[0:00]ರಶ್ಮಿಕಾ ಮಂದಣ್ಣ ಅಂದ್ರೆ ನಮ್ಮ ಕನ್ನಡಿಗರಿಗೆ ನಮ್ಮ ಕನ್ನಡ ಫಿಲಂ ಇಂಡಸ್ಟ್ರಿಗೆ ಸ್ವಲ್ಪನೂ ಇಷ್ಟ ಆಗಲ್ಲ. ಯಾಕೆ ಅಂತ ನಿಮಗೆ ಗೊತ್ತು. ಈಗ ಅದೇ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನ ಮದುವೆಯಾಗಿದ್ದಾರೆ. ಆದರೆ ವಿಜಯ್ ದೇವರಕೊಂಡ ಅವರು ಮದುವೆ ಆಗ್ಬೇಕು ಅಂತ ಅಂದುಕೊಂಡಿದ್ದಿದ್ದು ಬೇರೆ ಹುಡುಗಿಯನ್ನ. ಹೌದು ವಿಜಯ್ ದೇವರಕೊಂಡ ಅವರು ಒಬ್ಬಳು ಫಾರಿನ್ ಹುಡುಗಿಯನ್ನ ತುಂಬಾ ಪ್ರೀತಿಸುತ್ತಿದ್ದರು. ಆದರೂ ಕೂಡ ರಶ್ಮಿಕಾ ಮಂದಣ್ಣ ಅವರನ್ನೇ ಯಾಕೆ ಮದುವೆಯಾದ್ರು? ಹಾಗೆ ರಕ್ಷಿತ್ ಶೆಟ್ಟಿ ಮತ್ತೆ ರಶ್ಮಿಕಾ ಮಂದಣ್ಣ ತುಂಬಾ ಪ್ರೀತಿ ಮಾಡಿ ಎಂಗೇಜ್ಮೆಂಟ್ ಅನ್ನ ಮಾಡ್ಕೊಂಡ್ ಮೇಲೂ ಕೂಡ ಅವರಿಬ್ಬರು ಯಾವ ಕಾರಣಕ್ಕೆ ದೂರ ಆಗ್ತಾರೆ ಗೊತ್ತಾ? ರಶ್ಮಿಕಾ ಮಂದಣ್ಣ ಮಾಡಿದಂತಹ ತಪ್ಪಾದರೂ ಏನು? ರಕ್ಷಿತ್ ಅವರು ರಶ್ಮಿಕಾ ಮಂದಣ್ಣ ಕಾಲ್ ಮಾಡಿದ್ರೆ ಅವರ ಕಾಲನ್ನ ರಕ್ಷಿತ್ ಅವರು ಪಿಕ್ ಮಾಡ್ತಿರಲಿಲ್ವಂತೆ. ಈ ರೀತಿ ನಿಜಕ್ಕೂ ನಡೆದಿದ್ದಾದರೂ ಏನು ಅನ್ನುವಂತಹ ಪ್ರತಿಯೊಂದು ವಿಷಯಗಳನ್ನ ಹೇಳ್ತಾ ಹೋಗ್ತೀನಿ ಕೇಳಿ. ಮೊದಲನೆಯದಾಗಿ ರಶ್ಮಿಕಾ ಮಂದಣ್ಣ ಅವರು ಇವತ್ತು ಇಷ್ಟು ದೊಡ್ಡ ಹೀರೋಯಿನ್ ಆಗೋದಕ್ಕೆ ಮೇನ್ ರೀಸನ್ ಯಾರು ಅಂದ್ರೆ ಅದು ನಮ್ಮ ರಿಷಬ್ ಶೆಟ್ಟಿ ಮತ್ತೆ ರಕ್ಷಿತ್ ಶೆಟ್ಟಿ ಅವರು. ಹೇಗೆ ಗೊತ್ತಾ? ಕಿರಿಕ್ ಪಾರ್ಟಿ ಸಿನಿಮಾವನ್ನ ಮಾಡೋದಕ್ಕೆ ಈಗಿರುವಂತಹ ಹೀರೋಯಿನ್ಸ್ ಗಳನ್ನ ಬಿಟ್ಟು ಒಬ್ಬರು ಹೊಸ ಹೀರೋಯಿನ್ನ ಹಾಕೊಂಡು ಸಿನಿಮಾ ಮಾಡ್ಬೇಕು ಒಂದು ಹೊಸ ಮುಖ ಬೇಕು ಅಂತ ಹುಡುಕ್ತಾ ಇರ್ತಾರೆ. ಆಗ ರಶ್ಮಿಕಾ ಮಂದಣ್ಣ ಅವರು ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಓದ್ತಾ ಇದ್ರು. ಅವರ ಫೋಟೋಸ್ ಗಳನ್ನ ನೋಡಿದಂತಹ ರಿಷಬ್ ಶೆಟ್ಟಿಯವರು ರಶ್ಮಿಕಾ ಮಂದಣ್ಣ ಅವರನ್ನ ಆಡಿಷನ್ ಗೆ ಕರೀತಾರೆ. ಆದರೆ ಆ ಆಡಿಶನ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸ್ವಲ್ಪನೂ ಕೂಡ ಆಕ್ಟಿಂಗ್ ಅನ್ನ ಮಾಡೋದಕ್ಕೆ ಬರ್ತಿರ್ಲಿಲ್ಲ. ಆದರೂ ಕೂಡ ಒಂದು ಹೊಸ ಮುಖವನ್ನ ಇಂಟ್ರೊಡ್ಯೂಸ್ ಮಾಡೋಣ ಅಂತ ರಿಷಬ್ ಶೆಟ್ಟಿಯವರು ರಶ್ಮಿಕಾ ಮಂದಣ್ಣ ಅವರನ್ನೇ ಹೀರೋಯಿನ್ ಆಗಿ ಸೆಲೆಕ್ಟ್ ಮಾಡ್ತಾರೆ. ಇಲ್ಲ ಅಂದಿದ್ರೆ ರಶ್ಮಿಕಾ ಮಂದಣ್ಣ ಅವರು ಇವತ್ತು ಯಾವುದೋ ಒಂದು ಮೂಲೆಯಲ್ಲಿ ಯಾರಿಗೂ ಗೊತ್ತಾಗದೆ ಇರ್ತಿದ್ರು. ನಂತರ ಕಿರಿಕ್ ಪಾರ್ಟಿ ಸಿನಿಮಾದ ಶೂಟಿಂಗ್ ಶುರುವಾಗುತ್ತೆ. ಆ ಶೂಟಿಂಗ್ ಟೈಮ್ ಅಲ್ಲಿ ರಶ್ಮಿಕಾ ಮತ್ತೆ ರಕ್ಷಿತ್ ಇಬ್ಬರು ಯಾವಾಗ್ಲೂ ಒಟ್ಟಿಗೆ ಸಮಯ ಕಳೀತಿದ್ರು. ಹೀಗಾಗಿ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸೋಕು ಶುರು ಮಾಡ್ಕೊಂಡಿದ್ರು. ನಂತರ ಕಿರಿಕ್ ಪಾರ್ಟಿ ಸಿನಿಮಾ 2016 ರಲ್ಲಿ ರಿಲೀಸ್ ಆಗುತ್ತೆ. ರಶ್ಮಿಕಾ ಅವರ ಕ್ಯೂಟ್ ಆಕ್ಟಿಂಗ್ ಅನ್ನ ಕಂಡು ಕನ್ನಡಿಗರು ತುಂಬಾ ದೊಡ್ಡ ಮಟ್ಟದಲ್ಲಿ ಆ ಸಿನಿಮಾವನ್ನ ಗೆಲ್ಲಿಸ್ತಾರೆ. ಸುಮಾರು 50 ಕೋಟಿಗಿಂತ ಜಾಸ್ತಿ ಆ ಟೈಮ್ ಅಲ್ಲೇ ಆ ಸಿನಿಮಾ ಕಲೆಕ್ಷನ್ ಮಾಡುತ್ತೆ. ನಂತರ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿಯವರು ಒಟ್ಟಿಗೆ ಅಲ್ಲಿ ಇಲ್ಲಿ ಅಂತ ಸುತ್ ಆಡ್ತಿದ್ರು. ಹಾಗೆ ಒಂದು ಹೆಜ್ಜೆ ಮುಂದೆ ಹೋಗಿ 2017 ರಲ್ಲಿ ರಶ್ಮಿಕಾ ಅವರ ಹುಟ್ಟೂರಿನ ಮಡಕೇರಿಯಲ್ಲಿ ಇವರಿಬ್ಬರು ಗ್ರಾಂಡ್ ಆಗಿ ಎಂಗೇಜ್ಮೆಂಟ್ ಅನ್ನ ಕೂಡ ಮಾಡ್ಕೊಳ್ತಾರೆ. ಆ ನಿಶ್ಚಿತಾರ್ಥದ ದಿನದಿಂದಲೇ ಇನ್ನಾ ಎರಡು ವರ್ಷದ ಬಳಿಕ ಇವರಿಬ್ಬರಿಗೂ ಮದುವೆ ಮಾಡಿ ಮುಗಿಸೋಣ ಅಂತ ದೊಡ್ಡವರು ತೀರ್ಮಾನ ಮಾಡಿರ್ತಾರೆ. ಇದರಿಂದ ಅವರ ಫ್ಯಾನ್ಸ್ ಕೂಡ ತುಂಬಾ ಖುಷಿಯಾಗಿರ್ತಾರೆ. ಹೀಗೆ ಎಲ್ಲಾ ಸರಿಯಾಗಿತ್ತು. ನಂತರ ರಶ್ಮಿಕಾ ಯಾವ ಸಿನಿಮಾದಲ್ಲಿ ಆಕ್ಟ್ ಮಾಡ್ಬೇಕು ಅನ್ನೋದನ್ನ ಕೂಡ ರಕ್ಷಿತ್ ಅವರೇ ಡಿಸೈಡ್ ಮಾಡ್ತಿದ್ರು. ನಂತರ ರಕ್ಷಿತ್ ಅವರ ಸಲಹೆಯಂತೆ ತೆಲುಗಿನ ಗೀತಾ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಅವರು ಆಕ್ಟ್ ಮಾಡೋದಕ್ಕೆ ಮುಂದಾಗ್ತಾರೆ. ಆದರೆ ಆ ಸಿನಿಮಾದಲ್ಲಿ ಮುತ್ತನ್ನ ಕೊಡುವಂತಹ ಸೀನ್ ಇರೋದನ್ನ ಆ ಸಿನಿಮಾದ ಡೈರೆಕ್ಟರ್ ರಕ್ಷಿತ್ ಶೆಟ್ಟಿ ಅವರಿಗೆ ಹೇಳೆ ಇರೋದಿಲ್ಲ. ಹೀಗಾಗಿ ಆ ಸಿನಿಮಾದ ಸ್ಟಾರ್ಟಿಂಗ್ ಸೀನ್ ಅಲ್ಲೇ ರಶ್ಮಿಕಾ ಆ ಹೀರೋಗೆ ಮುತ್ತನ್ನ ಕೊಡುವಂತಹ ಸೀನ್ ಇದ್ದಿದ್ದರಿಂದ ಅದೇ ರೀತಿ ಮುತ್ತನ್ನ ಕೊಟ್ಟು ಆಕ್ಟ್ ಮಾಡ್ತಾರೆ. ಇದು ಆಗ ತುಂಬಾ ವೈರಲ್ ಆಗುತ್ತೆ. ತುಂಬಾ ಜನ ಅದನ್ನ ಟ್ರೋಲ್ ಮಾಡೋದಕ್ಕೂ ಶುರು ಮಾಡ್ಕೊಳ್ತಾರೆ. ನಿಶ್ಚಿತಾರ್ಥ ಆದ್ಮೇಲೂ ಕೂಡ ಈ ರೀತಿ ಒಂದು ಸೀನ್ ನಲ್ಲಿ ಆಕ್ಟ್ ಮಾಡೋದು ಎಷ್ಟು ಸರಿ ಅಂತ ರಕ್ಷಿತ್ ಶೆಟ್ಟಿಯವರ ಫ್ಯಾನ್ಸ್ ಅಷ್ಟೇ ಅಲ್ಲದೆ ಇಡೀ ಕನ್ನಡಿಗರೇ ಕೋಪಗೊಳ್ಳುತ್ತಾರೆ. ಅಷ್ಟೇ ಅಲ್ಲ ರಶ್ಮಿಕಾ ಅವರು ಆ ರೀತಿ ಸೀನ್ ನಲ್ಲಿ ಆಕ್ಟ್ ಮಾಡೋದಕ್ಕೂ ಮುಂಚೆ ರಕ್ಷಿತ್ ಅವರಿಗೆ ಒಂದು ಮಾತನ್ನು ಕೂಡ ಹೇಳಿರಲ್ಲ. ಹೀಗಾಗಿ ರಕ್ಷಿತ್ ಅವರಿಗೂ ಕೂಡ ರಶ್ಮಿಕಾ ಮಂದಣ್ಣ ಅವರ ಮೇಲೆ ತುಂಬಾ ಬೇಜಾರಾಗಿರುತ್ತೆ. ಹೀಗಾಗಿ ರಶ್ಮಿಕಾ ಅವರು ರಕ್ಷಿತ್ ಶೆಟ್ಟಿಗೆ ಇದರ ಬಗ್ಗೆ ಮಾತಾಡಿ ಬಗೆಹರಿಸಿಕೊಳ್ಳೋಣ ಅಂತ ಕಾಲ್ ಮಾಡ್ತಿದ್ರು ಕೂಡ ಅದನ್ನ ಪಿಕ್ ಮಾಡದೆ ರಕ್ಷಿತ್ ಅವರು ಅವರ ಕಾಲನ್ನ ಕಟ್ ಮಾಡ್ತಿದ್ರಂತೆ. ಕೊನೆಗೂ ಅವರಿಬ್ಬರು ಕಂಪ್ಲೀಟ್ ಆಗಿ ದೂರ ಆಗ್ತಾರೆ. ಹೀಗಾಗಿ ರಶ್ಮಿಕಾ ಅವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ಸಿನಿಮಾ ಆಫರ್ಸ್ ಗಳು ಬರುತ್ತೆ. ವಿಜಯ್ ದೇವರಕೊಂಡ ಅವರ ಜೊತೆ ಕೆಲವೊಂದು ಸಿನಿಮಾಗಳಲ್ಲಿ ಆಕ್ಟ್ ಮಾಡೋದ್ರಿಂದ ಇವರಿಬ್ಬರು ಜೊತೆಯಲ್ಲೇ ಅಲ್ಲಲ್ಲಿ ಕಾಣಿಸಿಕೊಳ್ತಾರೆ. ಹೀಗಾಗಿ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಎಲ್ಲವೂ ಶುರುವಾಗಿದೆ ಅನ್ನೋ ಸುದ್ದಿಗಳು ಹರಿದಾಡ್ತಾನೆ ಇರುತ್ತೆ. ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಗುರುತಿಸಿಕೊಳ್ತಾರೆ. ಇದರಿಂದ ನಾನು ದೊಡ್ಡ ಹೀರೋಯಿನ್ ಆಗಿದ್ದೀನಿ ಅನ್ನೋ ಗರ್ವದಿಂದ ಕನ್ನಡಿಗರ ಬಗ್ಗೆ, ಕನ್ನಡದ ಬಗ್ಗೆ, ಕನ್ನಡ ಸಿನಿಮಾಗಳ ಬಗ್ಗೆ ಅವಮಾನ ಆಗೋ ಹಾಗೆ ಮಾತಾಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದನೇ ಬ್ಯಾನ್ ಆಗ್ತಾರೆ. ಅದರ ಜೊತೆಗೆ ರಶ್ಮಿಕಾ ಅವರನ್ನ ಟ್ರೋಲ್ ಮಾಡೋದನ್ನ ಮಾತ್ರ ನಿಲ್ಲಿಸೆ ಇರೋದಿಲ್ಲ. ತನಗೆ ಮಾಡ್ತಿದ್ದ ಟ್ರೋಲ್ ಗಳನ್ನ ಕಂಡು ರಶ್ಮಿಕಾ ತುಂಬಾ ದಿನಗಳವರೆಗೆ ಅಳುತ್ತಾ ನಾನು ಆಕ್ಟಿಂಗ್ ಮಾಡೋದನ್ನೇ ನಿಲ್ಲಿಸಿ ಬಿಡ್ಬೇಕು ಅಂತ ಅನ್ಕೊಂಡಿದ್ರಂತೆ. ಇತ್ತ ಕಡೆ ರಕ್ಷಿತ್ ಶೆಟ್ಟಿಯವರು ರಶ್ಮಿಕಾ ಬಗ್ಗೆ ಮಾಡ್ತಿರುವಂತ ಟ್ರೋಲ್ ಗಳನ್ನ ನಿಲ್ಲಿಸಿ ಅವರ ಇಷ್ಟದಂತೆ ಅವರ ಪಾಡಿಗೆ ಇರೋಕೆ ಬಿಟ್ಬಿಡಿ ಅಂತ ಫ್ಯಾನ್ಸ್ ಗಳನ್ನ ಕೇಳ್ಕೊಳ್ತಾರೆ. ಇನ್ನೊಂದು ವಿಷಯ ಏನು ಗೊತ್ತಾ? ರಶ್ಮಿಕಾ ಅವರಿಗೆ ರಕ್ಷಿತ್ ಶೆಟ್ಟಿಯವರು 13 ವರ್ಷ ವಯಸ್ಸಿನಲ್ಲಿ ದೊಡ್ಡವರು. ಆದರೂ ಕೂಡ ಅವರಿಬ್ಬರು ಪ್ರೀತಿ ಮಾಡಿರ್ತಾರೆ. ಇದರ ನಡುವೆ ವಿಜಯ್ ದೇವರಕೊಂಡ ಮತ್ತೆ ಬೆಲ್ಜಿಯಂನ ಒಂದು ಹುಡುಗಿ ಜೊತೆಯಲ್ಲಿ ಇರುವಂತಹ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ. ಅಷ್ಟೇ ಅಲ್ಲ ಆ ಫಾರಿನ್ ಹುಡುಗಿ ಅವರ ತಾಯಿ ವಿಜಯ್ ದೇವರಕೊಂಡ ಅವರ ಫ್ಯಾಮಿಲಿ ಜೊತೆ ಕುಳಿತಿರುವಂತಹ ಫೋಟೋಸ್ ಗಳು ಕೂಡ ವೈರಲ್ ಆಗುತ್ತೆ. ಯಾಕಂದ್ರೆ ವಿಜಯ್ ದೇವರಕೊಂಡ ಆ ಫಾರಿನ್ ಹುಡುಗಿಯನ್ನ ಪ್ರೀತಿ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿರುತ್ತೆ. ಆದರೆ ವಿಜಯ್ ದೇವರಕೊಂಡ ಅವರು ಮಾತ್ರ ಇದರ ಬಗ್ಗೆ ಯಾವುದನ್ನು ಹೇಳಿಕೊಳ್ಳಲ್ಲ. ಇದೆಲ್ಲವನ್ನ ಸೀಕ್ರೆಟ್ ಆಗಿನೇ ಹೇಳ್ತಾರೆ. ಯಾಕಂದ್ರೆ ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ ಜೊತೆ ತುಂಬಾ ಕ್ಲೋಸ್ ಆಗಿರೋದ್ರಿಂದ ರಶ್ಮಿಕಾ ಅವರ ಜೊತೆ ಪ್ರೀತಿಯಲ್ಲಿ ಮುಳುಗಿರುತ್ತಾರೆ. ಆದ್ದರಿಂದ ಈಗ ಕೊನೆಗೂ ರಾಜಸ್ಥಾನದ ಉದಯಪುರದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನ ಖರ್ಚು ಮಾಡಿ ಅದ್ದೂರಿಯಾಗಿ ಇವರಿಬ್ಬರು ಮದುವೆಯಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ ತೆಲುಗು ಸಂಪ್ರದಾಯದಲ್ಲಿ ಮದುವೆಯಾಗಿ ನಂತರ ಸಂಜೆ 4:30 ಕ್ಕೆ ಕೊಡವ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಆದರೆ ಇವರ ಮದುವೆಗೆ ಬರೋದಿಕ್ಕೆ ರಿಷಬ್ ಶೆಟ್ಟಿಗೆ ರಕ್ಷಿತ್ ಶೆಟ್ಟಿಗೆ ಇನ್ವೈಟ್ ಮಾಡೇ ಇಲ್ಲ ಅಂತ ಹೇಳಲಾಗ್ತಿದೆ. ನೋಡಿದ್ರಲ್ಲ ರಕ್ಷಿತ್ ಶೆಟ್ಟಿಯವರ ಬದುಕಲ್ಲಿ ರಶ್ಮಿಕಾ ಅವರು ಯಾವ ರೀತಿ ಬಂದು ಯಾವ ರೀತಿ ಕಣ್ಮರೆ ಆದ್ರು ಅಂತ. ರಕ್ಷಿತ್ ಮತ್ತು ರಶ್ಮಿಕಾ ಅವರಿಗೆ ಎಂಗೇಜ್ಮೆಂಟ್ ಆಗಿದೆ ಇನ್ನೇನು ಮದುವೆ ಆಗ್ತಾರೆ ಅನ್ನೋ ಅಷ್ಟರಲ್ಲಿ ಅವರ ಕಂಪ್ಲೀಟ್ ಆದಂತ ಬದುಕೇ ಬದಲಾಗಿ ಹೋಯ್ತು. ಆದರೆ ರಕ್ಷಿತ್ ಅವರು ಮಾತ್ರ ಇಂದಿಗೂ ಕೂಡ ಸಿಂಗಲ್ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ. ಇದಿಷ್ಟು ಇವತ್ತಿನ ವಿಡಿಯೋ ಈ ವಿಡಿಯೋ ನಿಮಗೆ ಇಷ್ಟ ಆಗಿರುತ್ತೆ ಅನ್ಕೊಂಡು ಮತ್ತೊಂದು ಹೊಸ ವಿಷಯದೊಂದಿಗೆ ಮತ್ತೆ ಬರ್ತೀನಿ. ಕೊನೆಗೆ ನನ್ನ ಈ ಶ್ರಮಕ್ಕೆ ನಿಮ್ಮಿಂದ ಬಯಸೋದು ಕೇವಲ ಒಂದು ಮೆಚ್ಚುಗೆಯನ್ನ ಮಾತ್ರ. ಎನಿವೇ ಥ್ಯಾಂಕ್ಯು ಫಾರ್ ವಾಚಿಂಗ್.

ರಶ್ಮಿಕಾ ಮಂದಣ್ಣ ಮಾಡಿದ ತಪ್ಪಾದರೂ ಏನು | Love breakup story of Rashmika mandanna and rakshit shetty
Story Fellow
6m 17s777 words~4 min read
YouTube auto captions
Transcript source
YouTube auto captions
This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.
Pull quotes
[0:00]ರಶ್ಮಿಕಾ ಮಂದಣ್ಣ ಅಂದ್ರೆ ನಮ್ಮ ಕನ್ನಡಿಗರಿಗೆ ನಮ್ಮ ಕನ್ನಡ ಫಿಲಂ ಇಂಡಸ್ಟ್ರಿಗೆ ಸ್ವಲ್ಪನೂ ಇಷ್ಟ ಆಗಲ್ಲ.
[0:00]ಹಾಗೆ ರಕ್ಷಿತ್ ಶೆಟ್ಟಿ ಮತ್ತೆ ರಶ್ಮಿಕಾ ಮಂದಣ್ಣ ತುಂಬಾ ಪ್ರೀತಿ ಮಾಡಿ ಎಂಗೇಜ್ಮೆಂಟ್ ಅನ್ನ ಮಾಡ್ಕೊಂಡ್ ಮೇಲೂ ಕೂಡ ಅವರಿಬ್ಬರು ಯಾವ ಕಾರಣಕ್ಕೆ ದೂರ ಆಗ್ತಾರೆ ಗೊತ್ತಾ?
[0:00]ರಕ್ಷಿತ್ ಅವರು ರಶ್ಮಿಕಾ ಮಂದಣ್ಣ ಕಾಲ್ ಮಾಡಿದ್ರೆ ಅವರ ಕಾಲನ್ನ ರಕ್ಷಿತ್ ಅವರು ಪಿಕ್ ಮಾಡ್ತಿರಲಿಲ್ವಂತೆ.
[0:00]ಈ ರೀತಿ ನಿಜಕ್ಕೂ ನಡೆದಿದ್ದಾದರೂ ಏನು ಅನ್ನುವಂತಹ ಪ್ರತಿಯೊಂದು ವಿಷಯಗಳನ್ನ ಹೇಳ್ತಾ ಹೋಗ್ತೀನಿ ಕೇಳಿ.
Use this transcript
Related transcript hubs
Watch on YouTube
Share
MORE TRANSCRIPTS


