Thumbnail for ಜೇನು ಕೃಷಿ ಆರಂಭ ಮಾಡೋದು ಹೇಗೆ..? How to start honey farming..? | Namma Krushi | by Namma Kannada

ಜೇನು ಕೃಷಿ ಆರಂಭ ಮಾಡೋದು ಹೇಗೆ..? How to start honey farming..? | Namma Krushi |

Namma Kannada

7m 13s985 words~5 min read
Auto-Generated

[0:16]ಸೋ ನಾನಿವಾಗ ಹೇಳ್ತಾ ಇರೋದು ಜೇನಿಂದ ಸ್ಟೆಪ್ ಬೈ ಸ್ಟೆಪ್ ಸ್ಟೆಪ್ ಬೈ ಸ್ಟೆಪ್ ಪ್ರೊಸೀಜರ್ ಹೇಳ್ತಾ ಹೋಗ್ತೀನಿ ಟೋಟಲಿ ಕೊನೆವರೆಗೂನು. ಸೋ ಸ್ಟಾರ್ಟಿಂಗ್ ಏನ್ ಮಾಡ್ಬೇಕಾಗುತ್ತೆ ಅಂತ ಹೇಳಿದ್ರೆ, ಫಸ್ಟ್ ಟ್ರೈನಿಂಗ್ ನ ತಗೋಬೇಕು ಯಾರ್ಯಾದರೂನು ಯಾಕೆ ಅಂತ ಹೇಳಿದ್ರೆ ಇದು ಬ್ಯಾಕ್ಗ್ರೌಂಡ್ ಅಲ್ಲಿ ಯಾರೋ ಕಲ್ತಿರುವಂತದ್ದಲ್ಲ ಅಪ್ಪ ಅಮ್ಮ ಕಲ್ತುಕೊಂಡು ಹೇಳಿಕೊಟ್ಟಿರಲ್ಲ. ಸೋ ಹಾಗಾಗಿ ಇದನ್ನ ಒಂದು ಟ್ರೈನಿಂಗ್ ತಗೊಳೋದು ತುಂಬಾ ಮುಖ್ಯ ಆಗುತ್ತೆ. ಸೋ ಟ್ರೈನಿಂಗ್ ನ ತಗೊಂಡ್ ಮೇಲೆ ಬಾಕ್ಸ್ಗಳನ್ನ ಇಟ್ಕೋಬೇಕು. ಬಾಕ್ಸ್ಗಳನ್ನ ಇಟ್ಕೊಳ್ಳೋದಕ್ಕೆ ಅಟ್ಲೀಸ್ಟ್ ಎರಡು ಬಾಕ್ಸ್ ಇಂದ ಐದು ಬಾಕ್ಸ್ ಇಟ್ಕೊಂಡು ಅದನ್ನ ಶುರು ಮಾಡಬೇಕಾಗುತ್ತೆ. ಆ ಬಾಕ್ಸ್ಗಳನ್ನ ಇಟ್ಕೊಂಡ್ ಮೇಲೆ ಏನು ಕೆಲಸ ಅಂತ ಹೇಳಿದ್ರೆ, ಸೋ ವಾರಕ್ಕೆ ಒಂದು ದಿನ ಒನ್ ಹವರ್ ಅದನ್ನ ಅಬ್ಸರ್ವ್ ಮಾಡಬೇಕಾಗುತ್ತೆ. ಅಬ್ಸರ್ವ್ ಮಾಡೋದ್ರಲ್ಲಿ ಮೊದಲನೆಯದು ಮುಖ್ಯವಾಗಿ ಇರುವೆಗಳು ಏನಾದ್ರೂನು ಕೆಳಗಡೆಯಿಂದ ಸ್ಟ್ಯಾಂಡ್ ನ ಮೇಲೆ ಕತ್ತುತ್ತಿದೆಯಾ ಅನ್ನೋದನ್ನ ಒಂದು ಅಬ್ಸರ್ವ್ ಮಾಡಬೇಕು. ಎರಡನೆಯದು ಅದು ಮುಂದಗಡೆ ಫ್ರಂಟ್ ಅಲ್ಲಿ ಹುಳಗಳು ಹೋಗ್ತಿರಬೇಕಾದ್ರೆ ಅದಕ್ಕೆ ಪರಾಗಗಳು ಕರೆಕ್ಟಾಗಿ ಸಿಕ್ತಿದೆಯಾ ಅಂದ್ರೆ ಫುಡ್ ಸೋರ್ಸ್ ಸಿಕ್ತಾ ಇದೆಯಾ ಅನ್ನೋದನ್ನ ಅಬ್ಸರ್ವ್ ಮಾಡಬೇಕು. ಮೂರನೆಯದು ಅದರ ಫ್ರೇಮ್ ನ ತೆಗೆದು ರಾಣಿ ಚೆನ್ನಾಗಿ ಮೊಟ್ಟೆನ ಹೆಲ್ದಿಯಾಗಿ ಇಡ್ತಾ ಇದೆಯಾ ಅನ್ನೋದನ್ನ ನೋಡಬೇಕು. ನಾಲ್ಕನೆಯದು ಬಾಟಂ ಬೋರ್ಡ್ ಅಂತ ಏನು ಹೇಳ್ತೀವಿ ಆ ಬಾಟಂ ಬೋರ್ಡ್ ನ ಕ್ಲೀನ್ ಆಗಿ ಇದೆಯಾ ಅನ್ನೋದನ್ನ ನೋಡಬೇಕು. ಕ್ಲೀನ್ ಇಲ್ಲ ಅಂದ್ರೆ ನಾವೇ ಅದನ್ನ ಕ್ಲೀನ್ ಮಾಡಬೇಕಾಗುತ್ತೆ. ಸೋ ಈ ರೀತಿಯಾಗಿ ಬೇಸಿಕ್ ಆಗಿ ನೋಡ್ಕೋಬೇಕಾಗುತ್ತೆ. ಇನ್ ಕೇಸ್ ಏನಾದ್ರೂನು ಫುಡ್ ಕಮ್ಮಿ ಇತ್ತು ಅಂತಂದ್ರೆ ಸಕ್ಕರೆ ಪಾಕನ ಕೊಡಬೇಕಾಗುತ್ತೆ. ಆ ಸಕ್ಕರೆ ಪಾಕ 1:1 ಅಂತ ಹೇಳ್ತೀವಿ ಆ ರೇಶಿಯೋದಲ್ಲಿ ಇರಬೇಕು. ಟಾಪ್ ಬೋರ್ಡ್ ನ ತೆಗೆದು ಅದರ ಒಳಗಡೆ ಇಟ್ಟು ನಾವು ಅದನ್ನ ಸಕ್ಕರೆ ಪಾಕನ ಕೊಡಬೇಕಾಗುತ್ತೆ. ಬೌಲ್ ಗೆ ಇಡ್ತೀವಿ. ಸೋ ಅದು ಇಡ್ಲಿ ಪಾತ್ರೆ ತರ ಇರಬೇಕು ಅಗಲವಾಗಿರಬೇಕು ಈ ತರ ಇರಬಾರದು. ಸೋ ಅಗಲವಾಗಿ ಇರಬೇಕು ಅದರೊಳಗಡೆ ತೆಂಗಿಂದು ಜುಂಗು ಆ ತರದ್ದು ಏನಾದ್ರೂ ಇಟ್ಟು ಕೊಡ್ತೀವಿ ಯಾಕೆ ಅಂದ್ರೆ ಜೇನು ಹುಳಗಳಿಗೆ ಸ್ವಿಮ್ಮಿಂಗ್ ಬರಲ್ಲ. ಹಾಗಾಗಿ ಕುಡಿಯೋಕೆ ಹೋಗ್ಬಿಟ್ಟು ಸತ್ತು ಹೋಗ್ಬಿಡುತ್ತವೆ. ಅದಕ್ಕೋಸ್ಕರ ಈ ರೀತಿಯಾಗಿ ಮೇಂಟೆನೆನ್ಸ್ ಮಾಡಬೇಕು. ಇದು ಪ್ರೊಸೀಜರ್. ಈ ತರ ಆದ್ಮೇಲೆ ಇದನ್ನೇ ವಾರ ವಾರ ವಾರ ವಾರ ನೋಡ್ತಿರ್ಬೇಕು. ಏನ್ ಆಗ್ತಿದೆ ಬರ್ತಾ ಇದೆ ಕಂಟಿನ್ಯೂ ಆಗ್ತಾ ಇದೆಯಾ ಅಂತ. ಸೊ ಕೆಳಗಡೆ ಹೆಲ್ದಿಯಾಗಿ ಕಂಟಿನ್ಯೂ ಆಗ್ತಾ ಇದೆ ಅಂತ ಗೊತ್ತಾದ್ಮೇಲೆ ನಾವು ಅದು ಇದರಲ್ಲಿ ಮೂರು ಸೀಸನ್ಸ್ ಬರುತ್ತೆ. ವರ್ಷದಲ್ಲಿ ಮೂರು ಸೀಸನ್. ನಮಗೆ ಹೇಗೆ ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಅಂತ ಇದೆಯೋ ಜೇನುಗಳಿಗೂ ಕೂಡ ಮೂರು ತರ ಬರುತ್ತೆ. ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್ ನಲ್ಲಿ ಸುಗ್ಗಿ ಕಾಲ ಅಂತ ಹೇಳ್ತೀವಿ. ಸೋ ಇವುಗಳಿಗೆ ಚೆನ್ನಾಗಿ ತುಪ್ಪ ಬರುವಂತಹ ಒಂದು ಕಾಲ. ನೆಕ್ಸ್ಟ್ ಏಪ್ರಿಲ್ ಆದ್ಮೇಲೆ ಮೇ, ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಇದಕ್ಕೆ ಅಭಾವ ಕಾಲ ಅಂತ ಹೇಳ್ತೀವಿ. ಸೋ ಮಳೆಗಾಲ ಸ್ಟಾರ್ಟ್ ಆಗಿರುತ್ತೆ ಇದಕ್ಕೆ ಊಟ ಸಿಗೋದಿಲ್ಲ. ನೆಕ್ಸ್ಟ್ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಅಂತ ನಾಲ್ಕು ತಿಂಗಳು ಟೈಮ್ ಏನು ಬರುತ್ತೆ ಆ ಟೈಮ್ ಅಲ್ಲಿ ಇದು ಅಭಿವೃದ್ಧಿ ಕಾಲ ಅಂತ ಹೇಳ್ತೀವಿ. ಅಭಿವೃದ್ಧಿ ಅಂದ್ರೆ ಒಂದು ಕುಟುಂಬನ ಇನ್ನೊಂದು ಕುಟುಂಬ ಮಾಡ್ಕೊಳ್ಳುವಂತದ್ದು ಬರುತ್ತೆ. ನಾವು ಯಾವ ಸೀಸನ್ನಲ್ಲಿ ಇದ್ದೀವಿ ಏನ್ ಮಾಡ್ಬೇಕು ಅನ್ನೋದು ತುಂಬಾ ಮುಖ್ಯ ಆಗುತ್ತೆ. ಸೋ ಜೇನು ಅನ್ನೋದು ಸುಗ್ಗಿ ಕಾಲದಲ್ಲಿ ನಮಗೆ ಜೇನುತುಪ್ಪ ಸಿಗುತ್ತೆ. ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್ ನಲ್ಲಿ ನಾಲ್ಕು ತಿಂಗಳಲ್ಲಿ ಒಂದು ತಿಂಗಳು ಹೆಚ್ಚು ಕಮ್ಮಿ ಮೇಲೆ ಕೆಳಗಡೆ ಆಗಬಹುದು. ಆ ಟೈಮ್ ಅಲ್ಲಿ ನಮಗೆ ಸುಗ್ಗಿ ಕಾಲ ಆಗಿರೋದ್ರಿಂದ ತುಪ್ಪ ಸಿಗುತ್ತೆ. ತುಪ್ಪನ ಅದು ಇಟ್ಕೊಂಡಿದ್ದು ಏನ್ ಅಂತ ಕೇಳಿದ್ರೆ ಈ ಒಂದು ಜನವರಿ ನಾಲ್ಕು ತಿಂಗಳಲ್ಲಿ ಮುಂದಿನ ಬರ್ತಾ ಇರ್ತಕ್ಕಂತ ಟೈಮ್ಗಳಲ್ಲಿ ಅದಕ್ಕೆ ಅಭಾವ ಕಾಲ ಬರುತ್ತೆ. ಆ ಅಭಾವ ಕಾಲದಲ್ಲಿ ಅದು ಬಳಸಿಕೊಳ್ಳುವುದಕ್ಕೋಸ್ಕರ ಊಟನ ಅದು ಸ್ಟೋರ್ ಮಾಡಿ ಇಟ್ಕೊಂಡಿದ್ದು ಪ್ರೀ ಪ್ಲಾನ್ ಮಾಡಿ. ನಾವೇನು ಮಾಡ್ತಾ ಇದೀವಿ ಅದನ್ನ ಕದಿತಾ ಇದೀವಿ. ಸೋ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್ ಏನ್ ಮಾಡ್ತಾ ಇದೀವಿ ಜೇನುತುಪ್ಪನ ಕದಿತಾ ಇದೀವಿ. ಸೋ ಅದರ ಬದಲಿಗೆ ನಾವು ರಿಪ್ಲೇಸ್ ಆಗಿ ಅದು ಬೇಕಾಗಿರೋದಕ್ಕೋಸ್ಕರ ಅದು ಉಳಿಯೋದಕ್ಕೋಸ್ಕರ ಅದಕ್ಕೆ ಸಕ್ಕರೆ ಪಾಕನ ನಾವು ನಾಲ್ಕು ತಿಂಗಳು ಕೊಡ್ತೀವಿ. ಸೋ ಮೇ, ಜೂನ್, ಜುಲೈ, ಆಗಸ್ಟ್ ಅಲ್ಲಿ ಅದಕ್ಕೆ ಸಕ್ಕರೆ ಪಾಕನ ಬದಲಿಗೆ ಕೊಡ್ತಾ ಹೋಗೋದು ಯಾಕೆ ಅಂದ್ರೆ ಆ ಟೈಮ್ ಅಲ್ಲಿ ಮಳೆಗಾಲ ಜಾಸ್ತಿ ಇರುತ್ತೆ. ಹೊರಗಡೆ ಹೋಗಿ ಊಟ ತರೋದಕ್ಕೆ ಸಾಧ್ಯತೆಗಳು ಕಮ್ಮಿ ಇರುತ್ತೆ. ಹಾಗಾಗಿ ನಾವೇ ನ್ಯಾಚುರಲ್ ಆಗಿ ಊಟ ಕೊಡ್ತೀವಿ. ಅದಾದ್ಮೇಲೆ ಅಭಿವೃದ್ಧಿ ಕಾಲ ಅಂತ ಬಂದಾಗ ಡಿವಿಷನ್ ಟೈಮ್ ಅಂತ ಬಂದಾಗ ನಾವು ಒಂದು ಕುಟುಂಬನ ಎರಡು ಕುಟುಂಬ ಅಥವಾ ಮೂರು ಕುಟುಂಬವಾಗಿ ಮಾಡ್ತಾ ಹೋಗ್ತೀವಿ. ಆಗ ಏನಾಗುತ್ತೆ ನಮಗೆ ಒಂದು ಬಾಕ್ಸ್ ಇರೋದು ಎರಡು ಬಾಕ್ಸ್ ಆಗುತ್ತೆ ಅಥವಾ ಮೂರು ಬಾಕ್ಸ್ ಆಗುತ್ತೆ. 50 ಬಾಕ್ಸ್ ಇಟ್ಟಿಕೊಂಡಿದ್ರೆ 100 ಬಾಕ್ಸ್ ಅಥವಾ 150 ಬಾಕ್ಸ್ ಆಗುತ್ತೆ. 500 ಇಟ್ಟಿದ್ರೆ 1000 ಅಥವಾ 1,500 ಆಗುತ್ತೆ. ಇಷ್ಟು ಮಾಡೋದಕ್ಕೆ ಅದು ಹೆಲ್ಪ್ ಆಗುತ್ತೆ. ಆ ಒಂದು ನಾಲ್ಕು ತಿಂಗಳಲ್ಲಿ ನಾವು ಎರಡು ಸಾರಿ ಕೂಡ ಡಿವಿಷನ್ ಮಾಡ್ತಾರೆ ಕೆಲವರು ಎಕ್ಸ್ಪರ್ಟ್ಸ್ ಇರುವಂತವರು ಕೆಲವರು ಒಂದು ಸಾರಿ ಕೂಡ ಡಿವಿಷನ್ ನ ಮಾಡ್ತೀವಿ. ಸೋ ಈ ರೀತಿಯಲ್ಲಿ ಅಭಿವೃದ್ಧಿ ಆಗುತ್ತೆ. ಸೋ ಟೋಟಲ್ ಆಗಿ ಇಷ್ಟು ಮಾಡ್ತಾ ಹೋಗಬಹುದು. ಇದಾದ್ಮೇಲೆ ಹನಿ ತೆಗೆಯುವಂತಹ ಟೈಮ್ ಅಲ್ಲಿ ನಾವು ಹನಿ ಎಕ್ಸ್ಟ್ರಾಕ್ಟರ್ ಅಲ್ಲಿ ಹನಿ ತಗಿತಾ ಹೋಗ್ತೀವಿ. ಡಿವಿಷನ್ ಟೈಮ್ ಅಲ್ಲಿ ಡಿವಿಷನ್ ಮಾಡ್ತಾ ಹೋಗ್ತೀವಿ. ಯಾವಾಗ ನಮಗೆ ಅಭಾವ ಕಾಲ ಬರುತ್ತೆ ಸಕ್ಕರೆ ಪಾಕನ ಕೊಡ್ತೀವಿ ಇದು ತುಂಬಾ ಮುಖ್ಯ ಆಗುತ್ತೆ. ವರ್ಷ ಪೂರ್ತಿನೂ ವಾರ ವಾರ ವಾರ ಒನ್ ಒನ್ ಹವರ್ ಕೆಲಸ ಮಾಡಿದ್ರೆ ಜೇನು ಕೃಷಿಯಿಂದ ಅಭಿವೃದ್ಧಿ ಹೊಂದಬಹುದು. ಎಕ್ಸಾಂಪಲ್ ಇದರಲ್ಲಿ ಒಂದು ಬಾಕ್ಸ್ ನಲ್ಲಿ ಎಷ್ಟು ತುಪ್ಪ ತೆಗಿಬಹುದು ಅನ್ನೋದು ನೆಕ್ಸ್ಟ್ ಕ್ವೆಶ್ಚನ್ ಇರುತ್ತೆ. ಒಂದು ಬಾಕ್ಸ್ ನಲ್ಲಿ ಒಂದು ಫ್ರೇಮ್ ಅಂತ ಬಂದ್ರೆ ಒಂದು 150 ರಿಂದ 200 ಗ್ರಾಂ ಬರುತ್ತೆ ಅದರಲ್ಲಿ. ಅಂತಹದ್ದು ಎಷ್ಟು ಫ್ರೇಮ್ ಬಾಕ್ಸ್ ಇಟ್ಟುಕೊಂಡಿದ್ದೀವಿ ಅನ್ನೋದು ಮುಖ್ಯ ಆಗುತ್ತೆ. ಐದು ಫ್ರೇಮ್ ಇಟ್ಟಿದ್ದೀವಾ ಆರು ಫ್ರೇಮ್ ಇಟ್ಟಿದ್ದೀವಾ ಅನ್ನೋದು ಮುಖ್ಯ ಆಗುತ್ತೆ. ಆ ರೀತಿ ಲೆಕ್ಕ ಹಾಕೊಂಡಾಗ ಅವರಂಡವರೇಜ್ ಆನ್ ಅಂಡ್ ಅವರೆಜ್ ತಗೊಂಡಾಗ ಒಂದು ಕುಟುಂಬದಿಂದ ನಾವು 2 ಕೆಜಿ ಇಂದ 6 ಕೆಜಿ, 8 ಕೆಜಿ ವರೆಗೂ ಕೂಡ ತಗೋಬಹುದು. ಇದು ಡಿಪೆಂಡ್ ಆಗೋದು ಹೇಗೆ ಅಂದ್ರೆ ಮತ್ತೆ ಫ್ಯಾಮಿಲಿ ಎಷ್ಟು ಸ್ಟ್ರೆಂತ್ ಇದೆ ಅನ್ನೋದರ ಮೇಲೆ ಡಿಪೆಂಡ್ ಆಗುತ್ತೆ. ಸುತ್ತಮುತ್ತ ಇರುವಂತಹ ಫ್ಲವರ್ಸ್ ಮೇಲೆ ಅದು ಡಿಪೆಂಡ್ ಆಗುತ್ತೆ. ಈ ತರ ನಾವು 1 ಕೆಜಿ ನ 500 ರೂಪಾಯಿ ಕೂಡ ಸೇಲ್ ಮಾಡ್ತು ಅಂತಂದ್ರೆ ಆನ್ ಅಂಡ್ ಅವರೆಜ್ 5 ಕೆಜಿ ಇಂದ ತಗೊಂಡ್ರು 500 600 ರೂಪಾಯಿ ಕೂಡ ಸೇಲ್ ಮಾಡಬಹುದು. ಒಂದು 2,500 ರಿಂದ 3,000 ರೂಪಾಯಿ ಒಂದು ಕುಟುಂಬದಿಂದ ಒಂದು ಸಾರಿ ಜೇನು ತುಪ್ಪ ತೆಗೆದಾಗ ಸಿಗುತ್ತೆ. ಇದು ಅಲ್ಲದೆ ಮುಂದಿನ ದಿನಗಳಲ್ಲಿ ನಾವು ಇದನ್ನ ಅಭಿವೃದ್ಧಿ ಟೈಮ್ ಅಲ್ಲಿ ನಾವು ಭಾಗಗಳನ್ನ ಮಾಡ್ಕೊಂಡಾಗ ಒಂದು ಕುಟುಂಬನ ಕಮ್ಮಿ ಅಂದ್ರೂನು 1,500 ರಿಂದ 2,000 ರೂಪಾಯಿಗೆ ನಾವು ಒಂದು ಫ್ಯಾಮಿಲಿನ ನಾವು ಸೇಲ್ ಮಾಡೋದ್ರಿಂದ ನಮಗೆ ಅದರಿಂದ ಇನ್ನೂ ಹೆಚ್ಚಿನ ರೀತಿನಲ್ಲಿ ಸಿಗ್ತಾ ಹೋಗುತ್ತೆ. ಎಕ್ಸಾಂಪಲ್ ಎರಡು ಸತಿ ಸೇರಿ ಡಿವಿಷನ್ ಮಾಡ್ತೀವಿ ಅಂತ ಹೇಳಿದ್ರೆ ಒಂದು ಬಾಕ್ಸ್ ಗೆ 1,500 ಅಂತ ಹೇಳಿದ್ರೆ ಎರಡು ಸತಿಗೆ ನಮಗೆ 3,000 ಸಿಗುತ್ತೆ. ಅಟ್ಲೀಸ್ಟ್ 3,000. ಸೋ ನಮ್ಮ ಅಸಲು ಹಾಗೆ ಇರುತ್ತೆ ಬಡ್ಡಿ ಮಾತ್ರ ತಗೊಂಡಿರ್ತೀವಿ. ಈ ರೀತಿ ವರ್ಷಕ್ಕೆ ಒಂದು ಬಾಕ್ಸ್ ಇಂದ ಒಂದು 5,000 ರೂಪಾಯಿ ನಾವು ಅದನ್ನ ಈ ಜೇನು ತುಪ್ಪ ಜೊತೆಗೆ ಇದು ಇಷ್ಟನ್ನೆಲ್ಲದರಿಂದನೂ ಅಷ್ಟಂತೂ ಮಿನಿಮಮ್ ಅಟ್ಲೀಸ್ಟ್ ಅಂತನೂ ನಾವು ಕೂಡ ಅದನ್ನ ಅರ್ನ್ ಮಾಡಬಹುದು. ಈಗ ನಮಗೆ ಎಷ್ಟು ಟೋಟಲ್ ಎಷ್ಟು ಅರ್ನಿಂಗ್ಸ್ ಬೇಕು ಅನ್ನೋದರ ಮೇಲೆ ನೀವು ಎಷ್ಟು ಬಾಕ್ಸ್ ಇಡ್ತೀರಾ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಇದರಲ್ಲಿ ಇನ್ನು ಹೆಚ್ಚಿನ ರೀತಿನಲ್ಲಿ ಚೆನ್ನಾಗಿ ಆಗ್ಬೇಕು ಅನ್ನೋದಾದ್ರೆ ನೀವು ಇದನ್ನ ಮೈಗ್ರೇಶನ್ ನ ಮಾಡ್ತಾ ಹೋದ್ರೆ ಅಂದ್ರೆ ಬೇರೆ ಬೇರೆ ಸ್ಥಲಾಂತರವಾಗಿ ಜೇನು ಕೃಷಿ ಮಾಡ್ತಾ ಹೋದ್ರೆ ಫ್ಲವರ್ಸ್ ಇರುವಂತ ಟೈಮ್ಗಳಲ್ಲಿ ಹೆಚ್ಚೆಚ್ಚಾಗಿ ಇಟ್ಟರೆ ನೀವು ತುಪ್ಪನ ನಾನು ಏನು ಹೇಳಿದೆ ಅದರ ಡಬಲ್ ತೆಗಿಬಹುದು. ಕುಟುಂಬ ಏನು ಹೇಳಿದೆ ಅದಕ್ಕೆ ಡಬಲ್ ಮಾಡ್ಕೋಬಹುದು. ನಿಮ್ಮ ಇನ್ಕಮ್ ಡಬಲ್ ಆಗುತ್ತೆ. ಈ ರೀತಿಯಲ್ಲಿ ಎಲ್ಲವೂ ಕೂಡ ಮಾಡ್ಕೋಬಹುದು. ಇದು ಟೋಟಲಿ ಪ್ರೊಸೀಜರ್. ಇದನ್ನ ವರ್ಷ ವರ್ಷ ಹೆಚ್ಚಿಸಿಕೊಳ್ತಾ ಹೆಚ್ಚಿಸಿಕೊಳ್ತಾ ತುಪ್ಪಗಳನ್ನ ಮಾರ್ತಾ ಮಾರ್ತಾ ಕುಟುಂಬಗಳನ್ನ ಮಾರ್ತಾ ಮಾರ್ತಾ ಇದರಲ್ಲಿ ಬರುವಂತಹ ಜೇನು ತುಪ್ಪ, ಮೇಣ ಈ ತರದ್ದು ಆ ತರದ್ದು ಎಲ್ಲ ಎಲ್ಲ ಟೋಟಲ್ ಬರುತ್ತೆ ಅದನ್ನೆಲ್ಲದನ್ನು ಸೇಲ್ ಮಾಡ್ತಾ ನಾವು ಇದನ್ನ ಕಂಟಿನ್ಯೂ ಮಾಡ್ತಾ ಹೋಗಬಹುದು ಇದರಲ್ಲಿ ಬೆಳೆತಾ ಹೋಗಬಹುದು. ಟೋಟಲ್ ಆಗಿ ಹೇಳ್ಬೇಕು ಅಂತ ಅಂದ್ರೆ ಕಲ್ಪವೃಕ್ಷ ಅಂತ ತೆಂಗುಗೆ ಹೇಳ್ತಿವಿ ಹಸುಗೆ ಕಾಮದೇನು ಅಂತ ಹೇಳ್ತೀವಿ ಮೂರನೇದು ಬಾಳೆನಲ್ಲೂ ಕೂಡ ಎಲ್ಲದನ್ನು ಸಿಗುತ್ತೆ ನಾಲ್ಕನೇದು ಅಂತ ನನಗೆ ಗೊತ್ತಿರೋದಾದ್ರೆ ಅದು ಜೇನು. ಜೇನಲ್ಲಿ ಸಿಗುವಂತದ್ದು ಎಲ್ಲೂನು ಯಾವುದುನು ಕೂಡ ವೇಸ್ಟ್ ಅನ್ನೋದು ಇಲ್ವೇ ಇಲ್ಲ. ಸೋ ಹಾಗಾಗಿ ಎಲ್ಲಾದೂ ಬೆನಿಫಿಟ್ ಸಿಗುತ್ತೆ. ಇಷ್ಟು ಇನ್ನು ಮುಂದಿನ ದಿನಗಳಲ್ಲಿ ಇನ್ನು ಒಂದಷ್ಟು ವಿಷಯಗಳನ್ನ ತಿಳ್ಕೊಳ್ತಾ ಹೋಗೋಣ. ಈ ರೀತಿ ಪ್ರೊಸೀಜರ್ ನ ಮಾಡ್ಕೊಳ್ತಾ ಜೇನು ಕೃಷಿ ನ ಲಾಭದಾಯಕ ಅನ್ನೋದು ನನ್ನ ಒಂದು ಅಭಿಪ್ರಾಯ ನಮಸ್ಕಾರ.

Need another transcript?

Paste any YouTube URL to get a clean transcript in seconds.

Get a Transcript