Thumbnail for ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali by Venkatesh Kannada Class

ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali

Venkatesh Kannada Class

24m 53s2,459 words~13 min read
Auto-Generated

[0:01]ಸ್ನೇಹಿತರೆ, ಇವತ್ತಿನ ತರಗತಿಯಲ್ಲಿ ಈರಪ್ಪ ಎಂ ಕಂಬಳಿ ಅವರು ಬರೆದಿರತಕ್ಕಂತಹ ಲೇಖನ ಮೊಬೈಲ್ ಫೋಬಿಯಾ ಅಂತಕಂತ ಲೇಖನವನ್ನು ಕುರಿತು ಚರ್ಚೆ ಮಾಡೋಣ. ಈರಪ್ಪ ಎಂ ಕಂಬಳಿ ಅವರು ವಸತೇ ಮಾರಿನ ಪ್ರಮುಖ ಕಾದಂಬರಿಕಾರರಲ್ಲಿ ಅವರನ್ನು ಕೂಡ ನಾವು ಗುರುತಿಸುತ್ತೀವಿ. ಮೂಲತಃ ಕೊಪ್ಪಳ ಜಿಲ್ಲೆಯವರು. ಮುದುಕಪ್ಪ ಶಿವಬಸಮ್ಮ ಅಂತಕಂತ ದಂಪತಿಗಳ ಮಗನಾಗಿ 1958ರಲ್ಲಿ ಶ್ರೀಯುತರು ಜನಿಸುತ್ತಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರತಕ್ಕಂತಹ ಶ್ರೀಯುತರು ಭಾಷಾಂತರ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ. ಅರೆಸತ್ತ ಬದುಕು ಇವರ ಕಾವ್ಯಸಂಕಲನ. ಪ್ರಬಂಧ ಸಾಹಿತ್ಯದಲ್ಲಿ ಹೆಚ್ಚಿನ ಒಲವನ್ನು ತೋರಿ, ಕಲ್ಯಾಣ ಕರ್ನಾಟಕದ ದೇಸಿ ಭಾಷೆಯ ಆಡುನುಡಿಯಲ್ಲಿ ಆಕರ್ಷಕವಾಗಿ ಇವರು ಪ್ರಬಂಧಗಳನ್ನು ರಚಿಸಿದ್ದಾರೆ. ಉತ್ತಮ ಪ್ರಬಂಧಕಾರರಾಗಿ ಕನ್ನಡದಲ್ಲಿ ಇವರು ಗುರುತಿಸಿಕೊಳ್ಳುತ್ತಾರೆ. ಇವರ ಪ್ರಮುಖ ಪ್ರಬಂಧಗಳು ಅಂತ ನಾವು ಗಮನಿಸಿದಾಗ ಹಿದ್ದಾರಿಗುಂಟ ಹೀಗೊಂದು ಟಾಪ್ ಪ್ರಯಾಣ. ಚಾಚಾ ನೆಹರು ಮತ್ತು ಈಚಲಮರ, ಕಳ್ಳಿ ಹಾಲು, ಉರ್ಳಿಕಟ್ಟು ಹೀಗೆ ಅನೇಕ ಪ್ರಬಂಧಗಳನ್ನು ನಾವು ನೋಡುತ್ತೇವೆ. ಪ್ರಸ್ತುತ ಮೊಬೈಲ್ ಫೋಬಿಯಾ ಈ ಲೇಖನವನ್ನು ಅವರ ಕಳ್ಳಿ ಹಾಲು ಪ್ರಬಂಧ ಸಂಕಲನದಿಂದ ಆಯ್ಕೆ ಮಾಡಿಕೊಂಡಿರತಕ್ಕಂಥದ್ದು. ಇವತ್ತು ಮೊಬೈಲ್ನಿಂದ ಆಗ್ತಿರತಕ್ಕಂತಹ ಅವಾಂತರಗಳನ್ನು ಈ ಲೇಖನದಲ್ಲಿ ಚರ್ಚಿಸುತ್ತಾರೆ. ಇವತ್ತು ಮೊಬೈಲ್ ಅಂತಕಂತದ್ದು ವರ್ಗ, ವರ್ಣ, ಅಂತಸ್ತು, ವಯಸ್ಸು, ಹೆಣ್ಣು ಗಂಡು ಹೀಗೆ ಲಿಂಗಭೇದವಿಲ್ಲದೆ ಎಲ್ಲಾ ಕೈಯಲ್ಲೂ ಕೂಡ ಇವತ್ತು ಮೊಬೈಲ್ ಅಂತಕಂತದ್ದು ತಲುಪಿದೆ. ಇಂದು ಮಾನವೀಯ ಸಂಬಂಧಗಳು ಬೆಲೆಯನ್ನು ಕಳೆದುಕೊಳ್ಳುತ್ತಿದೆ. ಇವತ್ತೊಂದು ಮನೋರೋಗವಾಗಿ ಮೊಬೈಲ್ ಪರಿವರ್ತನೆ ಆಗ್ತಾ ಇದೆ. ಹಾಗಾಗಿ ಇದರ ಸುತ್ತ ಈ ಲೇಖನ ಅಂತಕಂತದ್ದು ಬೆಳಕು ಚೆಲ್ಲುತ್ತೆ. ಇವತ್ತು ಶಾಲಾ ಕಾಲೇಜುಗಳಲ್ಲಿ ಮಕ್ಕಳು ಒಂದು ಗಂಟೆ ಪಾಠವನ್ನು ಕೇಳದೆ ಐದು 10 ನಿಮಿಷಕ್ಕೊಮ್ಮೆ ಮೊಬೈಲ್ ನೋಡತಕ್ಕಂತಹ ಒಂದು ಮನೋರೋಗಕ್ಕೆ, ಜಾಡ್ಯಕ್ಕೆ ಇವತ್ತು ಒಳಗಾಗುತ್ತಾ ಇದ್ದಾರೆ. ಹಾಗಾಗಿ ಮೊಬೈಲ್ ಫೋಬಿಯಾ ಪ್ರಬಂಧದ ಒಳಗೆ ಮೊಬೈಲ್ನ ಸಾಧಕ-ಬಾಧಕಗಳ ಕುರಿತು ಲೇಖಕರು ಸುದೀರ್ಘವಾಗಿ ಚರ್ಚೆ ಮಾಡುತ್ತಾರೆ. ಹಾಗಾದರೆ ಬನ್ನಿ ಸ್ನೇಹಿತರೆ, ಪ್ರಮುಖವಾಗಿ ಯಾವ ಅಂಶಗಳನ್ನು ಲೇಖಕರು ಚರ್ಚೆ ಮಾಡುತ್ತಾರೆ ಅಂತಕಂತದ್ದನ್ನು ನೋಡೋಣ. ಆರಂಭದಲ್ಲಿ ಕಟ್ಟಡದ ಕೆಲಸದವರನ್ನು ಪ್ರಾದೇಶಿಕ ಪ್ರೀತಿ ಇಂದ ವಿಚಾರಿಸುವ ಸಂದರ್ಭ. ಅಂದ್ರೆ ಒಮ್ಮೆ ಅವರು ಪ್ರಾದೇಶಿಕ ಪ್ರೀತಿಯಿಂದ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದಿರತಕ್ಕಂತಹ ಕಟ್ಟಡದ ಕೆಲಸಗಾರರನ್ನು ಕೇಳುತ್ತಾರೆ.

[3:17]ಏನಪ್ಪಾ ನೀವು ಅಲ್ಲಿಂದ ಇಲ್ಲಿಗೆ ಬಂದಿದ್ದೀರಾ, ಊರಿಗೆ ಏನಾದ್ರೂ ಹೋಗುತ್ತೀರೋ ಅಥವಾ ಪತ್ರ ಗಿತ್ರ ಬರೀತೀರಾ ಇಲ್ಲಾ ನೀವೂ ಹೇಗಿದ್ದೀರಾ ಏನು ಅಂತ ಕೇಳಿದರೆ ಹೀಗೆಲ್ಲ ಮೊಬೈಲ್ ಅಂತಕಂತದ್ದು ಬಂದಿದೆ. ಹೀಗೆಲ್ಲಾ ಪತ್ರ ಬರೆಯತಕ್ಕಂತದ್ದು ಔಟ್ಡೇಟೆಡ್. ಹಾಗಾಗಿ ಇವತ್ತು ನಾವು ಐದು ವರ್ಷಕ್ಕೊಮ್ಮೆ ಫೋನ್ ಮಾಡ್ಬಿಟ್ಟು ಹಲೋ ಅಂತ ಹೇಳಿ ಹೇಗೆ ಇದೆ ಅಂತ ಹೇಳಿ ಮಾಚಾರಿಸಬೇಕು. ಮಾತಾಡಿಸಿ ಇಟ್ಟುಬಿಟ್ಟರೆ ಇವತ್ತು ಪತ್ರ ಗಿತ್ರ ಬರೆಯೋದಕ್ಕೆ ಸಮಯ ಇಲ್ಲ ಅಂತ ಹೇಳುತ್ತಾರೆ. ಒಂದು ಕಾಲಕ್ಕೆ ನಾವು ಪತ್ರಗಳನ್ನು ಬರಿತಾ ಇದ್ದೀವಿ, ಯೋಗ ಸಮಾಚಾರಗಳನ್ನು ಕೇಳುತ್ತಾ ಇದ್ದೀವಿ.

[4:00]ಆದರೆ ಇವತ್ತು ಮೊಬೈಲ್ ಬಂದಮೇಲೆ ಈ ಸಂಬಂಧಗಳು ಕಡಿಮೆ ಆಗ್ತಾ ಹೋಗ್ತಾ ಇರೋದರ ಬಗ್ಗೆ ಆರಂಭದಲ್ಲಿ ಲೇಖಕರು ಬೆಳಕು ಚೆಲ್ಲುತ್ತಾರೆ. ಇಂದು ಬಂಧು ಮಿತ್ರರನ್ನು ರೈಲಿಗೋ ಬಸ್ಸಿಗೋ ಹತ್ತಿಸಿ ಅರ್ಧ ಮನಸ್ಸಸ್ಥಿತಿಯಲ್ಲಿ ಕನಿಕರ ಬೆರೆತ ಧ್ವನಿಯಲ್ಲಿ ತಲುಪಿದ ಕೂಡಲೇ ಕಾಗದ ಬರೆಯಿರಿ ಎಂದು ತಾಕೀತು ಮಾಡುತ್ತಿದ್ದರು. ಈಗ ಅದು ಔಟ್ ಡೇಟೆಡ್. ಈಗ ಏನಿದ್ದರೂ ಓದಿದ ಕೂಡಲೇ ಒಂದು ಕಾಲ್ ಮಾಡಿ ಎನ್ನುವುದು ಮಾಮೂಲಿಯಾಗಿ ಕಾಣಿಸಿಕೊಳ್ಳುತ್ತದೆ ಅಂತ ಎರಡನೇ ಅಂಶವನ್ನು ಲೇಖಕರು ಲೇಖನದಲ್ಲಿ ಚರ್ಚೆ ಮಾಡುತ್ತಾರೆ. ಅಂದರೆ ಇವತ್ತು ನಾವೇನಾದರೂ ಕುಟುಂಬದವರು ಯಾರೋ ನಮ್ಮ ಸಂಬಂಧಿಕರು ಬಂದಿದ್ದಾರೆ ಅಂತ ಹೇಳಿ ಒಂದು ಎರಡು ದಿನ ನಮ್ಮ ಮನೆಯಲ್ಲಿ ಉಳಿದುಕೊಂಡು ನೆಕ್ಸ್ಟ್ ಅವರನ್ನು ನಾವು ಅವರ ಊರಿಗೆ ಕಳಿಸಬೇಕಾದರೆ ರೈಲಿಗೋ ಬಸ್ಸಿಗೋ ಹತ್ತಿಸುತ್ತಾ ಇರಬೇಕಾದರೆ ಇವತ್ತು ನಾವು ಕನಿಕರ ಧನಿಯಲ್ಲಿ ಏನಂತಾ ಕೇಳ್ತೀವಿ? ನೀನು ಹೋಗಿ ಮನೆಗೆ ಮುತ್ತಿದ ಕೂಡಲೇ ಅಥವಾ ಮಗಳ ನೀನು ಹಾಸ್ಟಲ್ಗೆ ಹೋದ ಕೂಡಲೇ ನನಗೆ ಒಂದು ಕಾಲ್ ಮಾಡು ಅಂತ ಹೇಳುತ್ತೀವಿ. ಹಿಂದೆ ನೀನು ಮನೆಗೆ ತಲುಪಿದ ಕೂಡಲೇ ಪತ್ರ ಬರಿ ಅಂತ ಹೇಳುತ್ತಾ ಇದ್ದೀವಿ.

[5:09]ಈಗ ಪತ್ರ ಬರೆಯುವುದು ಈಗ ಔಟ್ ಡೇಟೆಡ್ ಆಗಿದೆ. ಇವಾಗ ಏನಿದ್ದರೂ ಕೂಡ ಮನೆಗೆ ಹೋದ ಕೂಡಲೇ ಒಂದು ಕಾಲ್ ಮಾಡು ಅನ್ನೋದನ್ನು ಹೇಳುತ್ತೀವಿ. ಕೈ ಮಾಡೋದು ಅಂದ್ರೆ ಮ್ಯಾನ್ ಹ್ಯಾಂಡ್ಲಿಂಗ್ ಆದರೆ, ಕಾಲ್ ಮಾಡೋದು ಯಾಕೆ ಕಾಲಲ್ಲಿ ಹೊಡೆಯೋದು ಆಗಬಾರದು ಅಂತ ಹೇಳಿ ಕೂಡ ಲೇಖಕರು ಇಲ್ಲಿ ಹಾಸ್ಯವನ್ನು ಮಾಡುತ್ತಾರೆ. ಹಾಗಾಗಿ ಆರಂಭದಲ್ಲಿ ಇವತ್ತು ಬೇರೆ ಬೇರೆ ಕಡೆಯಿಂದ ದುಡಿಯುವುದಕ್ಕಾಗಿ ನಗರ ಕಡೆಗೆ ನಗರದ ಕಡೆಗೆ ಬರ್ತಾ ಇರತಕ್ಕಂತಹ ಜನ ಇವತ್ತು ತಮ್ಮ ಸಂಬಂಧಿಕರ ಜೊತೆಗೆ ಮಾತನಾಡತಕ್ಕಂತಹ ಪ್ರಕ್ರಿಯೆ ಕಡಿಮೆಯಾಗುತ್ತಿದೆ. ಇವತ್ತು ಪತ್ರ ಗಿತ್ರ ಬರೆಯತಕ್ಕಂತಹ ಸಂಸ್ಕೃತಿ ಕಡಿಮೆಯಾಗುತ್ತಿದೆ. ಹಾಗಾಗಿ ಮನುಷ್ಯ ಸಂಬಂಧಗಳು ಎಲ್ಲೋ ಒಂದು ಕಡೆಗೆ ಸಡಿಲ್ ಆಗ್ತಾ ಇದಾವೆ ಅಂತ ಹೇಳಿ ಲೇಖಕರು ಬೆಳಕು ಚೆಲ್ಲಿದರೆ ಎರಡನೆಯ ಪ್ಯಾರಾದಲ್ಲಿ ಇವತ್ತು ನಾವು ಸ್ನೇಹಿತರನ್ನು, ಬಂಧುಮಿತ್ರರನ್ನು ಮನೆಗೆ ಕಳಿಸಿದಾಗ ಒಂದು ಫೋನ್ ಮಾಡಿ ಅಂತ ಹೇಳಿಬಿಟ್ಟು ನಾವೇನು ಮಾಡ್ತಾ ಇದ್ದೀವಿ? ಜಾರಿಕೊಳ್ಳುತ್ತಾ ಇದ್ದೀವಿ ಅಂತ ಹೇಳುತ್ತಾರೆ. ಇತ್ತೀಚೆಗೆ ಲೇಖಕರು ಹೇಳುವ ಹಾಗೆ ನಾನು ಹೊರಗಡೆ ಹೋಗ್ತಾ ಇರಬೇಕಾದರೆ ಒಬ್ಬ ಕೆಲಸದ ಗಾರೇ ಕೆಲಸದ ಹುಡುಗನ ಜೋಬಿನ ಒಳಗೆ ಹಾಗೆ ಸುಮ್ಮನೆ ಅಂತ ಹೇಳಿ ಒಂದು ಹಾಡು ಬರ್ತಾ ಒಂದು ಮೊಬೈಲ್ ಬಡ್ಕೊಳ್ತಾ ಇತ್ತು. ಅದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಯಾಕೆ ಅಂದರೆ ಸಂಬಳ ತೆಗೆದುಕೊಳ್ಳುತ್ತಾ ಇರತಕ್ಕಂತಹ ಅಧಿಕಾರಿಯಾಗಿರತಕ್ಕಂತಹ ನನ್ನ ಕೈಯಲ್ಲೇ ಒಂದು ಫೋನ್ ಇಲ್ಲ. ಆದರೆ ಇವತ್ತು ಫೋನ್ ಅಂತಕಂತದ್ದು ಜನಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೂ ಕೂಡ ಇವತ್ತು ಎಲ್ಲರ ಕೈಯಲ್ಲೂ ಇವತ್ತು ಮೊಬೈಲ್ ಅಂತಕಂತದ್ದು ಬಂದಿದೆ. ಹಾಗಾಗಿ ಇವತ್ತು ವಿಸ್ತೃತವಾಗಿ ಇವತ್ತು ಮೊಬೈಲ್ ಅಂತಕಂತದ್ದು ಹರಡಿಕೊಂಡಿದೆ. ಒಂದು ವೇಳೆ ಪುರಂದರ ದಾಸರು ಏನಾದ್ರೂ ಈಗ ಬದುಕಿದ್ದಿದ್ರೆ ಮೊಬೈಲ್ ಬಂದಿದೆ ಕೊಳ್ಳಿರೋ ನೀವೆಲ್ಲರೂ ಬೆರಳ ತುದಿಯಲ್ಲಿ ಜಗವಜಾಳಾಡುವ ಅগণಿತ ಮೊಬೈಲ್ ಬಂದಿದೆ. ಬಗೆಬಗೆಯ ಕಂಪನಿ ಲೆಗ್ಗೆ ಇಕ್ಕಿವೆ ಮನೆಗೆ ಜಗವ ಹಿಡಿದಿಟ್ಟು ಕೊಳ್ಳುವ ಕರಾತಲಾ ಮೊಲಕ ಸರಕು ಲಘು ಬೆಗೆಯಿಂದಲಿ ಬಂದು ಬಾಚಿಕೊಳ್ಳಿರೇನುತ ಸೊಗೆ ಇಪ್ಪದು ಎಲ್ಲೆಡೆಗೂ ಹಲವು ಬಣ್ಣಗಳಲ್ಲಿ ಮೊಬೈಲ್ ಬಂದಿದೆ ಕೊಳ್ಳಿರೋ ಅಂತ ಬರಿತಿದ್ರು. ಕಲ್ಲು ಸಕ್ಕರೆ ಕೊಳ್ಳಿರೋ ಅಂತ ಹೇಳಿ ಕೀರ್ತನೆ ಬರೆದಿದ್ದಾರೆ. ಒಂದು ವೇಳೆ ಅವರು ಬದುಕಿದಿದ್ದೆ ಇವಾಗ ಮೊಬೈಲ್ ತಗೊಳ್ಳಿರಿ ಅಂತ ಹೇಳಿ ಬರಿತಾ ಇದ್ದರೇನೋ ಅಂತ ಹೇಳಿ ಇವತ್ತಿನ ವ್ಯವಸ್ಥೆಯನ್ನು ಕುರಿತು ವ್ಯಂಗ್ಯವಾಗಿ ಲೇಖಕರು ಹೇಳುತ್ತಾರೆ. ಇವತ್ತು ಬಣ್ಣ ಬಣ್ಣದ ಮೊಬೈಲ್ ಗಳು, ಬಗೆ ಬಗೆಯ ಕಂಪನಿಯ ಮೊಬೈಲ್ ಗಳನ್ನು ನಾವಿವತ್ತು ಕಡಲೆಪುರಿಯ ಹಾಗೆ ತೆಗೆದುಕೊಂಡು ಇವತ್ತು ಬಳಸುತ್ತಾ ಇದ್ದೀವಿ. ಎಗ್ಗಿಲ್ಲದೆ ಬಳಸುತ್ತಾ ಇದ್ದೀವಿ ಅಂತ ಹೇಳಿ ಲೇಖಕರು ಇಲ್ಲಿ ಹೇಳುತ್ತಾರೆ. ಇವತ್ತು ನಾವು ಮೊಬೈಲ್ ಅನ್ನು ಯಾವ ರೀತಿ ಇವತ್ತು ಸಮೀಕರಿಸಿದ್ವಿ ಅಂತ ಅಂದ್ರೆ, ಇವತ್ತು ನೀವು ಮೊಬೈಲ್ ಅನ್ನು ಗಂಡನಿಗೆ ಹೋಲಿಸಿದರೆ ಆ ಮೊಬೈಲ್ನ ಒಳಗಿರುವ ಸಿಮ್ ಅನ್ನು ಹೆಂಡತಿಗೆ ಹೋಲಿಸುತ್ತಾರೆ. ಮಿಸ್ ಕಾಲ್ ಗಳನ್ನು ಮಕ್ಕಳಿಗೆ ಹೋಲಿಸುತ್ತಾರೆ. ಈ ಹಿನ್ನಲೆಯಲ್ಲಿ ಇವತ್ತು ಮೊಬೈಲ್ ಅಂತಕಂತದ್ದು ಗಂಡ, ಹೆಂಡತಿ, ಮಕ್ಕಳನ್ನು ಮೊಬೈಲ್ ಸೆಟ್ಟು, ಸಿಮ್ಮು ಮತ್ತು ಮಿಸ್ಕಾಲ್ಗೆ ಹೋಲಿಸುವ ಸಂದರ್ಭಗಳ ಬದುಕಲ್ಲಿ ಇವತ್ತು ನಾವು ಬದುಕುತ್ತಾ ಇದ್ದೀವಿ. ಅಷ್ಟರಮಟ್ಟಿಗೆ ಇವತ್ತು ಮೊಬೈಲ್ ಅಂತಕಂತದ್ದು ಇಡೀ ಈ ಸಮುದಾಯವನ್ನು, ಈ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಇಂತಹ ಮೊಬೈಲ್ನ ಕಬಂಧದಿಂದ ನಾವು ಬಿಡುಗಡೆಯನ್ನು ಪಡೆದುಕೊಳ್ಳಬೇಕು. ಎಂಬ ಆಶಯವನ್ನು ಈ ಲೇಖನದಲ್ಲಿ ಚರ್ಚಿಸುತ್ತಾ ಇದ್ದಾರೆ. ಈ ರೀತಿಯಲ್ಲಿ ಕೆಲಸದ ಸಾಮಾನ್ಯ ಕೆಲಸದವನಿಂದ ಶ್ರೀಮಂತರವರೆಗೂ ಇವತ್ತು ಮೊಬೈಲ್ ಅಂತಕಂತದ್ದು ಕಡಲೆಪುರಿಯ ಹಾಗೆ ಎಲ್ಲರ ಕೈಗೂ ಸಿಕ್ತಾ ಇರುವುದಕ್ಕೆ ಕಾರಣ ಏನು ಅಂತ ಅಂದರೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಅಂತ ಹೇಳುತ್ತಾರೆ. ಎಲ್ಪಿಜಿ ಅಂತ ಕರೀತೀವಿ. ಇವತ್ತು ಉದಾರೀಕರಣದ ಕಾರಣಕ್ಕಾಗಿ, ಖಾಸಗೀಕರಣದ ಕಾರಣಕ್ಕಾಗಿ, ಜಾಗತೀಕರಣದ ಕಾರಣಕ್ಕಾಗಿ ಇವತ್ತು ಬೇರೆ ಬೇರೆ ಕಂಪನಿಗಳು ಭಾರತಕ್ಕೆ ಲಗ್ಗೆ ಇಡುತ್ತವೆ. ಭಾರತದ ಕಂಪನಿಗಳು ಬೇರೆ ಬೇರೆ ಕಡೆಗೆ ಲಗ್ಗೆ ಇಡುತ್ತವೆ. ಇವತ್ತು ಈ ಪೈಪೋಟಿಯ ಈ ಸಂದರ್ಭದಲ್ಲಿ ಇವತ್ತು ಫೋನ್ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಇವತ್ತು ಜನಸಾಮಾನ್ಯರ ಕೈಗೆ ಮುಟ್ಟುವ ಹಾಗೆ ಕಂಪನಿಗಳು ನೋಡಿಕೊಳ್ಳುತ್ತಾ ಇರುತ್ತವೆ. ಪ್ರತಿ ಆರು ತಿಂಗಳಿಗೆ, ತಿಂಗಳಿಗೆ ಬದಲಾಯಿಸುವ ಹಾಗೆ ಅವರಲ್ಲಿ ಬದಲಾವಣೆಯನ್ನು ತರುತ್ತಾ ಇದೆ. ಹಾಗಾಗಿ ಇವತ್ತು ಮೊಬೈಲ್ ಗಳು ಈ ಮಟ್ಟಿಗೆ ಮಕ್ಕಳ ಕೈ ಸೇರುತ್ತಾ ಇರತಕ್ಕಂತದ್ದು, ಜನಸಾಮಾನ್ಯರ ಕೈ ಸೇರುತ್ತಾ ಇರತಕ್ಕಂತದ್ದು ಈ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಕಾರಣಕ್ಕಾಗಿ ಅಂತ ಹೇಳುತ್ತಾರೆ. ಇವತ್ತು ಬರೀ ಆಧುನಿಕ ನಾಗರಿಕ ಜಗತ್ತಲ್ಲಿ ಮೊಬೈಲ್ ಬರೀ ನಮ್ಮ ಖಾಸಗಿ ಮತ್ತು ವ್ಯವಹಾರಿಕ ಬದುಕಿನ ಮೇಲೆ ಅಷ್ಟೇ ಅದು ಪ್ರಭಾವವನ್ನು ಬೀರಲಿಲ್ಲ. ಇವತ್ತು ನಮ್ಮ ಭಾಷೆ ಮೇಲೆ, ನಮ್ಮ ಸಾಹಿತ್ಯದ ಮೇಲೆ, ನಮ್ಮ ಸಂಸ್ಕೃತಿಯ ಮೇಲು ಕೂಡ ಅದು ತನ್ನ ಪ್ರಭಾವವನ್ನು, ತನ್ನ ಕಬಂಧವನ್ನು ಇವತ್ತು ಬೀರಿದೆ. ಯಾವ ರೀತಿಯಲ್ಲಿ ಅಂತಂದರೆ ಒಂದು ಕಾಲಕ್ಕೆ ನಾವು ಟೈಪನ್ನು ಮಾಡ್ತಾ, ಒಂದು ಕಾಲಕ್ಕೆ ನಾವು ಮಾವಣಿಕೆಯನ್ನು ನಡೀಸ್ತಾ ಇದ್ದೀವಿ. ಇವತ್ತು ವಿದ್ಯಾರ್ಥಿಗಳಿಗೆ ನಾವು ನೋಟ್ಸ್ಅನ್ನು ಬರೆಸಿದರೆ ಮಕ್ಕಳು ಇವತ್ತು ಬರ್ಕೊಳ್ತಾ ಇಲ್ಲ. ಯಾರೋ ನಾಲ್ಕು ಜನ ಬರ್ತಾ ಇರುತ್ತಾರೆ ಇನ್ನು ಯಾರೋ ನಾಲ್ಕು ಜನ ಹಾಗೆ ಕೂತಿರುತ್ತಾರೆ. ನಾಳೆಕೆ ಅವರು ಯಾರೋ ಬರೆದಿರತಕ್ಕಂತಹ ಯಾರೋ ಒಬ್ಬ, ಇಬ್ಬರು ಬರೆದಿರತಕ್ಕಂತಹ ನೋಟ್ಸ್ಅನ್ನ ಫೋಟೋ ತೆಗೆದು ಪಿಡಿಎಫ್ ಮಾಡ್ಕೊಂಡು ಜೆರಾಕ್ಸ್ ತಗೊಂಡು ಇವತ್ತು ಓದುತ್ತಾ ಇದ್ದಾರೆ ಮಕ್ಕಳು. ಹಾಗಾಗಿ ಇವತ್ತು ಬರವಣಿಗೆಯ ಕೌಶಲ್ಯ ಅಂತಕಂತದ್ದು ಇವತ್ತು ಮಕ್ಕಳು ಕಳೆದುಕೊಳ್ಳುತ್ತಾ ಇದ್ದಾರೆ. ಇವತ್ತು ಸಾಹಿತ್ಯವು ಕೂಡ ಇವತ್ತು ಕ್ರಮೇಣ ಏನಾಗ್ತಾ ಇದೆ? ಕಡಿಮೆ ಆಗ್ತಾ ಇದೆ. ಓದುವಿಕೆ ಅಂತಕಂತದ್ದು ಕಡಿಮೆ ಆಗ್ತಾ ಇದೆ. ಮೊಬೈಲ್ ಬಂದಮೇಲೆ ಹೆಚ್ಚಾಗಿ ಇವತ್ತು ಅಂತರ್ಜಾಲ ತಾಣಗಳಲ್ಲಿ ಮಕ್ಕಳು ಮುಳುಗಿಕೊಳ್ಳುತ್ತಾ ಇದ್ದಾರೆ. ಇವತ್ತು ನಮ್ಮ ಅಸ್ಮಿತೆಗೆ ಕಾರಣವಾಗಿರುವ ನಾಡು ನುಡಿಗೆ ಸಂಬಂಧಪಟ್ಟಂತಹ ಕೃತಿಗಳನ್ನು, ಪುಸ್ತಕಗಳನ್ನು ಇವತ್ತು ಮಕ್ಕಳು ಓದುತ್ತಾ ಇಲ್ಲ. ಅವುಗಳ ಬಗ್ಗೆ ಗಮನವನ್ನು ಹರಿಸುತ್ತಾ ಇಲ್ಲ. ಅಷ್ಟೇ ಅಲ್ಲ ಇವತ್ತು ಮೊಬೈಲ್ ಬಂದಮೇಲೆ, ಫೋನ್ ಬಂದಮೇಲೆ ಇವತ್ತು ಇಂಟರ್ನೆಟ್ ಸೇವೆ ಸಿಕ್ಕಿದ ಮೇಲೆ ನಮ್ಮ ಸಂಸ್ಕೃತಿಯ ಮೇಲು ಕೂಡ ಏನಾಗ್ತಾ ಇದೆ ಅದು ಪ್ರಭಾವವನ್ನು ಬೀರ್ತಾ ಇದೆ. ಯುಗಾದಿ ಇಡೀ ಪ್ರಕೃತಿಯಲ್ಲಿ ಬದಲಾವಣೆಗೆ ಕಾರಣ ಆಗುತ್ತೆ. ಅದು ಈ ನಾಡಿನ ಸಂಸ್ಕೃತಿಯ ಭಾಗವಾಗಿ ಬಂದಿರತಕ್ಕಂತಹ ಹಬ್ಬ. ಆದರೆ ಇವತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಇಷ್ಟರ ಮಟ್ಟಿಗೆ ಬೀರಿದೆ ಅಂತಂದರೆ ಇವತ್ತು ನಾವು ಡಿಸೆಂಬರ್ 31ರ ರಾತ್ರಿ ಇವತ್ತು ಮಧ್ಯಪಾನವನ್ನು ಸೇವನೆ ಮಾಡಿಕೊಳ್ಳುತ್ತಾ, ಮಾಂಸಾಹಾರವನ್ನು ಸೇವನೆ ಮಾಡಿಕೊಳ್ಳುತ್ತಾ ಇವತ್ತು ಯುವಕ ಯುವತಿಯರು ಎಗ್ಗಿಲ್ಲದೆ ರಸ್ತೆಗಳಲ್ಲಿ ಇವತ್ತು ಹೊಸ ವರ್ಷವನ್ನು ಆಚರಿಸತಕ್ಕಂತಹ ಸಂದರ್ಭದ ಕಾಲಘಟ್ಟದಲ್ಲಿ ನಾವು ಬದುಕುತ್ತಾ ಇದ್ದೀವಿ. ಇವತ್ತು ನೀವು ಬೆಂಗಳೂರಿನ ಎಂಜಿ ರಸ್ತೆಗಳು ನೀವು ಡಿಸೆಂಬರ್ ನ 31ರ ರಾತ್ರಿ ಯುವಕ ಯುವತಿಯರು ವಿಚಿತ್ರ ವಿಚಿತ್ರವಾಗಿರತಕ್ಕಂತಹ ವೇಷಭೂಷಣಗಳನ್ನು ಧರಿಸಿಕೊಂಡು ಅವರು ಹೊಸ ವರ್ಷವನ್ನು ಆಚರಿಸುತ್ತಾ ಇರತಕ್ಕಂತಹ ಈ ಕಲ್ಚರ್ ಇದೆಯಲ್ಲಾ ಈ ಕಲ್ಚರ್ ಇವತ್ತು ಪಾಶ್ಚಿಮಾತ್ಯದ ಕಡೆಯಿಂದ ಒಳಗೆ ಬರುತ್ತಾ ಇದೆ. ನಮ್ಮ ಸಂಸ್ಕೃತಿ ಅಂತಕಂತದ್ದು ಇವತ್ತು ಏನಾಗ್ತಾ ಇದೆ? ಕಣ್ಮರೆಯಾಗುತ್ತಿದೆ. ಹಾಗಾಗಿ ಈ ಫೋನ್ ಈ ಅಂತರ್ಜಾಲ, ಈ ಸ್ಮಾರ್ಟ್ ಫೋನ್ಗಳ ಹಾವಳಿಯಿಂದಾಗಿ ಇವತ್ತು ಭಾಷೆ, ಸಾಹಿತ್ಯ, ಸಂಸ್ಕೃತಿಗಳು ಕೂಡ ಏನಾಗ್ತಾ ಇದಾವೆ? ನಶಿಸುತ್ತಾ ಇದಾವೆ ಅಂತ ಹೇಳಿ ಲೇಖಕರು ಬೆಳಕನ್ನು ಚೆಲ್ಲುತ್ತಾರೆ. ಇವತ್ತು ಆಧುನಿಕ ನಾಗರಿಕ ಜಗತ್ತು ವಿಪರೀತವಾಗಿ ಇವತ್ತು ಕೊಳ್ಳುಬಾಕ ಸಂಸ್ಕೃತಿಯನ್ನು ಇವತ್ತು ಅದು ಸೃಷ್ಟಿ ಮಾಡುತ್ತಾ ಇದೆ. ಇವತ್ತು ಕೊಳ್ಳುಬಾಕ ಸಂಸ್ಕೃತಿಯಿಂದ ಇವತ್ತು ನಾವು ಮೈತುಂಬ ಸಾಲ ಆಗಿಲ್ಲ ಮಾಡಿಕೊಂಡು ಇವತ್ತು ವಸ್ತುಗಳನ್ನು ಖರೀದಿ ಮಾಡ್ತಾ ಇದ್ದಾವೆ. ಇವತ್ತು ಬೇಕಿದ್ದು ಬೇಕಿಲ್ಲದ ವಸ್ತುಗಳನ್ನು ಖರೀದಿ ಮಾಡುತ್ತಾ ಇದಾವೆ. ಇವತ್ತು ನೀವು ಸೂಪರ್ ಮಾರ್ಕೆಟ್ಗಳಿಗೆ ಹೋದರೆ ನೀವು ತಗೊಳ್ಳುವುದಕ್ಕೆ ಒಂದೆರಡು ವಸ್ತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೆಗಿಬೇಕು ಅಂತ ಒಳಗೆ ಹೋಗುತ್ತೀರಾ. ಆದರೆ ನಿಮ್ಮ ಕೈಗೆ ಕೊಡತಕ್ಕಂತಹ ಆ ದೊಡ್ಡ ಬ್ಯಾಗ್ ನಿಮಗೆ ಗೊತ್ತಿಲ್ಲದ ಹಾಗೆ ಅದನ್ನು ತುಂಬಿಸುವ ಹಾಗೆ ನಮ್ಮ ಮನಸ್ಥಿತಿಯನ್ನು ಆ ಮಾರ್ಕೆಟಿನ ವ್ಯವಹಾರ ಅಂತಕಂತದ್ದು ನಮ್ಮನ್ನು ಬದಲಾಯಿಸಿ ಬಿಡುತ್ತೆ.

[12:57]ಎರಡು ವಸ್ತುಗಳನ್ನು ತಗೊಳ್ಳೋಕೆ ಹೋಗಿರತಕ್ಕಂತವರು ಭರ್ತನು ಹಲವಾರು ವಸ್ತುಗಳನ್ನು ತೆಗೆದುಕೊಂಡು ಬಂದು ಇವತ್ತು ನಾವು ಹಣವನ್ನು ವ್ಯರ್ಥ ಮಾಡುತ್ತಾ ಇದಾವೆ. ಹಾಗಾಗಿನೇ ಲೇಖಕರು ಹೇಳುತ್ತಾ ಇದ್ದಾರೆ ಇವತ್ತು ಎಲ್ಲವನ್ನು ತೆಗೆದುಕೊಂಡು ಹೋಗುವ ಪರ್ಚೇಸ್ ಮಾಡತಕ್ಕಂತಹ ಈ ಕೊಳ್ಳುಬಾಕ ಸಂಸ್ಕೃತಿ ಉಳಿಯುತ್ತಾ ಇದೆ. ಹಾಗಾಗಿ ಇವತ್ತು ಮಕ್ಕಳು ಸಿಕ್ಕಾಪಟ್ಟೆ ತಿಂಗಳಿಗೆ ಒಂದು ಸಿಮ್ಗಳನ್ನು ಚೇಂಜ್ ಮಾಡ್ತಾ ಇದ್ದಾರೆ. ಆರು ತಿಂಗಳಿಗೆ ಒಂದು ಸಿಮ್ಗಳನ್ನು ಚೇಂಜ್ ಮಾಡ್ತಾ ಇದ್ದಾರೆ. ಯಾವುದರ ಪರಿಣಾಮ ಇದು? ಕೊಳ್ಳುಬಾಕ ಸಂಸ್ಕೃತಿಯ ಪರಿಣಾಮ. ಇವತ್ತು ಮಕ್ಕಳ ಮೇಲೆ, ಇವತ್ತು ಯುವಕ ಯುವತಿಯರ ಮೇಲೆ ಬೇರೆ ಬೇರೆ ರೀತಿಯ ಕೊಡುಗೆಗಳನ್ನು ಕೊಟ್ಟು ಅವರನ್ನು ತಮ್ಮ ತೆಕ್ಕೆಗೆ ಇವತ್ತಿನ ಕಂಪನಿಗಳು ತೆಗೆದುಕೊಂಡು ಹೋಗುತ್ತಾ ಇದಾವೆ. ಇವು ಮುಂದೊಂದು ದಿನ ಮಕ್ಕಳ ಮೇಲೆ ಬಹು ದೊಡ್ಡ ಪರಿಣಾಮವನ್ನು ಬೀರುತ್ತವೆ ಅಂತ ಹೇಳುತ್ತಾರೆ. ಅಷ್ಟೇ ಅಲ್ಲ ಇವತ್ತು ಈ ಮೊಬೈಲ್ನಿಂದಾಗಿ ಅನೇಕ ಜನ ಎಷ್ಟು ಮಟ್ಟಿಗೆ ಮೊಬೈಲ್ನಿಂದ ಸಮಸ್ಯೆ ಆಗ್ತಾ ಇದೆ ಅಂತಂದರೆ ಫೋನ್ ಮಾಡ್ತಾರೆ ಅಂತ ಹೇಳಿ ಎಷ್ಟೋ ಜನ ಇವತ್ತು ತಮ್ಮ ಕಾಲ್ಗಳನ್ನು ಡೈವರ್ಟ್ ಮಾಡಿಕೊಂಡು ಇನ್ನೊಂದು ಕಡೆಗೆ ಡೈವರ್ಟ್ ಮಾಡಿ ಇವತ್ತು ಅವರು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡತಕ್ಕಂತದ್ದು. ಹೊತ್ತಲ್ಲದ ಹೊತ್ತಲ್ಲಿ ಮೊಬೈಲ್ಗಳನ್ನು ಮಾಡಿ ಹಿಂಸೆ ಕೊಡತಕ್ಕಂತಹ ವ್ಯಕ್ತಿಗಳು ಇವತ್ತು ಇನ್ನಷ್ಟು ಸಂದಿಗ್ಧತೆಯನ್ನು ಈ ಸಮಾಜದಲ್ಲಿ ಸೃಷ್ಟಿ ಮಾಡ್ತಾ ಇದ್ದಾರೆ. ಈ ಹೊತ್ತಲ್ಲಿ ಒಬ್ಬ ವ್ಯಾಕರಣಕಾರ ಒಂದು ಎಸ್ಎಂಎಸ್ ಅನ್ನು ಹೇಗೆ ಬಳಸುತ್ತಾನೆ ಇವತ್ತಿನ ಪ್ರಸ್ತುತ ಸನ್ನಿವೇಶಕ್ಕೆ ಅಂತ ಹೇಳಿ ಲೇಖಕರು ಕಾವೇರಿ ವಿವಾದವನ್ನು ಕುರಿತು ಹೇಳುತ್ತಾರೆ. ಕಾವೇರಿಯ ವಿವಾದಕ್ಕೆ ಸಂಬಂಧಪಟ್ಟ ಹಾಗೆ ಕೇಂದ್ರ ಸರ್ಕಾರದ ನ್ಯಾಯಮಂಡಳಿ ಒಂದು ತೀರ್ಪನ್ನು ಕೊಡುತ್ತೆ. ಆ ತೀರ್ಪಿನ ಪ್ರಕಾರ ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕಾದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಎಸ್ಎಂಎಸ್ ಹೇಗೆ ಇದೆ ಅಂತ ಅಂದ್ರೆ ಕೇಂದ್ರ ಸರ್ಕಾರ ಆದೇಶ ತಮಿಳುನಾಡು ಆಗಮ, ಕರ್ನಾಟಕ ಲೋಪ ಅಂತ ಹೇಳಿ ಒಂದು ಮೆಸೇಜ್. ಅಂದರೆ ಆದೇಶ ಸಂಧಿ. ಯಾರಿಗೆ ಆದೇಶ? ಕಾವೇರಿ ನೀರನ್ನು ಬಿಡಬೇಕು ಅಂತ ಹೇಳಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಆದೇಶವನ್ನು ಮಾಡಿದೆ. ಹಾಗಾಗಿ ಕರ್ನಾಟಕದ ಕಾವೇರಿ ನೀರು ತಮಿಳುನಾಡಿಗೆ ಹೋಗ್ತಾ ಇದೆ. ಹಾಗಾಗಿ ತಮಿಳುನಾಡಿಗೆ ಆಗಮನ. ಹಾಗಾದರೆ ನೀರನ್ನು ಕಳೆದುಕೊಂಡಿದ್ದು ಯಾರು? ಕರ್ನಾಟಕ ಹಾಗಾಗಿ ಕರ್ನಾಟಕಕ್ಕೆ ಲೋಪವಾಯಿತು. ಕನ್ನಡದ ಸಂಧಿಗಳು ಯಾವುದು ಅಂತ ಅಂದರೆ ಆದೇಶ ಸಂಧಿ, ಆಗಮ ಸಂಧಿ, ಲೋಪ ಸಂಧಿ. ಈ ಮೂರು ಸಂಧಿಗಳನ್ನು ಕಾವೇರಿ ವಿವಾದಕ್ಕೆ ಹೇಗೆ ಬಳಸಿಕೊಂಡಿದ್ದಾರೆ ಅನ್ನೋದನ್ನು ಕೂಡ ಲೇಖಕರು ಇಲ್ಲಿ ಚರ್ಚೆ ಮಾಡುತ್ತಾರೆ. ಇವತ್ತು ಎಷ್ಟರ ಮಟ್ಟಿಗೆ ಮೊಬೈಲ್ ಫೋಬಿಯಾ ಅಂತಕಂತದ್ದು, ಫೋಬಿಯಾ ಅಂದರೆ ತಿರಸ್ಕಾರ ಅಂತ ಕರೀತೀವಿ, ಭಯ ಅಂತ ಕರೀತೀವಿ. ಈ ಫೋಬಿಯಾ ಅಂತಕಂತದ್ದು ಹಿಂಗೆ ನಡೆಯದೆ ಅಂತಂದರೆ ಇವತ್ತು ನೀವು ಮಹಾನಗರಗಳಲ್ಲಿ, ಬೆಂಗಳೂರು ಅಂತಕಂತ ಮಹಾನಗರಗಳಲ್ಲಿ ಇವತ್ತು ನೀವು ಹಲ್ಸನ್ ಜಾಕ್ಫ್ರೂಟ್ ಅಂತ ಕರೆದರೆ ಜನ ತಗೊಳ್ಳೋದು. ನೇರಳೆ ಹಣ್ಣನ್ನು ಜಾಮೂನ್ ಅಂತ ಕರೆದರೆ ಇಷ್ಟಪಡೋದು ಅಥವಾ ಪರ್ಪಲ್ ಫ್ರೂಟ್ ಅಂತ ಕರೆದರೆ ಜನ ತಗೊಳ್ಳತಕ್ಕಂತದ್ದು. ಹಾಗಾಗಿ ಇವತ್ತು ದೇಶೀಯ ಉತ್ಪನ್ನಗಳಾಗಿರತಕ್ಕಂತಹ ತಾಳೆಪಟ್ಟು, ಉತ್ತಪ್ಪಗಳನ್ನು ಇವತ್ತು ಯಾರು ಕೇಳಲ್ಲ ಇವತ್ತು. ಇವತ್ತು ಎಂತಹ ಸಂಸ್ಕೃತಿ ನಮ್ಮಲ್ಲಿ ಬರ್ತಾ ಇದೆ ಅಂತ ಅಂದರೆ ಫೀಜಾ ಮತ್ತು ಬರ್ಗರ್ ಸಂಸ್ಕೃತಿಗಳು ನಮ್ಮಲ್ಲಿ ಎಂಟ್ರಿ ಆಗ್ತಾ ಇದೆ. ನಮ್ಮ ಒಳಗೆ ಬರ್ತಾ ಇದೆ. ನಮ್ಮ ದೇಶೀಯ ಸಂಸ್ಕೃತಿ ಅಂತಕಂತದ್ದು ಇವತ್ತು ಏನಾಗ್ತಾ ಇದೆ ಈ ರೀತಿ ನಾಶ ಆಗ್ತಾ ಇದೆ. ಹಾಗಾಗಿ ಇವತ್ತು ಹಳ್ಳಿಮನೆ ಹಳ್ಳಿ ಸ್ಟೈಲ್ ಈ ತರದ ಒಂದು ಕಲ್ಚರ್ ಇವತ್ತು ನಮ್ಮೊಳಗೆ ಎಂಟ್ರಿ ಆಗ್ತಾ ನಮ್ಮ ಒಳಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಇವತ್ತು ಅದು ಸೃಷ್ಟಿ ಮಾಡ್ತಾ ಇದೆ ಅಂತ ಹೇಳುತ್ತಾರೆ. ಒಮ್ಮೆ ಹೀಗೆ ಬೆಂಗಳೂರಿನ ಮಹಾನಗರ ಸಾರಿಗೆಯಿಂದ ನಾನು ಪ್ರಯಾಣಿಸುತ್ತಾ ಇರಬೇಕಾದರೆ ನನ್ನ ಸ್ನೇಹಿತ ಫೋನ್ ಮಾಡಿದಾಗ ಎಲ್ಲಿದೀಯಾ ಅಂತ ಕೇಳಿದಾಗ ನಾನು ಬೆಂಗಳೂರಿನಲ್ಲಿ ಇದ್ದರೂ ಕೂಡ, ಬೆಂಗಳೂರಿನಿಂದ ಪ್ರಯಾಣ ಬಳಸುತ್ತಿದ್ದರೂ ಕೂಡ ಧಾರವಾಡದಲ್ಲಿದ್ದೀನಿ ಅಂತ ಹೇಳಿ ಸುಳ್ಳು ಹೇಳುತ್ತಿರತಕ್ಕಂತದ್ದನ್ನ ನಾನು ಬಸ್ ನಲ್ಲಿ ನೋಡಿದೆ. ಹಾಗಾಗಿ ಇವತ್ತು ಈ ಮೊಬೈಲ್ ಅಂತಕಂತದ್ದು ನಾವು ಎಲ್ಲೋ ಇದ್ದು ಇನ್ನೆಲ್ಲೋ ಇದ್ದೀವಿ ಅಂತ ಹೇಳತಕ್ಕಂತಹ, ಸುಳ್ಳು ಹೇಳತಕ್ಕಂತದ್ದನ್ನ ಇವತ್ತು ಕಲಿಸ್ತಾ ಇದೆ. ಹಾಗಾಗಿ ಇವತ್ತು ಮೊಬೈಲ್ ಸುಳ್ಳು ಹೇಳುವುದು ಹೇಗೆ ಅನ್ನೋದನ್ನು ಇವತ್ತು ನಮ್ಮನ್ನು ನಮ್ಮಲ್ಲಿ ಅದು ಸೃಷ್ಟಿ ಮಾಡ್ತಾ ಇದೆ. ಹಾಗಾಗಿ ಇವತ್ತು ಸುಳ್ಳು ಹೇಳುವುದನ್ನು ಇವತ್ತು ಕಲಿಸ್ತಾ ಇದೆ ಈ ಮೊಬೈಲ್ ಬಂದಮೇಲೆ ಸುಳ್ಳು ಹೇಳುವಂತಕ್ಕಂತ ಸಂಗತಿ ಜಾಸ್ತಿ ಆಗ್ತಾ ಇದೆ ನಮ್ಮಲ್ಲಿ ಅಂತ ಹೇಳುತ್ತಾರೆ. ಹಾಗಾಗಿ ಇವತ್ತು ನೀವು ಯಾವುದಾದರೂ ಬಸ್ ಗಳಲ್ಲಿ ನೋಡಿದರೆ ಸುಮಾರು ಪ್ರತಿ 10 ಜನರಲ್ಲಿ ಒಬ್ಬರಾದ್ರೂ ಇವತ್ತು ಫೋನ್ನಲ್ಲಿ ಮುಳುಗಿರುತ್ತಾರೆ. ಅಥವಾ ಧಾರಾವಾಹಿಯೋ, ಸಿನಿಮಾ ನೋಡುತ್ತಾ ಇವತ್ತು ಅಕ್ಕದಲ ಅಕ್ಕಪಕ್ಕದಲ್ಲಿ ಯಾರು ಕೂತಿದ್ದಾರೆ, ಯಾರು ಎದ್ದೋಗಿದ್ದಾರೆ ಅನ್ನೋದು ಕೂಡ ಗಮನ ಇಲ್ಲದಲ್ಲಿ ಇವತ್ತು ಫೋನ್ನಲ್ಲಿ ಇವತ್ತು ನಾವು ಮುಳುಗಿರುತ್ತೀವಿ ಅಂತ ಹೇಳಿ ಲೇಖಕರು ಹೇಳುತ್ತಾ ಹೋಗುತ್ತಾರೆ. ಹಾಗಾಗಿ ಇವತ್ತಿನ ನಾಗರಿಕ ಜಗತ್ತಲ್ಲಿ ಹಲವಾರು ಮಾಲಿನ್ಯಗಳಿದ್ದಾವೆ. ಆ ಹಲವಾರು ಮಾಲಿನ್ಯಗಳಲ್ಲಿ ಇವತ್ತು ಮೊಬೈಲ್ ಮಾಲಿನ್ಯವೂ ಕೂಡ ಒಂದಾಗಿ ಪರಿಣಾಮವನ್ನು ಬೀರ್ತಾ ಇದೆ. ಇವತ್ತು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿಯೂ ಕೂಡ ಇದರ ಸದ್ಬಳಕೆಗಿಂತ ಇವತ್ತು ದುರ್ಬಳಕೆಯೇ ಇವತ್ತು ಜಾಸ್ತಿ ಆಗ್ತಾ ಇದೆ ಅಂತಕ್ಕಂತಹ ಅನುಮಾನವನ್ನು ಲೇಖಕರು ಇಲ್ಲಿ ವ್ಯಕ್ತಪಡಿಸುತ್ತಾರೆ. ಯಾರು ಕೈಯಲ್ಲಿ ನೋಡಿದರು ಇವತ್ತು ಮೊಬೈಲ್. ಕೆಲವರಲ್ಲಿ ಎರಡೆರಡು ಫೋನ್, ಮೂರು ಮೂರು ಫೋನ್ಗಳು, ನಾಲ್ಕು ನಾಲ್ಕು ಸಿಮ್ಗಳನ್ನು ಹಾಕಿಕೊಂಡು ಇವತ್ತು ಸಿಕ್ಕಾಪಟ್ಟೆ ಮಾತಾಡ್ತಾ ಇರತಕ್ಕಂತದ್ದನ್ನ ಇವತ್ತು ನಾವು ನೋಡ್ತಾ ಇದೀವಿ, ಬಳಸುತ್ತಾ ಇರತಕ್ಕಂತದ್ದನ್ನ ನಾವು ನೋಡ್ತಾ ಇದೀವಿ. ಹಾಗಾಗಿ ನಾವು ಮೊಬೈಲ್ ಅಂತ ಕರೀತೀವಿ, ಫೋನ್ ಅಂತ ಕರೀತೀವಿ ಅಥವಾ ಸಂಚಾರವಾಣಿ, ಜಂಗಮವಾಣಿ, ಹಲವು ಹೆಸರುಗಳಲ್ಲಿ ನಾವು ಇದನ್ನ ಕರೀತಾ ಹೋಗುತ್ತೇವೆ. ಇವತ್ತು ಹೆಣ್ಣುಮಕ್ಕಳು ಕೂಡ ಮೊಬೈಲ್ ಬಳಸುವುದರಲ್ಲಿ ಹಿಂದೆ ಬಿದ್ದಿಲ್ಲ ಅಂತ ಹೇಳಿ ಲೇಖಕರು ಹೇಳುತ್ತಾ ಹೋಗುತ್ತಾರೆ. ಎಷ್ಟರ ಮಟ್ಟಿಗೆ ಅಂತ ಅಂದ್ರೆ ಯಾವಾಗಲೂ ಸದಾ ಅವರ ಕೈಯಲ್ಲಿ ಆ ಫೋನ್ ಅಂತಕಂತದ್ದು ಇರುತ್ತೆ. ಹೇಗೆ ಒಬ್ಬ ತಾಯಿಯ ಸೊಂಟದಲ್ಲಿ ಇರತಕ್ಕಂತಹ ಮಗು ಕೆಳಗೆ ಇಳಿದಿದ್ ಕೂಡಲೇ ಮಗು ಅಳುತ್ತೋ ಹಾಗೆ ಇವತ್ತಿನ ಹೆಣ್ಣುಮಕ್ಕಳು ಮೊಬೈಲ್ ಅನ್ನು ಯಾವಾಗಲೂ ತಮ್ಮ ಕೈಯಲ್ಲೇ ಅದು ಮಗುವಿನ ರೂಪದಲ್ಲಿ ಅದು ಹಿಡ್ಕೊಂಡು ಅಡ್ಡಾಡ್ತಾ ಇರುತ್ತಾರೆ.

[18:36]ಆ ಮಟ್ಟಿಗೆ ಇವತ್ತು ಮೊಬೈಲ್ ಅಂತಕಂತದ್ದು ಇವತ್ತು ಎಲ್ಲಾ ವರ್ಗದವರ ವರ್ಗದವರನ್ನು ಕೂಡ ಅದನ್ನು ಏನು ಮಾಡ್ತಾ ಇದೆ? ಸೆಳೀತಾ ಇದೆ ಅಂತ ಹೇಳುತ್ತಾರೆ. ಅಷ್ಟೇ ಅಲ್ಲ ಇವತ್ತು ನಮಗೆ ಇಷ್ಟ ಇರಲಿ, ಇಲ್ಲದೆ ಇರಲಿ ಇವತ್ತು ಫೋನ್ನಲ್ಲಿ ಗಂಟೆಗಟ್ಟಲೆ ಮಾತನಾಡುವ ಹಾಗೆ ಒಂದು ವ್ಯವಸ್ಥೆ ಸನ್ನಿವೇಶವನ್ನು ಸೃಷ್ಟಿ ಮಾಡ್ತಾ ಇದೆ. ಇವತ್ತು ನಾವು 2000, 3000 ಕೊಟ್ಟು ವರ್ಷದ ಪ್ಯಾಕ್ ಹಾಕಿಸಿಕೊಳ್ಳುತ್ತೇವೆ, ರಿಚಾರ್ಜ್ ಮಾಡಿಸಿಕೊಳ್ಳುತ್ತೇವೆ. ಇವತ್ತು ನಮಗೆ ಫೋನ್ ಬಂದಿಲ್ಲ ಅಂದ್ರೆ ಮಾಡ್ತಿರತಕ್ಕಂತ ರೀಚಾರ್ಜ್ ಎಲ್ಲಿ ವೇಸ್ಟ್ ಆಗುತ್ತೋ ಅಂತ ಹೇಳಿ ನಮಗೆ ಇಷ್ಟ ಇಲ್ಲದಿದ್ದರೂ ಕೂಡ ನಾವೇನು ಮಾಡ್ತೀವಿ ಗಂಟೆಗಟ್ಟಲೆ ಇನ್ನೊಬ್ಬರ ಜೊತೆಗೆ ಮಾತಾಡ್ತೇವೆ. ಅಥವಾ ಡಾಟಾ ಖಾಲಿಯಾಗಿಲ್ಲ ಅಂತ ಹೇಳಿ ವೇಸ್ಟ್ ಆಗುತ್ತೆ ಅಂತ ಹೇಳಿ ಖಾಲಿಯಾಗುವವರೆಗೆ ರಾತ್ರಿ ಮೊಬೈಲ್ ಅನ್ನು ಬಳಸುತ್ತಾ ಇದಾವೆ. ಹಾಗಾಗಿ ಇವತ್ತು ನಮಗೆ ಸಮಯ ವ್ಯರ್ಥ ಮಾಡುವ ಹಾಗೆ, ಸಮಯವನ್ನು ಕಳೆಯುವ ಹಾಗೆ ಇವತ್ತು ಮೊಬೈಲ್ ಅಂತಕಂತದ್ದು ನಮ್ಮೊಳಗೆ ಒಂದು ಮನೋರೋಗವನ್ನು ಸೃಷ್ಟಿ ಮಾಡುತ್ತಾ ಇರತಕ್ಕಂತದರ ಬಗ್ಗೆನೂ ಕೂಡ ಲೇಖಕರು ಏನು ಮಾಡ್ತಾ ಇದ್ದಾರೆ? ಹೇಳುತ್ತಾ ಹೋಗುತ್ತಾರೆ. ಹಾಗಾಗಿ ಇವತ್ತು ಮಿಸ್ ಕಾಲ್ ಮಾಮಗಳ ಸಂಖ್ಯೆಯ ಬಗ್ಗೆನೂ ಕೂಡ ಇಲ್ಲಿ ಏನು ಮಾಡ್ತಾರೆ ಲೇಖಕರು ಹೇಳುತ್ತಾರೆ. ಅಂದ್ರೆ ಹೊತ್ತಲ್ಲದ ಹೊತ್ತಲ್ಲಿ ಫೋನ್ ಮಾಡತಕ್ಕಂತದ್ದು, ಮಿಸ್ ಕಾಲ್ ಕೊಡ್ತಕ್ಕಂತದ್ದು, ಮಿಸ್ ಕಾಲ್ ಕೊಟ್ಟು ಇರಿಟೇಟ್ ಮಾಡ್ತಕ್ಕಂತ ಅನೇಕ ಸಂದರ್ಭಗಳನ್ನು ಕೂಡ ಇವತ್ತು ಲೇಖಕರು ಈ ಪಟ್ಟಿಯಲ್ಲಿ ಚರ್ಚೆ ಮಾಡುತ್ತಾರೆ. ಆ ಕಡೆಯಿಂದ ಕಾಲ್ ಬರೋದನ್ನೇ ಕಾಯ್ದು ರಿಸೀವ್ ಮಾಡ್ತಕ್ಕಂತದ್ದು ಹೀಗೆ ಒಬ್ಬರಿಗೆ ಇನ್ನೊಬ್ಬರಿಗೆ ಮಿಸ್ ಕಾಲ್ ಕೊಡ್ತಕ್ಕಂತ ಒಂದು ಸಂಸ್ಕೃತಿ ಕೂಡ ನಿರ್ಮಾಣ ಆಗ್ತಾ ಇದೆ. ಕಿರಿಕಿರಿ ಅಂತಕಂತದ್ದು ಉಂಟಾಗ್ತಾ ಇದೆ ಅಂತ ಹೇಳುತ್ತಾರೆ. ಅದರ ಜೊತೆಯಲ್ಲಿ ಇನ್ನೊಂದನ್ನು ಬಹಳ ಮುಖ್ಯವಾಗಿ ಹೇಳುತ್ತಾರೆ. ಭಯೋತ್ಪಾದಕರಿಗೆ ಹೋಲಿಸುತ್ತಾರೆ. ಅತಿಯಾಗಿ ಫೋನ್ ಮಾಡ್ತಕ್ಕಂತ ಮಂದಿಯನ್ನು ಯಾರು ಪರಿಚಿತರ ಬಳಿ ಕರಾರು ವಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಹೊತ್ತಲ್ಲದ ಹೊತ್ತಲ್ಲಿ ಏನು ಮಾಡ್ತಾರೆ ಅವರು ಫೋನ್ ಮಾಡ್ತಾರೆ. ಕೆಲವೊಮ್ಮೆ ನಮ್ಮ ಹೆಸರನ್ನು ಕೇಳಿ ನಾನು ಯಾರು ಗೊತ್ತಾ ಅಂತ ಕೇಳುತ್ತಾರೆ. ಆ ಕಡೆ ಇರತಕ್ಕಂತ ವ್ಯಕ್ತಿ ಗೊತ್ತಿಲ್ಲ ಅಂತ ಅಂದ್ರೆ ಬಿಡಪ್ಪೋ ನೀನು ಬಹಳ ದೊಡ್ಡ ಮನುಷ್ಯ ಆಗಿದೀಯಾ. ಇವಾಗ ಎಲ್ಲಿ ನೀನು ನಮ್ಮ ಹೆಸರೆಲ್ಲ ನೆನಪಿಟ್ಟುಕೊಂಡಿರುತ್ತೀಯ ಅಂತ ಹೇಳಿ ಫೋನ್ ಕಟ್ ಮಾಡಿಬಿಡುತ್ತಾರೆ. ಅಂದರೆ ಅವರ ನಂಬರು ಇರಲ್ಲ ಯಾರ ತಕ್ಕೋ ನಂಬರ್ ಇಸ್ಕೊಳ್ಳುತ್ತಾರೆ. ನಂಬರ್ ಇಸ್ಕೊಂಡು ಹೊತ್ತಲ್ಲದ ಹೊತ್ತಲ್ಲಿ ಫೋನ್ ಮಾಡಿ ನಮ್ಮ ಬಗ್ಗೆ ವಿಚಾರಿಸುತ್ತಾ ನನ್ನನ್ನು ನೀನು ಕಂಡುಹಿಡಿಯಲಿಲ್ಲ ಅಂತ ಹೇಳಿ ನಮ್ಮನ್ನೇ ಒಂದು ರೀತಿ ಭಯೋತ್ಪಾದಕರನ್ನಾಗಿ ಅವರು ಟ್ರೀಟ್ ಮಾಡ್ತಾ ಇರ್ತಾರೆ. ಹಾಗಾಗಿ ಇವು ಇನ್ನಷ್ಟು ಸಮಸ್ಯೆಗಳಿಗೆ ಕಾರಣ ಆಗುತ್ತವೆ. ಇವತ್ತು ಮೊಬೈಲ್ ಅಂತಕಂತದ್ದು ಒಂದು ರೀತಿ ತರಕಾರಿ ವ್ಯಾಪಾರದ ಹಾಗೆ ಇವತ್ತು ಅದು ಮಾರುಕಟ್ಟೆಯನ್ನು ಸೇರ್ತಾ ಇದೆ. ಇವತ್ತು ಎಲ್ಲರ ಕೈಗೂ ಮೊಬೈಲ್ ಅಂತಕಂತದ್ದು ಇವತ್ತು ಮನೆ ಬಾಗಿಲಿಗೆ ಬರುವ ಮಟ್ಟಕ್ಕೆ ಇವತ್ತು ಬೆಳೆದು ನಿಂತಿದೆ ಅಂತ ಹೇಳುತ್ತಾರೆ.

[21:03]ಹಾಗಾಗಿ ಇವತ್ತು ಮೊಬೈಲ್ನಲ್ಲಿ ಹೂತು ಹೋಗಿರತಕ್ಕಂತ ಜನಗಳು ಪರಸ್ಪರ ಎದುರಾದಾಗಲೂ ಕೂಡ ಮಾತನಾಡುತ್ತಾ ಇಲ್ಲ. ಹತ್ತಿರ ಇದ್ದಾಗ ಮನುಷ್ಯ ಮಾತನಾಡುತ್ತಾ ಇಲ್ಲ, ದೂರ ಇದ್ದಾಗ ಮಾತನಾಡಬೇಕು ಅಂತ ಹೇಳಿ ಫೋನ್ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾನೆ. ಆದರೆ ಹತ್ತಿರ ಬಂದಾಗ ವ್ಯಕ್ತಿಗಳು ಮಾತನಾಡುತ್ತಾ ಇಲ್ಲ, ಮೌನಿ ಆಗ್ತಾ ಇದ್ದಾರೆ. ಹಾಗಾಗಿ ಇವತ್ತು ನಡುಗಡ್ಡೆಯಂತೆ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ. ಇದನ್ನೇ ಏನು ಅಂತಾರೆ ಲೇಖಕರು ಮೊಬೈಲ್ ಫೋಬಿಯಾ ಅಂತಕಂತ ಮೊಬೈಲ್ ಫೋಬಿಯಾ ಅಂತ ಹೇಳಿ ಕರೀತಾರೆ. ಹಾಗಾಗಿ ನಮ್ಮ ತಲೆಮಾರು ಕಂಡಂತಹ ಅದ್ಭುತ ತಂತ್ರಜ್ಞಾನದ ಫಲ ನಿಜ ಮೊಬೈಲ್. ಆದರೆ ಇವತ್ತು ಸಮರ್ಪಕವಾಗಿ ಆ ಫೋನ್ ಅಂತಕಂತದ್ದು ಬಳಕೆ ಆಗ್ತಾ ಇಲ್ಲ. ವಿಪರೀತವಾಗಿ ಮಾತಿನ ಮಾಲಿನ್ಯವನ್ನು ಅದು ಸೃಷ್ಟಿ ಮಾಡ್ತಾ ಇದೆ. ಇವತ್ತು ಮೊಬೈಲ್ ಅಂತಕಂತದ್ದು ಒಂದು ಚಟವಾಗಿ ಇವತ್ತು ಯುವಕ ಯುವತಿಯರಲ್ಲಿ, ಸಮಾಜದಲ್ಲಿ ಅದು ಚಟಗಾರನನ್ನು ಸೃಷ್ಟಿ ಮಾಡ್ತಾ ಇದೆ. ಇವತ್ತು ಚಿಕ್ಕ ಮಕ್ಕಳಿಗೆ ಕೊಡ್ತಕ್ಕಂತಹ ಹಣ ಚಾಕಲೇಟ್ಗೆ ಅಂತ ಹೇಳಿ ಕೊಡ್ತಕ್ಕಂತ ಹಣವನ್ನು ಕೂಡ ಇವತ್ತು ಏನು ಮಾಡ್ತಾ ಇದೆ? ಆ ಪುಡಿಗಾಸನ್ನು ಕೂಡ ಈ ಮೊಬೈಲ್ ಗೀಳು ಅಂತಕಂತದ್ದು ಈ ಮೊಬೈಲ್ನ ಗೀಳಿನ ನೀಚತನಕ್ಕೆ ಒಳಗಾಗಿರತಕ್ಕಂತಹ, ನೀಚತನಕ್ಕೆ ಒಳಗಾಗಿರತಕ್ಕಂತಹ ಈ ವ್ಯವಸ್ಥೆ ಆ ಮಕ್ಕಳ ಕೈಯಲ್ಲಿ ಕೂಡ ಏನು ಮಾಡ್ತಾ ಇದೆ ಹಣವನ್ನು ದೋಚುತ್ತಾ ಇದೆ. ಇವತ್ತು ಮಕ್ಕಳೆಲ್ಲವನ್ನೂ ತೆಗೆದುಕೊಂಡು ಹೋಗಿ ಮೊಬೈಲ್ಗೆ ರೀಚಾರ್ಜ್ ಮಾಡಿಸ್ತಾ ಇದ್ದಾರೆ. ಡಾಟಾವನ್ನು ಎಂಟ್ರಿ ಮಾಡಿಸ್ತಾ ಇದ್ದಾರೆ. ಹಾಗಾಗಿ ಇವತ್ತು ಅವರ ಕೈಯಲ್ಲಿರುವ ಹಣವನ್ನು ಕೂಡ ಕಸ್ಕೊಳ್ಳುತ್ತಾ ಇದೆ. ಹಾಗಾಗಿ ಇವತ್ತು ನೀವು ಏನಾದರೂ ನಿಮ್ಮ ಮಕ್ಕಳು ಹಾಳಾಗಬೇಕು ಅಂತ ಅಂದ್ರೆ ಒಂದು ಫೋನ್ ಅನ್ನು ಕೊಡ್ತಿಸಿದರೆ ಸಾಕು. ನೀವು ಹೇಳೋದು ಬೇಡ. ಅವರೇ ಹಾಳಾಗ್ತಕ್ಕಂತ ಸನ್ನಿವೇಶದಲ್ಲಿ ಇವತ್ತು ನಾವಿದ್ದೀವಿ. ಹಾಗಾಗಿನೇ ಇಡೀ ಪ್ರಬಂಧದ ಒಳಗೆ ಈರಪ್ಪ ಎಂ ಕಂಬಳಿ ಅವರು ಮೊಬೈಲ್ ಅಂತಕಂತ ಗೀಳು ಯಾವ ರೀತಿಯಲ್ಲಿ ಇವತ್ತು ನಮ್ಮ ಸಮಾಜವನ್ನು ಆವರಿಸಿದೆ? ಪ್ರತಿಯೊಂದನ್ನು ಕೊಂಡುಕೊಳ್ಳತಕ್ಕಂತ ನಮ್ಮ ಸಂಸ್ಕೃತಿ ಹೇಗೆ ಇವತ್ತಿನ ಯುವಶಕ್ತಿಯನ್ನು ಕೆಟ್ಟ ದಾರಿಗೆ ತಳ್ಳುತ್ತಾ ಇದೆ?

[22:56]ಇವತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಾವ ರೀತಿಯಲ್ಲಿ ಮೊಬೈಲ್ಗೆ ಅಡಿಕ್ಟ್ ಆಗ್ತಾ ಇದ್ದಾರೆ? ಈ ಎಲ್ಲಾ ಅಂಶಗಳ ಸುತ್ತ ಲೇಖಕರು ಈ ಲೇಖನದಲ್ಲಿ ಚರ್ಚೆ ಮಾಡ್ತಾ ಹೋಗುತ್ತಾರೆ. ಹಾಗಾಗಿ ಇವತ್ತು ನಾವು ಇಂತಹ ಮೊಬೈಲ್ನ ಅಂತರ್ಜಾಲದ ಅಂತರ್ಜಾಲ ತಾಣಗಳ ಮನೋರೋಗದಿಂದ ಹೊರಗಡೆ ಬರಬೇಕು. ಇವತ್ತು ಎಷ್ಟೋ ಚಿಕ್ಕ ವಯಸ್ಸಿನ ಮಕ್ಕಳು ಅತಿಯಾಗಿ ಮೊಬೈಲ್ ಅನ್ನು ಬಳಸುವುದರಿಂದ ಕಣ್ಣುಗಳನ್ನು ಕಳೆದುಕೊಳ್ಳುತ್ತಾ ಇದ್ದಾರೆ. ನರ ದೌರ್ಬಲ್ಯಕ್ಕೆ ಇವತ್ತು ಅವರು ಒಳಗಾಗ್ತಾ ಇದ್ದಾರೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗ್ತಾ ಇರತಕ್ಕಂತದ್ದು ಫೋನ್ನ ಕಾರಣಕ್ಕಾಗಿ. ಹಾಗಾಗಿ ಇವತ್ತಿನ ಯುವ ಸಮುದಾಯ, ಯುವ ಜನಾಂಗ ಈ ಮೊಬೈಲ್ ಅನ್ನು ಸರಿಯಾಗಿ ಬಳಸಿದ್ದೇ ಆದರೆ ಅವರು ಉತ್ತಮವಾಗಿರತಕ್ಕಂತ ಬದುಕನ್ನು ಕಟ್ಟಿಕೊಳ್ಳಬಹುದು. ಅದನ್ನು ದುರ್ಬಳಕೆ ಮಾಡಿಕೊಂಡರೆ ಇಡೀ ತಮ್ಮ ಬದುಕನ್ನು ಅವರು ಹಾಳು ಮಾಡಿಕೊಳ್ಳುತ್ತಾರೆ ಅಂತಕ್ಕಂತ ವಿಚಾರಗಳನ್ನು ಲೇಖಕರು ಈ ಪಠ್ಯಭಾಗದಲ್ಲಿ ಚರ್ಚೆ ಮಾಡುತ್ತಾರೆ. ನಿಮಗೆ ಎರಡು ಅಂಕಗಳಿಗೆ ಲೇಖಕರ ಪರಿಚಯ ಅಥವಾ ಕೊಳ್ಳುಬಾಕ ಸಂಸ್ಕೃತಿ ಎಂದರೇನು? ಈ ತರದಲ್ಲಿ ಕೇಳುವ ಸಾಧ್ಯತೆಗಳು ಇರುತ್ತೆ. ಅಥವಾ ನೀವು ದೀರ್ಘ ಪ್ರಶ್ನೆಗಳು ಹೇಗೆ ಕೇಳಬಹುದು ಅಂತ ಅಂದರೆ ಮೊಬೈಲ್ ಫೋಬಿಯಾ ಪ್ರಬಂಧದ ಹಿನ್ನೆಲೆಯಲ್ಲಿ ಮೊಬೈಲ್ ಸಾಧಕ ಬಾಧಕಗಳ ಕುರಿತು ಚರ್ಚಿಸಿರಿ ಅಂತ ಕೇಳಬಹುದು. ಅಥವಾ ಮೊಬೈಲ್ ಫೋಬಿಯಾ ಪ್ರಬಂಧದ ಆಶಯವನ್ನು ವಿಶ್ಲೇಷಿಸಿರಿ ಈ ರೀತಿಯಾದರೂ ಕೂಡ ಕೇಳಬಹುದು. ಈ ಹಿನ್ನೆಲೆಯಲ್ಲಿ ನೀವು ಈ ಪಟ್ಟಿಯವನ್ನು ಗಮನಿಸಬೇಕಾಗುತ್ತೆ. ಹಾಗಾಗಿ ಒಟ್ಟಾರೆ ಮೊಬೈಲ್ ಫೋಬಿಯಾದ ಸಾಧಕ-ಬಾಧಕಗಳ ಬಗ್ಗೆ ನೀವು ಪ್ರಮುಖವಾಗಿ ಗಮನ ಕೊಡಬೇಕು. ಹೇಗೆ ಇದು ಯುವ ಜನಾಂಗವನ್ನು ಹಾಳು ಮಾಡ್ತಾ ಇದೆ? ಸರಿಯಾಗಿ ಬಳಸಿಕೊಳ್ಳಬೇಕಾಗಿರತಕ್ಕಂತ ನಾವು ಅದನ್ನು ಹೇಗೆ ಅತಿಯಾಗಿ ಬಳಸಿ ಇವತ್ತು ನಮ್ಮ ನೆಮ್ಮದಿಯನ್ನು ನಮ್ಮ ಬದುಕನ್ನು ಕಿಡಿಸಿಕೊಳ್ಳುತ್ತಾ ಇದ್ದೀವಿ ಅಂತಕ್ಕಂತದ್ದನ್ನ ಇವತ್ತು ನಾವೆಲ್ಲರೂ ಕೂಡ ಯೋಚಿಸತಕ್ಕಂತಹ ಸಂದರ್ಭದಲ್ಲಿ ನಾವಿದ್ದೀವಿ. ಇದಿಷ್ಟು ಕೂಡ ಈ ಪಟ್ಟಿಗೆ ಸಂಬಂಧಪಟ್ಟಿರತಕ್ಕಂತ ಅಂಶ ಮುಂದಿನ ತರಗತಿಯಲ್ಲಿ ಮತ್ತೊಂದು ಪಟ್ಟಿಯನ್ನು ಕುರಿತು ಚರ್ಚೆ ಮಾಡೋಣ ನಮಸ್ಕಾರ.

Need another transcript?

Paste any YouTube URL to get a clean transcript in seconds.

Get a Transcript