,30,000 ವಿದ್ಯಾರ್ಥಿಗಳು ಏನು ಬರೀತಾಯಿದ್ದಾರೆ 745 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಬರೀತಾಯಿದ್ದಾರೆ ಪ್ರತಿ ಪರೀಕ್ಷಾ ಕೇಂದ್ರವಾರ ಎ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಅಷ್ಟು ವಿದ್ಯಾರ್ಥಿಗಳ ಓ ಎಂ ಆರ್ ನ ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಅಲ್ಲಿ ಅಪ್ಲೋಡ್ ಮಾಡ್ತೀವಿ. ಹಾಗಾಗಿ ತಾವು ಪಾರದರ್ಶಕವಾಗಿ ಪರೀಕ್ಷೆ ನಡೆಯುವ ಭಾಗವಾಗಿ ಅಪ್ಲೋಡ್ ಮಾಡುವಂತದ್ದು ಮತ್ತೆ ತಮಗೆಲ್ಲಾ ಗೊತ್ತಿದೆ ಕೆಲವರಿಗೆ ಒಂದು ಕಾನ್ಫಿಡೆನ್ಸ್ ಇರಲ್ಲ ಈ ಕಾಂಪಿಟೇಟಿವ್ ಎಕ್ಸಾಮ್ಸ್ ಅಲ್ಲಿ ಏನಾಗುತ್ತೆ ನೆಗೆಟಿವ್ ವ್ಯಾಲ್ಯುವೇಷನ್ ಇರುತ್ತೆ. ಹಾಗಾಗಿ ಸ್ವಲ್ಪ ಡೌಟ್ ಇತ್ತು ಅಂತ ಅಂದ್ರೂನು ಅವರು ಹಾಕ್ಲಿಕ್ಕೆ ಹೋಗಲ್ಲ ಯಾಕೆಂದರೆ ನೆಗೆಟಿವ್ ವ್ಯಾಲ್ಯುವೇಷನ್ ಇರುತ್ತೆ ಅಂತ ಸಿಇಟಿ ನಲ್ಲಿ ತಮಗೆ ಗೊತ್ತಿದೆ ನೆಗೆಟಿವ್ ವ್ಯಾಲ್ಯುವೇಷನ್ ಇರಲ್ಲ. 60 ಕ್ವೆಶ್ಚನ್ಸ್ ಗೆ ತಮಗೆ ಏನಾದರೂ ಡೌಟ್ ಇತ್ತು ಅಂತ ಅಂದ್ರೂನು ತಾವು ನಾರ್ಮಲಿ ಹಾಕ್ತಿರಾ ಬಟ್ ನೆಗೆಟಿವ್ ವ್ಯಾಲ್ಯುವೇಷನ್ ಇರಲ್ಲ ಅನ್ನುವಂತದ್ದು ತಮಗೆ ನಾನು ತಿಳಿಸಲಿಕ್ಕೆ ಇಚ್ಛೆ ಪಡ್ತೀನಿ. ಇದು 23 ಮತ್ತು 24 ಕ್ಕೆ ಪರೀಕ್ಷೆ ಏನು ನಾವು ಕಂಡಕ್ಟ್ ಮಾಡ್ತಿದ್ದೀವಿ ತಾವೆಲ್ಲರಿಗೂನು ಶುಭವಾಗಲಿ ಒಳ್ಳೆ ರೀತಿಯಲ್ಲಿ ತಾವು ಪರೀಕ್ಷೆಯನ್ನು ಬರೆಯಿರಿ ಅಂತ ಅನ್ನುವಂತದ್ದು ನನ್ನ ಒಂದು ವಿನಂತಿ. ಜೊತೆಗೆ ನನಗೆ ಕೆಲವು ದೂರವಾಣಿ ಕರೆಗಳು ಬರ್ತಾ ಇದೆ ಸರ್ ನಾವು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಎಕ್ಸಾಮ್ ಗೆ ಅರ್ಜಿ ಹಾಕುವಾಗ ನಾನು ಹಾಕಿರ್ಲಿಲ್ಲ ಆಕ್ಚುವಲಿ ನಾನು ಅಗ್ರಿಕಲ್ಚರ್ ಇದೀನಿ ನಮ್ಮ ತಂದೆದು ಜಮೀನಿದೆ. ಈಗ ಹಾಕಬೇಕು ನೋಡಿ 23 24 ಕ್ಕೆ ಪರೀಕ್ಷೆ ಇದೆ ದಯಮಾಡಿ ನೀವು ಈಗ ಅರ್ಜಿನಲ್ಲಿ ನಾನು ಅದು ಹಾಕಿಲ್ಲ ಇದು ಹಾಕಿಲ್ಲ ಅಂತ ಟೆನ್ಷನ್ ಮಾಡ್ಕೊಂಡು ಹೋದರೆ ಪರೀಕ್ಷೆ ಮೇಲೆ ಪರಿಣಾಮ ಬೀಳುತ್ತೆ. ಪೋಷಕರು ವಿದ್ಯಾರ್ಥಿಗಳಿಗೆ ನನ್ನ ವಿನಂತಿ ತಾವು ದಯಮಾಡಿ ಯಾವುದು ಹಾಕಿಲ್ಲ ಹಾಕಿದ್ದೀವಿ ಚಿಂತೆ ಮಾಡೋದಕ್ಕೆ ಹೋಗಬೇಡಿ 23 24ರದು ಹಾಲ್ ಟಿಕೆಟ್ ತಗೊಂಡು ಪರೀಕ್ಷೆಯನ್ನ ಬರೆಯಿರಿ 24ನೇ ತಾರೀಕು ಸಂಜೆನೇ ನಾನು ಎಡಿಟ್ ಆಪ್ಷನ್ ಅನ್ನ ಬಿಡ್ತೀನಿ. ಒಂದು ವೇಳೆ ಯಾರಾದ್ರೂ ಏನಾದ್ರೂ ಕ್ಯಾಶ್ ಸರ್ಟಿಫಿಕೇಟ್ ಹಾಕಿಲ್ಲ ಅಗ್ರಿಕಲ್ಚರ್ ಪ್ರಾಕ್ಟಿಕಲ್ ಎಕ್ಸಾಮ್ ಗೆ ನಾನು ಹಾಕಿಲ್ಲ ದಯಮಾಡಿ ಎಡಿಟ್ ಮಾಡುವಂತ್ರಿ ಅವಕಾಶ ಕೊಡೋಣ ನಮ್ಮ ಹುಡುಗರು ಏನೋ ಮಿಸ್ಟೇಕ್ ಮಾಡಿದ್ದಾರೆ ಅಂತ ಅಂದ್ರೆ ಅದನ್ನ ಸರಿಪಡಿಸುವಂತದ್ದು ನನ್ನ ಜವಾಬ್ದಾರಿ ಇರುತ್ತೆ. ಅದಕ್ಕೋಸ್ಕರ ಪರೀಕ್ಷೆ ಹಾಳು ಮಾಡಿಕೊಳ್ಳಬೇಡಿ ದಯಮಾಡಿ 24ನೇ ತಾರೀಕು ಸಂಜೆನೇ ನಾನು ಎಡಿಟ್ ಆಪ್ಷನ್ ಕೊಡ್ತೀನಿ. ಈಗ ತಾವು ಫೋನ್ ಮಾಡೋದು ಅಲ್ಲಿ ಇಲ್ಲಿ ಓಡಾಡೋದು ಅದು ಇದು ಏನು ನೋಡೋಕೆ ಹೋಗಬೇಡಿ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಳ್ಳಿ. ಪರೀಕ್ಷೆ ನಂತರದ್ದು ದಿನಗಳದ್ದು ನಾನು ಹೇಳ್ತೀನಿ ಎನಿವೇ ವಿಶೇಷ ಕೆಟಗರಿ ವಿದ್ಯಾರ್ಥಿಗಳಿಗೆ ನಾವು ಮೂರನೇ ತಾರೀಕು ನೀಟ್ ಎಕ್ಸಾಮ್ ಆಗ್ತಿದ್ದಂಗೆ ನಾಲ್ಕನೇ ತಾರೀಖಿಂದ ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ದಾಖಲೆ ಪರಿಶೀಲನೆ ಮಾಡುವಂತದ್ದುಕ್ಕೆ ಸಹ ನಾವು ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೀವಿ ಅದನ್ನು ನಾವು ಟೈಮ್ ಟೇಬಲ್ ಅನ್ನ ಪಬ್ಲಿಶ್ ಮಾಡ್ತೀವಿ. ಸದ್ಯಕ್ಕೆ ವಿದ್ಯಾರ್ಥಿಗಳೇ ಪೋಷಕರೇ ತಮ್ಮ ಒಂದು ಗುರಿ ಮನಸ್ಸು ನಿರ್ಧಾರ ಎಲ್ಲದೂನು ಒಳ್ಳೆ ರೀತಿಯಲ್ಲಿ ಪರೀಕ್ಷೆ ಆಗಬೇಕು ಅನ್ನೋದರ ಕಡೆ ನಿಮ್ಮ ಫೋಕಸ್ ಇರ್ಲಿ. ತಮಗೆ ಶುಭವಾಗಲಿ ಒಳ್ಳೆ ರೀತಿ ಪರೀಕ್ಷೆ ನಡೆಸಲಿಕ್ಕೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಿಕ್ಕೆ ಪ್ರಾಧಿಕಾರ ಸಕಲ ಸಿದ್ಧತೆಯನ್ನು ನಡೆಸಿಕೊಂಡಿದೆ ಇದು ಸಹಕಾರ ಆಗಬೇಕು ಅಂತ ಅಂದ್ರೆ ಎಲ್ಲಾ ಪೋಷಕರ ವಿದ್ಯಾರ್ಥಿಗಳ ಸಹಕಾರ ಬೇಕು. ತಾವು ಖಂಡಿತ ಸಹಕಾರ ನೀಡಿ ನೀಡ್ತೀರಾ ನಿಮ್ಮ ಒಂದು ವಿದ್ಯಾರ್ಥಿಗಳಿಗೆ ಒಳ್ಳೆ ರಾಂಕ್ ಬಂದು ಒಳ್ಳೆ ಕಾಲೇಜುಗಳಲ್ಲಿ ಸೀಟ್ ಸಿಕ್ಲಿ ಅಂತ ಮತ್ತೊಮ್ಮೆ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಶುಭವನ್ನು ನಾನು ಕೋರುತ್ತೇನೆ. ನಮಸ್ಕಾರ.

Need another transcript?

Paste any YouTube URL to get a clean transcript in seconds.

Get a Transcript