Thumbnail for ಇಷ್ಟು ದಿನ ನಾನೂ ಮಲಗಿದ್ದೆ..! ಇನ್ಮುಂದೆ ಸುಮ್ಮನೆ ಕೂರೋನಲ್ಲ! | Sandeep Patil| Gaurish Akki Studio by Gaurish Akki Studio

ಇಷ್ಟು ದಿನ ನಾನೂ ಮಲಗಿದ್ದೆ..! ಇನ್ಮುಂದೆ ಸುಮ್ಮನೆ ಕೂರೋನಲ್ಲ! | Sandeep Patil| Gaurish Akki Studio

Gaurish Akki Studio

10m 15s1,191 words~6 min read
YouTube auto captions
Transcript source

YouTube auto captions

This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.

Timestamped outline
Pull quotes
[0:00]ಸುಮಾರು 154 ಹಳ್ಳಿಗಳು ಏನಿದೆ ಆ ಹಳ್ಳಿಗಳಿಗೆ ಭೇಟಿ ಕೊಡುವಂತ ಪ್ರಯತ್ನವನ್ನು ಮಾಡ್ತಾ ಇದ್ದಾರೆ.
[0:20]ಆ ನಾಯಕತ್ವದ ಕೊರತೆಯನ್ನು ತುಂಬುವಂತ ಪ್ರಯತ್ನ ಅಥವಾ ನೀವು ನಾಯಕರಾಗಲು ಮಾಡುತ್ತಿರುವಂತಹ ಪ್ರಯತ್ನ ಅಂತ ಅನ್ಸುತ್ತೆ, ಹೌದು.
[0:30]ಬಿಜೆಪಿನೋ ಕಾಂಗ್ರೆಸ್ಸೋ ಅಥವಾ ಯಾವುದೇ ಪಕ್ಷ ಟಿಕೆಟ್ ಕೊಡಬಹುದು ಅಥವಾ ಇಂಡಿಪೆಂಡೆಂಟ್ ಆಗಿ ನಿಲ್ಲಬಹುದು.
[1:05]ಸ್ನೇಹಿತರೆ, ಇವತ್ತು ನಮ್ಮ ಸ್ಟುಡಿಯೋದಲ್ಲಿ ಒಬ್ಬ ವಿಶೇಷ ವ್ಯಕ್ತಿ ಅನ್ನೋದಕ್ಕಿಂತ ಹೆಚ್ಚಾಗಿ ವಿಶೇಷ ಕೆಲಸವನ್ನ ಕೈಗೆತ್ತಿಕೊಂಡಿರುವಂತಹ ಒಬ್ಬ ವ್ಯಕ್ತಿ ಇದ್ದಾರೆ ಅಂತ ನನಗೆ ಅನ್ಸುತ್ತೆ.
Use this transcript
Related transcript hubs

[0:00]ಸುಮಾರು 154 ಹಳ್ಳಿಗಳು ಏನಿದೆ ಆ ಹಳ್ಳಿಗಳಿಗೆ ಭೇಟಿ ಕೊಡುವಂತ ಪ್ರಯತ್ನವನ್ನು ಮಾಡ್ತಾ ಇದ್ದಾರೆ. ಪ್ರಯತ್ನ ಅಲ್ಲ, ಅವರು ಭೇಟಿ ಕೊಡ್ತಾ ಇದ್ದಾರೆ. ಮತ್ತು ಒಂದು ಸಂಘಟನೆ ಹುಟ್ಟು ಹಾಕಿದ್ದಾರೆ ಅದರ ಹೆಸರು 'ನಮ್ಮೂರು ನಮ್ಮವರು' ಅಂತ.

[0:20]ಆ ನಾಯಕತ್ವದ ಕೊರತೆಯನ್ನು ತುಂಬುವಂತ ಪ್ರಯತ್ನ ಅಥವಾ ನೀವು ನಾಯಕರಾಗಲು ಮಾಡುತ್ತಿರುವಂತಹ ಪ್ರಯತ್ನ ಅಂತ ಅನ್ಸುತ್ತೆ, ಹೌದು.

[0:30]ಬಿಜೆಪಿನೋ ಕಾಂಗ್ರೆಸ್ಸೋ ಅಥವಾ ಯಾವುದೇ ಪಕ್ಷ ಟಿಕೆಟ್ ಕೊಡಬಹುದು ಅಥವಾ ಇಂಡಿಪೆಂಡೆಂಟ್ ಆಗಿ ನಿಲ್ಲಬಹುದು. ಸೋ ಆ ಥರ ಒಂದು ಅವಕಾಶ ಬಂದರೆ ನೀವು ಅದಕ್ಕೆ ರೆಡಿ ಇದ್ದೀರಾ?

[0:43]ನೋಡಿ ನಮ್ಮ ಮನೆಯಲ್ಲಿ ಒಂದು 50 ಜನನೋ 100 ಜನ ಕೂತ್ಕೊಂಡಿದ್ದೀವಿ. ನೀವು ಎಷ್ಟು ಕೊಡ್ತೀರಾ ನಮಗೆ?

[0:51]ಅಥವಾ ನಿಮ್ಮಿಂದ ನಿರೀಕ್ಷೆಗಳು ಇರಬಹುದು ಅವರಿಗೆ ಅಲ್ವಾ? ಓ ಇವರಹತ್ರ ಹೋದರೆ ನನಗೆ ಏನೋ ಒಂದು ಸಿಗುತ್ತೆ ಅನ್ನೋದು.

[1:05]ಸ್ನೇಹಿತರೆ ನಮಸ್ಕಾರ, ಗೌರೀಶ ಅಕ್ಕಿ ಸ್ಟುಡಿಯೋ ದ ಈ ವಿಶೇಷ ಸಂವಾದಕ್ಕೆ ನಿಮಗೆಲ್ಲ ಸ್ವಾಗತ. ನಾನು ಗೌರೀಶ ಅಕ್ಕಿ. ಸ್ನೇಹಿತರೆ, ಇವತ್ತು ನಮ್ಮ ಸ್ಟುಡಿಯೋದಲ್ಲಿ ಒಬ್ಬ ವಿಶೇಷ ವ್ಯಕ್ತಿ ಅನ್ನೋದಕ್ಕಿಂತ ಹೆಚ್ಚಾಗಿ ವಿಶೇಷ ಕೆಲಸವನ್ನ ಕೈಗೆತ್ತಿಕೊಂಡಿರುವಂತಹ ಒಬ್ಬ ವ್ಯಕ್ತಿ ಇದ್ದಾರೆ ಅಂತ ನನಗೆ ಅನ್ಸುತ್ತೆ. ಸೋ ಅವರ ಹೆಸರು ಸಂದೀಪ್ ಪಾಟೀಲ್ ಅಂತ. ಸಂದೀಪ್ ಪಾಟೀಲ್ ಅವರು ನನಗೆ ಪರಿಚಯ ಒಬ್ಬ ಪತ್ರಕರ್ತನಾಗಿ ಹೇಗೆ ಅಂತಂದರೆ ಒಬ್ಬ ಖ್ಯಾತ ನ್ಯಾಯವಾದಿ. ಖ್ಯಾತ ವಕೀಲರು. ಕಳೆದ 20 ವರ್ಷಗಳಿಂದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ತಮ್ಮ ವಕೀಲಿ ವೃತ್ತಿಯನ್ನ ಮಾಡಿಕೊಂಡು ಬಂದಿದ್ದಾರೆ. ಸಾಕಷ್ಟು ಹೈಪ್ರೊಫೈಲ್ ಕೇಸ್ ಗಳನ್ನು ಅವರು ಫೈಟ್ ಮಾಡಿದ್ದಾರೆ. ಸಾಕಷ್ಟು ಕಾಂಟ್ರವರ್ಸಿಗಳ ಮಧ್ಯೆ. ಇನ್ ದ ಸೆನ್ಸ್ ಕಾಂಟ್ರವರ್ಸಿಯಲ್ ಕೇಸ್ ಗಳ ಮಧ್ಯೆ ಅವರು ಇರ್ತಾರೆ. ಅದೆಲ್ಲವನ್ನೂ ಕೂಡ ನಾನು ನೋಡಿದ್ದೀನಿ. ಕಳೆದ ಒಂದು ವರ್ಷದ ಹಿಂದೆ ನಾನು ಅವರ ಸಂದರ್ಶನ ಕೂಡ ಮಾಡಿದ್ದೆ. ಅದಾದ ನಂತರನೂ ಅಥವಾ ಅದೇ ಸಂದರ್ಭದಲ್ಲೂ ಗೊತ್ತಿಲ್ಲ ನನಗೆ ಅವರು ದಾರಿಯನ್ನು ಸ್ವಲ್ಪ ಚೇಂಜ್ ಮಾಡಿಕೊಂಡು ವಾಪಸ್ ತಮ್ಮ ಹಳ್ಳಿಗೆ ಹೋಗಿ ಅವರ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಅಥವಾ ಹಾನಗಲ್ ತಾಲೂಕಿನ ಸುಮಾರು 154 ಹಳ್ಳಿಗಳು ಏನಿದೆ ಆ ಹಳ್ಳಿಗಳಿಗೆ ಭೇಟಿ ಕೊಡುವಂತಹ ಪ್ರಯತ್ನವನ್ನು ಮಾಡ್ತಾ ಇದ್ದಾರೆ. ಪ್ರಯತ್ನ ಅಲ್ಲ ಅವರು ಭೇಟಿ ಕೊಡ್ತಾ ಇದ್ದಾರೆ. ಮತ್ತು ಒಂದು ಸಂಘಟನೆ ಹುಟ್ಟುಹಾಕಿದ್ದಾರೆ ಅದರ ಹೆಸರು ನಮ್ಮೂರು ನಮ್ಮವರು ಅಂತ. ಇದರ ಹಿಂದೆ ಏನು ಉದ್ದೇಶ ಇದೆ? ಯಾಕೆ ಬೆಂಗಳೂರಿನ ಈ ಒಂದು ಸುಖದಾಯಕ ಜೀವನ ಬಿಟ್ಟು ಹಳ್ಳಿಗೆ ಬಿಸಿಲಿಗೆ ಹೋಗುವಂತ ಪ್ರಯತ್ನ ಮಾಡ್ತಾ ಇದ್ದೀರಾ? ದೂರದಲ್ಲಿ ಏನಾದರೂ ಅವರಿಗೆ ಕಾಣ್ತಾ ಇದೆ ನಮಗೆ ಕಾಣದೆ ಇರೋದು? ಸೋ ಈ ಎಲ್ಲಾ ವಿಚಾರಗಳನ್ನ ನಾನು ಇವತ್ತು ಅವರ ಜೊತೆ ಮಾತಾಡಕ್ಕೆ ಕೂತ್ಕೊಂಡಿದ್ದೀನಿ. ಬನ್ನಿ ಹಾಗಾದರೆ ಸ್ವಾಗತಿಸೋಣ ಸಂದೀಪ್ ಪಾಟೀಲ್ ಅವರನ್ನ. ಸಂದೀಪ್ ಪಾಟೀಲ್ ಸರ್ ನಮಸ್ಕಾರ. ನಮಸ್ಕಾರ. ವೆಲ್ಕಮ್ ಟು ದಿ ಶೋ. ನಾನು ಈಗಾಗಲೇ ಹೇಳಿರುವ ಹಾಗೆ ನಾನು ನಮ್ಮೂರು ನಮ್ಮವರು ಇಲ್ಲಿಂದಾನೆ ಶುರು ಮಾಡ್ತೀನಿ. ನಮ್ಮ ಎದುರುಗಡೆ ಈ ಒಂದು ಫ್ಲಾಗ್ ಗಳನ್ನು ಕೂಡ ಮಾಡಿದೀರಿ. ಈ ಫ್ಲಾಗ್ ಒಂದು ಸಂಘಟನೆ ಅಂದ ತಕ್ಷಣ ನಮಗೆ ಒಂದು ಚಿತ್ರಣ ನಮ್ಮ ತಲೆಯಲ್ಲಿ ಬರುತ್ತೆ ಅಲ್ವಾ? ಜನಸಾಮಾನ್ಯರ ತಲೆಯಲ್ಲಿ ನಾನೊಬ್ಬ ಜನಸಾಮಾನ್ಯನ ರೆಪ್ರೆಸೆಂಟೇಟಿವ್ ಆಗಿ ಅಥವಾ ಅವರ ಮನಸ್ಸಿನಲ್ಲಿ ಇರುವ ಪ್ರಶ್ನೆಗಳನ್ನು ಕೇಳಕ್ಕೆ ಪ್ರಯತ್ನ ಪಡುತ್ತೇನೆ. ಬಟ್ ಒಂದೇನೆ ಅಂದ್ರೆ ಅದರ ಹಿಂದಿನ ಉದ್ದೇಶ ಕೇಳೋಕಿನ ಮುಂಚೆ ಎಲ್ಲರಿಗೂ ನಮ್ಮ ಊರಿಗೆ ಹೋಗ್ಬೇಕು ಅಂತ ಇರುತ್ತೆ. ಎಲ್ಲರಿಗೂ ನಮ್ಮವರ ಜೊತೆ ಬೆರಿಬೇಕು ಅಂತ ಇರುತ್ತೆ. ಬಟ್ ಬಹಳ ಕಡಿಮೆ ಜನಕ್ಕೆ ಅದು ಸಾಧ್ಯ ಆಗುತ್ತೆ. ನೀವು ಮಾಡ್ತಾ ಇದ್ದೀರಾ ಏನು ಏನು ಉದ್ದೇಶ? ನಾನು ಸುಮಾರು 20 ವರ್ಷದ ಅವಧಿಯಲ್ಲಿ ನಾನು ವೃತ್ತಿ ಜೀವನದಲ್ಲೇ ಇದ್ದಂತವನು. ಆದರೆ 20 ವರ್ಷದ ಹಿಂದೆ ನಾನು ಹುಟ್ಟಿ ಬೆಳೆದಿದ್ದು ಈಗಲೂ ತೋಟ ಮನೆ ಎಲ್ಲಾ ಇರೋದು ಹೊಲ ಗದ್ದೆ ಇರೋದೆಲ್ಲ ಹಾನಗಲ್ ತಾಲೂಕಿನ ಕಿರವಾಡಿ ಅನ್ನುವಂತ ಒಂದು ಗ್ರಾಮದಲ್ಲಿ. ನಮ್ಮ ಚಿಕ್ಕಪ್ಪಂದಿರ ಜೊತೆ ಆಟ ಆಡಿದರೆ ಇರಬಹುದು ನಮ್ಮ ಮಾಮನ್ರ ಜೊತೆ ಇರಬಹುದು ನಮ್ಮ ಅಜ್ಜ ಅಜ್ಜಿಗಳು ಇರಬಹುದು. ನಿಮ್ಮ ತಾಯಿ ಊರು ಅಲ್ಲೇನಾ? ಹಾ, ನಮ್ಮ ತಾಯಿ ಊರು ಕೂಡ ಕಿರವಾಡಿ. ಆದ್ರೆ ನಮ್ಮ ತಂದೆ ಅವರ ಅಕ್ಕನ ಮಗಳನ್ನೇ ಮದುವೆಯಾಗಿದ್ದಾರೆ. ಇಬ್ಬರು ಊರು ಕಿರವಾಡಿ ಅಂತ ಹೇಳಬಹುದು. ಓಕೆ ಓಕೆ. ಸೋ ನಾನು ಅಲ್ಲೇ ಹುಟ್ಟಿ ಬೆಳೆದಿದ್ದಂತ ಹುಡುಗ. 20 ವರ್ಷದಲ್ಲಿ ನನಗೆ ಹಾನಗಲಿಗೆ ಎಕ್ಸ್ಪೋಷರ್ ಎಷ್ಟು ಅಂತ ತಾವು ಕೇಳಿದರೆ ಕೋರ್ಟಿನ ರಜಾದಿನಗಳಲ್ಲಿ ಅಥವಾ ಐದು ವರ್ಷಕ್ಕೊಂದು ಸತಿ ವೋಟ್ ಹಾಕುವಂತಹ ಸಂದರ್ಭದಲ್ಲಿ ಇಷ್ಟು ಬಿಟ್ಟರೆ ಅಲ್ಲಿಯ ರಾಜಕಾರಣಕ್ಕಾಗಲಿ ಅಥವಾ ತಾಲೂಕಿನ ಅಭಿವೃದ್ಧಿ ಬಗ್ಗೆ ಆಗಲಿ ಯಾವುದೇ ರೀತಿಯಂತಹ ಅಷ್ಟು ಉತ್ಸಾಹ ಇರಲಿಲ್ಲ ಅಥವಾ ನಾನು ಅದರ ಬಗ್ಗೆ ಗಮನ ಕೂಡ ಹರಿಸಿರಲಿಲ್ಲ.

[4:18]ಎಸ್. ಅದು ತಪ್ಪು ಅಂತ ಈಗ ಅನ್ನಿಸ್ತಾ ಇದೆ. ಒಬ್ಬ ಹಾನಗಲಿನ ನಾಗರಿಕನಾಗಿ ನಾನು ಹರಿಸಬೇಕಾಗಿತ್ತು ಅಂತ ಈಗ ನನಗೆ ರಿಗ್ರೆಟ್ ಆಗ್ತಾ ಇದೆ. ಇದನ್ನು ಮುಂಚೆನೇ ಮಾಡಬೇಕಾಗಿತ್ತು. ಆಯ್ತು ಮುಂಚೆ ಮಾಡಿಲ್ಲ, ತಪ್ಪಾಯ್ತು. ಈಗಲೂ ಮಾಡದೆ ನಾನು ಸುಮ್ಮನೆ ಇದ್ದುಬಿಟ್ಟರೆ ಈ ನಿರಾಶಾಭಾವನೆಯಲ್ಲೇ ನಾವು ಹೊರಟು ಹೋಗಿಬಿಡ್ತೀನೆನೋ ಅನ್ನುವಂತ ಒಂದು ಸಮಸ್ಯೆ ನನಗೆ ಕಾಡಿರೋದರಿಂದ ನಮ್ಮ ಜನಕ್ಕೆ ಆಗಲಿ ಅಥವಾ ನನ್ನ ಜೊತೆಗೆ ಹುಟ್ಟಿ ಬೆಳೆದಿದ್ದಂತ ನಮ್ಮ ಸಂಗಾತಿಗಳಿಗೆ ಆಗಲಿ ಸ್ನೇಹಿತರಿಗಾಗಲಿ ಅಥವಾ ನಮ್ಮೂರಿನ ಜನರಿಗೋಸ್ಕರ ನಾನೊಬ್ಬ ಅವರಲ್ಲಿ ಒಬ್ಬನಾಗಿ ಏನು ಮಾಡಬಹುದು? ಓಕೆ. ಈಗ ಹೇಳ್ತಾರಲ್ಲ ಬಿ ದ ಚೇಂಜ್ ಯು ವಾಂಟ್ ಟು ಬ್ರಿಂಗ್. ಎಸ್. ಬೇರೆಯವರಿಗೆ ನೀನು ಬದಲಾವಣೆಯಾಗಿ ಅನ್ನೋಕಿನ ಮುಂಚೆ ನಾನು ಬದಲಾವಣೆಯಾಗಿ ಪ್ರಯತ್ನ ಪಡಬೇಕು. ಅದು ತೋರಿಸಿದ ನಂತರ ನಾವು ಬೇರೆಯವರಿಗೆ ನೀವು ಆದರಪ್ಪ ಅಂತ ಹೇಳುವಷ್ಟು ನಮಗೆ ಶಕ್ತಿ ಬರುತ್ತೆ ಅಂತ ನನ್ನ ಭಾವನೆ. ಆದಕಾರಣದಿಂದ ನಾನು 20 ವರ್ಷ ವಕೀಲಿ ವೃತ್ತಿಯಲ್ಲಿ ಇದ್ಕೊಂಡು ಈಗಲೂ ನಾವು ವಕೀಲಿ ವೃತ್ತಿಯಲ್ಲೇ ಇರೋದು. ನಾನು ರಾಜಕಾರಣಿ ಅಲ್ಲ, ನಾನು ರಾಜಕಾರಣಿ ಕೂಡ ಅಲ್ಲ. ಆದರೆ ಇದೊಂದು ಹೊಸದಾದ ಒಂದು ಸಿಸ್ಟಂನ್ನು ಹುಟ್ಟು ಹಾಕಬೇಕು ಅಂದ್ರೆ ಯಾರಾರೊಬ್ಬರು ಹೆಜ್ಜೆ ಹಾಕ್ಬೇಕು. ಬೇರೆಯವರು ಹೇಳೋಕಿಂತ ಮುಂಚೆ ನಾನು ಇಟ್ಟು ನೋಡೋಣ ಅಂತ ಹೇಳಿ ಇಟ್ಟಿದ್ದೀನಿ. ಈ ಒಂದು ಏನು ನೀವು ನಮ್ಮೂರು ನಮ್ಮವರು ಅಂತ ನೀವು ಮಾಡಿಕೊಂಡು ಹೊರಟಿದ್ದೀರಾ. ಸೋ 154 ಹಳ್ಳಿಗಳಲ್ಲಿ 83 ಹಳ್ಳಿಗಳನ್ನ ನೀವು ತಿರುಗಿದ್ದೀರಾ. ಸೋ ನನ್ನ ಪ್ರಕಾರ ಇದು ಒಂದು ಸಾಧನೆ ಯಾಕೆಂದರೆ ನಾವು ನಮ್ಮ ಹಳ್ಳಿ ಬಿಟ್ಟು ಬೇರೆ ಹಳ್ಳಿಗೆ ಹೋಗಲ್ಲ. ಈಗ ನೀವು ನಾನು ಗೊತ್ತಿಲ್ಲ ನಿಮ್ಮ ಶೆಡ್ಯೂಲ್ ಹೇಗಿರುತ್ತೆ ಅಂತ ಹೇಳಿ. ಈಗ ಅಲ್ಲಿ ಕೆಲಸ ಇರುವಂತ ವ್ಯಕ್ತಿ ನಿಮ್ಮ ಜೊತೆಗೆ ಯಾಕೆ ಬರ್ತಾನೆ? ಅವನೊಬ್ಬ ರೈತ ಇರಬಹುದು ಅಥವಾ ಅವನೇನೋ ಟೀಚರ್ ಇರಬಹುದು ಅಲ್ವಾ? ಅಲ್ಲಿ ಏನೋ ಕೆಲಸ ಇಲ್ಲ ಅವನಿಗೆ ಅಂತ ಅಂದರೆ ಬರಬೇಕಾಗುತ್ತೆ. ಇಲ್ಲಾ ಕೆಲಸ ಇದ್ದೂ ಕೂಡ ಆ ಕೆಲಸಕ್ಕೆ ನೀನು ಈ ಕೆಲಸ ಇಂಪಾರ್ಟೆಂಟ್ ಅಂತ ಅನ್ನಿಸುವಂತ ವ್ಯಕ್ತಿಗಳು ಎಷ್ಟು ಜನ ಇದ್ದಾರೆ ಗೊತ್ತಿಲ್ಲ. ಇಲ್ಲಾ ಅಂತಂದ್ರೆ ಆ ಕೆಲಸ ಇದೆ ನನಗೆ ಬಟ್ ಇವರಹತ್ರ ನನಗೆ ಲಾಭ ಆಗುತ್ತೆ ಅಂತ ಬರಬಹುದು ಅಲ್ವಾ? ಸೋ ಹೇಗೆ ಜಡ್ಜ್ ಮಾಡ್ತೀರಾ ನೀವು? ನಿಮ್ಮ ಜೊತೆಗಿರುವಂತ ವ್ಯಕ್ತಿಗಳೇ ನಿಮ್ಮನ್ನ ದಾರಿ ತಪ್ಪಿಸುವಂತ ಅಥವಾ ನಿಮ್ಮಿಂದ ನಿರೀಕ್ಷೆಗಳಿರಬಹುದು ಅವರಿಗೆ ಅಲ್ವಾ? ಓ ಇವರಹತ್ರ ಹೋದರೆ ನನಗೆ ಏನೋ ಒಂದು ಸಿಗುತ್ತೆ ಅನ್ನೋದು. ಸೋ ಇದನ್ನ ಹೆಂಗೆ ನೀವು ಹೌ ಡು ಯು ಹ್ಯಾಂಡಲ್ ದಿಸ್? ಮೊದಲನೆಯದು ನಾನು ಜನಗಳನ್ನ ಜಡ್ಜ್ ಮಾಡೋದು ಬಿಟ್ಟು ಬಿಟ್ಟಿದ್ದೀನಿ. ಅವರು ಯಾವುದಕ್ಕೆ ಬೇಕಾದರು ಬಂದಿರಲಿ. ನನ್ನಲ್ಲಿ ಇರೋದು ಒಂದು ಮದ್ದು, ನನ್ನಲ್ಲಿ ಇರೋದು ಒಂದು ಇಂಜೆಕ್ಷನ್. ಯಾರು ಬಂದ್ರು ಅದೇ ಇಂಜೆಕ್ಷನ್ ಕೊಡ್ತೀನಿ. ಓಕೆ. ನನ್ನಲ್ಲಿ ಇರುವ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ರಾಮ ಬಂದ್ರು ಹಂಚಿಕೊಳ್ಳುತ್ತೇನೆ ರಾವಣ ಬಂದ್ರುನು ಹಂಚಿಕೊಳ್ಳುತ್ತೇನೆ. ಓಕೆ. ರಾಮ ಬಂದರೆ ಅಪ್ಕಂತಾನೆ. ರಾವಣ ಬಂದ್ರೆ ಟೈಮ್ ತಗೊಂತಾನೆ. ಆದರೆ ಆ ರಾವಣನಲ್ಲೂ ಕೂಡ ರಾಮನ ಸ್ವಲ್ಪ ಅಂಶ ಇರುತ್ತೆ ಅಂತ ನನ್ನ ನಂಬಿಕೆ. ಇವತ್ತಿಲ್ಲ ನಾಳೆ. ಎಸ್. ಅವನು ಈ ಸಿಸ್ಟಂಗೆ ಬರ್ತಾನೆ. ಈ ವಿಚಾರ ಸರಿ ಇದೆ ಅಂತ ಅವನ ಮನಸ್ಸಿಗೂ ಅನಿಸಿದರೆ ಅವನು ಕೈ ಜೋಡಿಸುತ್ತಾನೆ ಅನ್ನುವಂತ ಒಂದು ಕಲ್ಪನೆಯಲ್ಲಿ ಮುಂದೆ ಹೋಗುವಂತ ವ್ಯಕ್ತಿ ನಾನು. ಎರಡನೇ ಭಾಗ ಅವರು ಕೆಲಸ ಬಿಟ್ಟು ರಾಜಕೀಯ ಈ ನನ್ನ ಕೈ ಜೋಡಿಸಿ ರಾಜಕಾರಣ ಮಾಡ್ರಿ ಅನ್ನುವಂತ ಮಗನೇ ಅಲ್ಲ ನಾನು ಯಾಕೆಂದರೆ ನಾನು ಮಾಡಲ್ಲ. ಯಾಕೆ ನೀವು ಕೆಲಸ ಬಿಟ್ಟು ಹೋಗ್ತೀರಾ? ಹೌದು, ಹೋಗೋದಿಲ್ಲ. ನಾನು ಮಾಡೋದಿಲ್ಲ ಅದನ್ನ. ನನಗೆ ಈ ರಾಜಕೀಯದ ಮೇಲೆ ಅವಲಂಬಿತವಾದ ವ್ಯಕ್ತಿ ಆಗಬೇಕು ಅನ್ನುವಂತ ಆಸೆ ಕೂಡ ನನಗಿಲ್ಲ. ರಾಜಕೀಯದಿಂದನೇ ಮನೆ ನಡಿಬೇಕು ಅಂತ ಆಗ್ಬಿಟ್ಟರೆ ಏನು ಮಾಡಬೇಕಾಗುತ್ತೆ? ಜನರಿಂದ ನಾನು ದುಡ್ಡು ತೆಗೆಯಬೇಕಾಗುತ್ತೆ. ಅದರ ಬದಲು ಜನಾನು ಇದು ಅರ್ಥ ಮಾಡ್ಕೋಬೇಕು.

[7:36]ಒಂದು ವೃತ್ತಿಯಲ್ಲಿ ಇರುವಂತವನು ವೃತ್ತಿಯನ್ನು ಮಾಡಿಕೊಂಡು ತನಗಿರುವ ಸಮಯದಲ್ಲಿ ಜನಪರ ಕೆಲಸ ಮಾಡ್ತಾನೆ ಅಂದ್ರೆ ಅಂತವನಿಗೆ ಬೆಂಬಲ ಕೊಡಬೇಕು ಅವರು. ಯಾಕೆಂದರೆ ಅವರು ಕೂಡ ನಾನು ಯಾವ ಯಾವ ಹಳ್ಳಿಗೆ ಹೋಗ್ತೀನಿ ಯಾರಿಗೂ ಕೆಲಸ ಬಿಟ್ಟು ಬಂದು ಕೂತ್ಕೊಳ್ರಪ್ಪ ಅಂತ ನಾನು ಯಾರಿಗೂ ಹೇಳೋದಿಲ್ಲ. ನಾನು ಹೋಗೋದು ಯಾವಾಗಲೂ ಸಾಯಂಕಾಲದ ಮೇಲೆ. ಅವರೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಂದು ಆರಾಮಾಗಿ ಇದ್ದಂತ ಸಮಯದಲ್ಲೇ ನಾನು ಅವರ ಹತ್ತಿರ ಹೋಗಿ ಈ ಚಿಂತನೆಗಳನ್ನ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ಅವರಿಗೆ ಅದನ್ನೇ ಹೇಳುತ್ತೇನೆ. ನೀವು ನನ್ನನ್ನ 24/7 ಎಕ್ಸ್ಪೆಕ್ಟ್ ಮಾಡೋದು ತಪ್ಪು. ನೀವು ಎಕ್ಸ್ಪೆಕ್ಟ್ ಮಾಡಿದರೆ ನಾನು ನಿಮ್ಮಂಗ ಆಗ್ತೀನಿ. ನಿಮ್ಮ ಎಕ್ಸ್ಪೆಕ್ಟೇಷನ್ ರೀಚ್ ಮಾಡ್ತೀನಿ. ಆದರೆ ಅದಕ್ಕೊಂದು ಉದಾಹರಣೆ ಕೊಡ್ತೀನಿ ಅವರಿಗೆ. ಆಗಾಗ ಹಳ್ಳಿಗಳು ಹೋದಾಗ ಈ ಉದಾಹರಣೆ ಕೊಡ್ತೀನಿ. ನೋಡ್ರಪ್ಪ ಈಗ ಸದ್ಯಕ್ಕೆ ನಾನು ಒಬ್ಬ ವೃತ್ತಿಯಲ್ಲಿ ಇರುವಂತ ಒಬ್ಬ ವಕೀಲ. ನಾನು ಕೋರ್ಟಿಗೆ ಹೋದ್ರೆ ನನ್ನ ಮನೆ ನಡೆಯುತ್ತೆ. ನಾನು ಕೋರ್ಟಿಗೆ ಹೋದ್ರೆ ನನ್ನ ಪೆಟ್ರೋಲ್ ಕಾಸ್ ಸಿಗುತ್ತೆ. ಆ ಪೆಟ್ರೋಲ್ ಹಾಕ್ಕೊಂಡು ನಾನು ನಿಮ್ಮ ಹತ್ರ ನಿಮ್ಮ ಹಳ್ಳಿಗೆ ಬರ್ತೀನಿ. ಈಗ ನೀವು ಹೇಳ್ತಾ ಇದ್ದೀರಾ ಸರ್ ಹಂಗೆಲ್ಲ ಆಗೋದಿಲ್ಲ. ನೀವು 24/7 ಇಲ್ಲಿ ಇರಬೇಕು. ಆಮೇಲೆ ನೀವು ಹಿಂಗೆಲ್ಲಾ ಇದನ್ನು ಮಾಡಕ್ಕೆ ಆಗಲ್ಲ ಸರ್ ನೀವೆಲ್ಲಾ ಸೀರೆ ಹಂಚಬೇಕು. ಟೀ ಶರ್ಟ್ ಹಂಚಬೇಕು. ಸರ್ ಇದೆಲ್ಲ ಪದ್ಧತಿ ಸರ್ ನಿಮಗೆಲ್ಲ ಅರ್ಥ ಆಗೋದಿಲ್ಲ ಅಂತ ನೀವು ಹೇಳ್ತೀರಾ. ನಾನು ಅದನ್ನ ಒಪ್ಕೊಳ್ಳುತ್ತೇನೆ. ಒಪ್ಕೊಂಡ ಮೇಲೆ ನಾನು ಏನು ಮಾಡಬೇಕು? ಮೊದಲನೆಯದಾಗಿ ನನ್ನ ಪ್ರೊಫೆಷನ್ನನ್ನು ಬಿಡಬೇಕು. ಎಂಎಲ್ಎ ಆಗಬೇಕು. ಎಂಎಲ್ಎ ಆದಮೇಲೆ ಏನು ಮಾಡಬೇಕು? ಎಂಎಲ್ಎ ಆಗಿ ಮನೆನು ನಡೆಸಬೇಕು ರಾಜಕೀಯನೂ ಮಾಡಬೇಕು ಮುಂದಿನ ಎಲೆಕ್ಷನ್ನು ಮಾಡಬೇಕು. ಅದಕ್ಕೆ ಏನು ಮಾಡ್ತೀನಿ ಅಂದ್ರೆ ನೀವು ಯಾವುದೋ ಒಂದು ಹಳ್ಳಿಯಲ್ಲಿ ಅಣ್ಣರೆ ನನಗೆ ಒಂದು ರೋಡ್ ಬೇಕು ಅಲ್ಲಿ ಸಿಮೆಂಟ್ ರೋಡ್ ಹಾಕಿ ಅಂತ ಹೇಳ್ತೀರಿ. ಯಾವುದೋ ಒಂದು ಹಳ್ಳಿ ತಗೊಳ್ಳಿ ಕಿರವಾಡಿನ್ನೇ ತಗೊಳ್ಳಿ. ಅಪ್ಪ ಬರ್ರಿ ಅಂತ ಹೇಳ್ತೀನಿ. ಕಿರವಾಡಿನ್ನ ಫೈಲ್ ತೆಗೆಸ್ತೀನಿ. ಕಿರವಾಡಿಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸಿಮೆಂಟ್ ರೋಡ್ ನಿರ್ಮಾಣವಾಗಿದೆ ಅಂತ ಇರುತ್ತೆ. ಅಂತ ಅಂದರೆ ಎಂತ ಅನ್ನುತಾ ಹಾಳರೆ ಇದು. ರೋಡ್ ಇಲ್ರಿ ಅಣ್ಣ. ಹೇ ಇದೆ ಕಣಪ್ಪ ರೋಡ್ ಇದೆ ಅಂತ ಹೇಳ್ತೀನಿ. ಹೇ ಸಾಧ್ಯನೇ ಇಲ್ಲ ನಾನು ಕಿರವಾಡಿಂದ ಬಂದಿದ್ದೀನಿ ಎಲ್ಲಿದೆ ರೋಡ್ ಸಾಹೇಬ್ರೇ ಅಂತ ಕೇಳ್ತೀರಿ ನೀವು. ಅವಾಗ ಹೇಳ್ತೀನಿ ಅಲ್ಲಪ್ಪಾ ರೋಡು ಇದರಲ್ಲಿ ಫೈಲಲ್ಲಿ ಇದೆ. 3 ಕೋಟಿ ನನ್ನ ಜೇಬಲ್ಲಿ ಇದೆ. ರೋಡ್ ನಿಮ್ಮಲ್ಲಿ ಇಲ್ಲ. ಯಾಕೆ 3 ಕೋಟಿ ನನ್ನ ಜೇಬಲ್ಲಿ ಇದೆ ಹೇಳಿ. ನಾಳೆ ದಿವಸ ನಿಮಗೆ ಸೀರೆ ಕೊಡಬೇಕು, ಟೀಶರ್ಟ್ ಕೊಡಬೇಕು, ಚುನಾವಣೆ ನಿಲ್ಲಬೇಕು. ಎಷ್ಟೆಲ್ಲಾ ಖರ್ಚು ಇದೆ ಅಲ್ಲಪ್ಪಾ. ಅವಾಗ ಸುಮ್ಮನೆ ಹಾಕ್ತೀರಾ ವೋಟ್ ನೀವು? ಇಲ್ವಲ್ಲ. ಅದಕ್ಕೆ ರೋಡ್ ಕೇಳ್ಬೇಡ್ರಿ ನಾನು ಫೈಲಲ್ಲಿ ರೋಡ್ ಮಾಡ್ಕೊಂಡು ದುಡ್ಡು ಇಟ್ಕೊಂಡಿರುತ್ತೀನಿ ತಲೆಕೆಡಿಸಕೊಬೇಡಿ ಅಂತ ಹೇಳ್ತೀನಿ. ಈ ತರ ನಾಯಕತ್ವಕ್ಕೆ ಫುಲ್ ಸ್ಟಾಪ್ ಇಡಬೇಕು ಅಂದ್ರೆ ಜನ ಫುಲ್ ಟೈಂ ಪೊಲಿಟಿಷಿಯನ್ಸ್ ಅನ್ನ ಎಕ್ಸ್ಪೆಕ್ಟ್ ಮಾಡೋದು ಕೂಡ ಬಿಡಬೇಕು.

Need another transcript?

Paste any YouTube URL to get a clean transcript in seconds.

Get a Transcript