Thumbnail for Ep-4| ರಸ್ತೆ, ಆರೋಗ್ಯ, ಸರ್ಕಾರಿ ಶಾಲೆ..! ನನ್ನ ಊರಿಗೆ ನನ್ನ ವಿಶನ್..!‌| Sandeep Patil| Gaurish Akki Studio by Gaurish Akki Studio

Ep-4| ರಸ್ತೆ, ಆರೋಗ್ಯ, ಸರ್ಕಾರಿ ಶಾಲೆ..! ನನ್ನ ಊರಿಗೆ ನನ್ನ ವಿಶನ್..!‌| Sandeep Patil| Gaurish Akki Studio

Gaurish Akki Studio

17m 39s2,102 words~11 min read
YouTube auto captions
Transcript source

YouTube auto captions

This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.

Use this transcript
Related transcript hubs

[0:00]ಹಾನಗಲ್ ತಾಲೂಕಲ್ಲಿ ಏನು ಮಾಡ್ತೀರಾ ನೀವು ಏನು ಏನು ಅಭಿವೃದ್ಧಿ ಕಾರ್ಯಗಳನ್ನ ಮಾಡ್ತೀರಾ ಏನು ಸಮಸ್ಯೆಗಳಿದೆ ಮತ್ತು ಏನು ಪರಿಹಾರಗಳನ್ನ ಸೂಚಿಸ್ತೀರಿ ನಾ ಇನ್ನು ಎಲ್ ಕೆಜಿ ಅಲ್ಲಿ ಇದ್ದೀನಿ ಇನ್ನು ಪಿಎಚ್ಡಿ ಮಾಡೋದಿದೆ ನೋಡೋಣ ಹೋಗ್ತಾ ಹೋಗ್ತಾ ಏನೇನು ಬರುತ್ತೆ ಜನ ಏನೇನು ಕಲಿಸ್ತಾರೆ ಕುದುರೆ ರೇಸ್ ನಲ್ಲಿ ಕತ್ತೆ ಓಡಿಸಿ ಗೆಲ್ಲಕ್ಕೆ ಆಗಲ್ಲ ಕುದುರೆ ರೇಸ್ ನಲ್ಲಿ ಕುದುರೆನೇ ಓಡಿಸಬೇಕು ಜನ ಸ್ಪಂದನೆ ಸಿಕ್ತು ಅಂದ್ರೆ ಎರಡನೇ ಹಂತಕ್ಕೆ ಹೋಗ್ತೀನಿ ಸ್ಪಂದನೆ ಸಿಗಲಿಲ್ಲ ಅಂದ್ರೆ ಪರಿವರ್ತನೆ ಯಾತ್ರೆ ತನಕ ಹೋಗೋದೇ ಇಲ್ಲ ನನ್ನ ಪಾಡಿಗೆ ನಾನು ಕೋರ್ಟ್ ಕಡೆ ಹೋಗ್ತೀನಿ ಆಟೋಮ್ಯಾಟಿಕ್ ಆಗುವ ಸಿಸ್ಟಮ್ ಆಟೋಮ್ಯಾಟಿಕ್ ಆಗಿ ನಡೀತಾ ಇರುತ್ತೆ ನೀವೇನು ಉದ್ದಾರ ಆಗೋದಿಲ್ಲ

[0:47]ಈಗ ವಾಪಸ್ ನಾವು ಹಾನಗಲ್ಲಿಗೆ ಬರೋದಾದ್ರೆ ನಮ್ಮೂರು ನಮ್ಮವರು ಅನ್ನೋ ಸಂಘಟನೆಗೆ ಬರೋದಾದ್ರೆ ನೀವೇನು ಊರು ತಿರುಗುತ್ತಿದ್ದೀರಾ ಅದರ ಬಗ್ಗೆ ನೀವು ಹೇಳ್ತಾ ಇದ್ರಿ ಫಸ್ಟ್ ಎಲ್ಲಾ ಹಳ್ಳಿಗಳಿಗೆ ಭೇಟಿ ಕೊಡೋದು ಆಮೇಲೆ ಗ್ರಾಮ ಪಂಚಾಯಿತಿ ವಲಯದಲ್ಲಿ ಭೇಟಿ ಕೊಡೋದು ಅದಾದ ನಂತರ ನೀವು ನಾನು ಮೊದಲನೆಯದು ಬ್ರಾಡರ್ ಆಸ್ಪೆಕ್ಟ್ ಅಲ್ಲಿ ನೋಡಿದ್ರೆ ಎರಡು ಹಂತ ಹಿಡ್ಕೊಂಡಿದೀನಿ ಒಂದು ಸಂಘಟನೆ ಅಂತ ಫಸ್ಟ್ ಜನ ಎಪಿಸೋ ಕೆಲಸ ಜನ ಎದ್ದ ನಂತರ ಎರಡನೇ ಹಂತ ಆಯ್ಕೆಯ ಹಂತ ಅಂದರೆ ನಾನಲ್ಲ ಜನರ ಆಯ್ಕೆ ಮಾಡಬೇಕು ಅದು ಆಯ್ಕೆಯ ಹಂತ ಇದು ಎರಡು ಬ್ರಾಡರ್ ಆಸ್ಪೆಕ್ಟ್ ಈಗ ಸದ್ಯಕ್ಕೆ ನಾನು ಇನ್ನು ಸಂಘಟನೆ ಸಂಘಟನೆಯಲ್ಲಿ ಇದ್ದೀನಿ ಜನರು ಎಪಿಸೋ ಅಂತ ಕಾರ್ಯದಲ್ಲಿ ಇದ್ದೀನಿ ಸಂಘಟನೆಯ ಹಂತ ಮುಗಿದ ನಂತರ ಆ ಸಂಘಟನೆ ಶಕ್ತಿಯನ್ನು ಒಬ್ಬ ವ್ಯಕ್ತಿಯಲ್ಲಿ ತುಂಬಬೇಕು ಅದು ಆಯ್ಕೆ ಅಂತ ಸಂಘಟನೆ ಶಕ್ತಿಯನ್ನು ಒಬ್ಬ ವ್ಯಕ್ತಿ ತುಂಬಬೇಕು ಅವಾಗ್ಲೇ ಆ ವ್ಯಕ್ತಿ ಬಲಶಾಲಿ ಆಗುತ್ತಾನೆ ಆ ವ್ಯಕ್ತಿ ಯಾರು ಅನ್ನೋದು ಆಯ್ಕೆ ಅಂತ ನನಗೆ ನನ್ನ ದೃಷ್ಟಿಯಲ್ಲಿ ನಮ್ಮ ಜನ ಬಹಳ ಹುಷಾರಿದ್ದಾರೆ ಅವರು ಪ್ರಜ್ಞಾವಂತರು ಇದ್ದಾರೆ ಅದು ಹಾನಗಲ್ ತಾಲೂಕಿನವರು ಅತ್ಯಂತ ಪ್ರಜ್ಞಾವಂತರು ಇದ್ದಾರೆ ಅವರು ಯಾವಾಗ ಬೇಕೋ ಒಂದು ಸತಿ 40 ವರ್ಷದ ಹಿಸ್ಟರಿಯಲ್ಲಿ ಎರಡು ಸತಿ ಒಟ್ಟೊಟ್ಟಿಗೆ ಯಾರನ್ನು ಗೆಲ್ಲಲ್ಲ ಒಂದು ಸತಿ ಉದಾಸಿಯವರು ಗೆಲ್ಸಿದ್ದಾರೆ ಒಂದು ಸತಿ ಮನೋಹರ್ ತಹಸೀಲ್ದಾರ್ ಗೆಲ್ಸಿದ್ದಾರೆ

[2:16]ಅಂದರೆ ಚೆಕ್ ಅಂಡ್ ಬ್ಯಾಲೆನ್ಸ್ ಅಂತಾರೆ ಯಾವಾಗಲೂ ಮಾಡಿದ್ದಾರೆ ಅದರ ಅರ್ಥ ಎಷ್ಟು ಪ್ರಜ್ಞಾವಂತರು ಇದ್ದಾರೆ ಅಂತ ತಾನೇ ಅವರಿಗೆ ಕತ್ತೆ ಹಾಗೂ ಕುದುರೆ ನಡುವೆ ಇರುವ ವ್ಯತ್ಯಾಸ ಗೊತ್ತಿರುತ್ತೆ ಆಯ್ಕೆ ಹಂತ ಬಂದಾಗ ಕುದುರೆ ರೇಸ್ ನಲ್ಲಿ ಕತ್ತೆ ಓಡಿಸಿ ಗೆಲ್ಲಕ್ಕೆ ಆಗಲ್ಲ ಕುದುರೆ ರೇಸ್ ನಲ್ಲಿ ಕುದುರೆನೇ ಓಡಿಸಬೇಕು ಅನ್ನುವಂತಹ ವಿವೇಚನೆ ನಮ್ಮ ಜನಕ್ಕೆ ಬಹಳ ಚೆನ್ನಾಗಿದೆ ಕತ್ತೆ ಇದ್ದರೆ ಎಳಕಂತಾರೆ ಕುದುರೆ ಇದ್ದರೆ ಓಡಿಸ್ತಾರೆ ಸೋ ಹಾಗಾಗಿ ಈ ಆಯ್ಕೆ ಅಂತ ಬಂದಾಗ ಆ ವ್ಯಾಪ್ತಿಗೆ ಬರ್ತೀವಿ ಇದು ಎರಡು ಹಂತ ಅಂತ ಹೇಳಿದೀನಿ ಇದು ಬ್ರಾಡರ್ ಈಗ ನಮ್ಮೂರು ನಮ್ಮವರು ಅಡಿಯಲ್ಲಿ ಏನೇನು ಹೆಜ್ಜೆ ಇಡಬಹುದು ನೀವು ಅಂದ್ರೆ ನಾನು ಮೂರು ಮೂರು ಯಾತ್ರೆಗಳನ್ನು ಪ್ಲಾನ್ ಮಾಡಿದ್ದೀನಿ ಈಗ ಸದ್ಯಕ್ಕೆ ಮೊದಲನೇ ಯಾತ್ರೆಯಲ್ಲಿ ಇದ್ದೀನಿ ಅದು ಪರಿಚಯ ಯಾತ್ರೆ ನಾನು ಯಾರು ಅಂತ ಪರಿಚಯ ಮಾಡ್ಕೋಬೇಕು ನಾನು ಯಾವ ಹಳ್ಳಿಗೆ ಹೋದರೆ ಅವರು ಯಾರು ಅಂತ ಅವರು ಪರಿಚಯ ಆಗಬೇಕು ನನಗೆ ಇದು ಪರಿಚಯ ಯಾತ್ರೆ ಸ ನೀವು ಸಮಸ್ಯೆಗಳನ್ನು ಕೂಡ ಕೇಳ್ತಾ ಇದ್ದೀರಾ ಅವರು ಹೌದು ಓಕೆ ಇದು ಮೊದಲನೇ ಹಂತದಲ್ಲಿ ಪರಿಚಯ ಯಾತ್ರೆ ಅಂತ ಕರೆದರು ಕೂಡ ಪ್ಯಾರಲಲಿ ಯಾರ್ಯಾರು ನನಗೆ ಅಲ್ಲಲ್ಲಿ ಸಮಸ್ಯೆಗಳು ಅಥವಾ ಸಹಕಾರ ಕೇಳ್ತಾರೆ ಅದನ್ನೆಲ್ಲ ಮಾಡ್ತಾನೆ ಇದೆ ಅದು ಸೈಮಲ್ಟೇನಿಯಸ್ಲಿ ನಡೀತಾ ಇರುತ್ತೆ ಯಾಕೆಂದರೆ ನಮ್ಮ ಗುರಿ ಇರೋದು ಜನ ಸ್ಪಂದನೆ ಪರಿಚಯ ಆದಮೇಲೆ ಸ್ಪಂದನೆ ಮಾಡಬೇಕು ಅಂತ ಇಲ್ಲ ನಾವು ಹೋಗಲಿಲ್ಲ ಅಂತ ಹಳ್ಳಿಗಳಿಗೂ ಜನ ಯಾರಾದರೂ ನನಗೆ ಕಾಂಟ್ಯಾಕ್ಟ್ ಮಾಡುವುದರಲ್ಲಿ ನನ್ನ ಕೈಯಲ್ಲಿ ಆಗಿದ್ದು ಶಕ್ತಿ ಮೀರಿ ಪ್ರಯತ್ನ ಮಾಡ್ತೀನಿ ಅವರು ಸಹಕಾರ ಕೊಡ್ತಾ ಇದ್ದೀನಿ ಆದರೆ ಮೊದಲನೆಯದು ಪರಿಚಯ ಯಾತ್ರೆ ಪರಿಚಯ ಯಾತ್ರೆ ಆದ ನಂತರ ಮುಗಿದ ಮೇಲೆ ನನ್ನ ಟಾರ್ಗೆಟ್ 154 83 ಹಳ್ಳಿ ಮುಗಿಸಿದ್ದೀನಿ 154 ಇಸ್ ಮೈ ಟಾರ್ಗೆಟ್ ಅದು ಆದ ನಂತರ 42 ಗ್ರಾಮ ಪಂಚಾಯಿತಿ ವ್ಯಾಪ್ತಿಗಳು ಬರುತ್ತೆ ಅದಕ್ಕೆ ಅನುಭವ ಯಾತ್ರೆ ತೆಗಿತೀನಿ ಅನುಭವ ಯಾತ್ರೆ ಅಂದ್ರೆ ನಾನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆ ಗ್ರಾಮ ಪಂಚಾಯತಿಯಲ್ಲಿ ಏನೇನು ಸಮಸ್ಯೆಗಳಿದೆ ಹಾಗೂ ಏನೇನು ಅಭಿವೃದ್ಧಿ ಆಗೋಗಿದೆ ಎರಡನ್ನು ನಾನು ಕಲಿಬೇಕು ನೋಡಿ ನಾಯಕ ಆಗಬೇಕು ಅಂತ ಅಂದ್ರುನೋ ಅಥವಾ ನಾಯಕನಾದವನು ಹಿ ಶುಡ್ ಆಲ್ವೇಸ್ ಬಿ ಸ್ಟೂಡೆಂಟ್ ಫಸ್ಟ್ ಅವನು ವಿದ್ಯಾರ್ಥಿ ಆಗಬೇಕು ಸಮಾಜದಲ್ಲಿ ಅತ್ಯಂತ ಕನಿಷ್ಠ ವ್ಯಕ್ತಿ ಕೂಡ ಯಾವುದಾದರೂ ಒಂದು ಒಳ್ಳೆ ಪಾಠ ಕಲಿಸುವಂತಹ ಶಕ್ತಿ ಅವನ ಹತ್ತಿರ ಇರುತ್ತೆ ಎಸ್ ಎಸ್ ಅದನ್ನು ಕಲಿಯುವಂತ ವಿವೇಚನೆ ಹಾಗೂ ಮನೋಭಾವನೆ ನಮ್ಮಲ್ಲಿ ಇರಬೇಕು ಅದಕ್ಕೆ ಫಸ್ಟ್ ನಾನು ಸ್ಟೂಡೆಂಟ್ ಆಗಬೇಕು ವಿದ್ಯಾರ್ಥಿ ಆಗಬೇಕು 42 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೂಡ ಅನುಭವ ಯಾತ್ರೆ ಅನ್ನುವಂತದ್ದು ತೆಗಿಬೇಕು ಅಂತ ಎರಡನೇ ಹಂತ ಇದು ಮೂರನೆಯದು ಚುನಾವಣೆಗಿಂತ ಸ್ವಲ್ಪ ಮುಂಚೆ ಪರಿವರ್ತನೆ ಯಾತ್ರೆ ಮಾಡಬೇಕು ಅನ್ನುವಂತ ನನ್ನ ದೃಷ್ಟಿಕೋನ ಇದೆ ಪರಿವರ್ತನೆ ಅಂದರೆ ಏನು ಈಗ ಇರೋ ಸಿಸ್ಟಮ್ ಅನ್ನು ಬದಲಾಯಿಸಿ ಪರಿವರ್ತನೆ ಮಾಡಬೇಕು ಅಂದರೆ ಅದನ್ನು ಒಂದು ಪಾದಯಾತ್ರೆ ಮೂಲಕ ಮಾಡಬೇಕು ಅನ್ನುವಂತದ್ದು ನನ್ನ ಕಲ್ಪನೆ ಇದೆ ಅದು ಜನ ಯಾವ ರೀತಿ ಜೋಡಿಸ್ತಾರೆ ಆ ರೀತಿ ಮಾಡ್ಕೊಂಡು ಹೋಗೋಣ ಅನ್ನುವಂತದ್ದು ನನ್ನ ತಲೆಯಲ್ಲಿ ಇರೋದು ಈ ಮೂರು ಹಂತ ನನ್ನ ಮೇಲೆ ಡಿಪೆಂಡ್ ಆಗಿಲ್ಲ ನಾನು ಪ್ಲಾನ್ ಮಾಡಿದ್ದೀನಿ ನನ್ನ ಮೇಲೆ ಡಿಪೆಂಡ್ ಇಲ್ಲ ಅದು ಪ್ರತಿ ಹಂತ ಮುಗಿದ ಕೂಡ ನಾನು ಇದನ್ನು ವಿಮರ್ಶೆಗೆ ಒಳ ಮಾಡ್ತೀನಿ ಜನ ಸ್ಪಂದನೆ ಸಿಕ್ತು ಅಂದ್ರೆ ಎರಡನೇ ಹಂತಕ್ಕೆ ಹೋಗ್ತೀನಿ ಸ್ಪಂದನೆ ಸಿಗಲಿಲ್ಲ ಅಂದ್ರೆ ಪರಿವರ್ತನೆ ಯಾತ್ರೆ ತನಕ ಹೋಗೋದೇ ಇಲ್ಲ ನನ್ನ ಪಾಡಿಗೆ ನಾನು ಕೋರ್ಟ್ ಕಡೆ ಹೋಗ್ಬಿಡ್ತೀನಿ ನೋಡಿ ನಾವು ಯಾವುದೋ ಒಂದು ವಿಚಾರ ಹಿಡ್ಕೊಂಡು ಜನರ ಹತ್ತಿರ ಹೋಗ್ತೀವಿ ಅಂದ್ರೆ ಯಾವಾಗಲೂ ಬರೀ ನನ್ನ ಮೇಲೆ ಅಷ್ಟೇ ಹೊಣೆಗಾರಿಕೆ ಇರೋದಿಲ್ಲ ಅಂತ ಹೇಳ್ದೆ ಜನರೆಲ್ಲ ಸೇರಿ ನಾನು ಯಾವಾಗಲೂ ಒಂದು ಉದಾಹರಣೆ ಕೊಡ್ತೀನಿ ಯಾವುದೇ ಹಳ್ಳಿಗೆ ಹೋದ್ರೂನು ಒಂದು ಉದಾಹರಣೆ ಕೊಡ್ತೀನಿ ಈಗ ಮನೋಹರ್ ತಹಸೀಲ್ದಾರ್ ಇದ್ರು ಅಥವಾ ಉದಾಸಿ ಅವರು ಇದ್ರು ಅಂತ ಅಂದುಕೊಳ್ಳೋಣ ಉದಾಸಿ ಅಂತ ನಾಯಕರು 83 ರ ಹಿಂದೆ 83 ರಲ್ಲಿ ಉದಾಸಿಯವರು ಪಕ್ಷೇತ್ರ ಗೆಲ್ತಾರೆ ಅದೇ ಫಸ್ಟ್ ಟೈಮ್ ಉದಾಸಿಯವರ ಎಂಟ್ರಿ ಇಂಟು ಹಾನಗಲ್ ಪಾಲಿಟಿಕ್ಸ್ ಪಕ್ಷೇತರವಾಗಿ ಅಂದರೆ ಯಾಸ್ ಎ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಓಕೆ 83 ರ ಹಿಂದೆ ಮಾನ್ಯ ಉದಾಸಿಯವರು ಫೋನ್ ಮಾಡಿದರೆ ಯಾವ ಅಧಿಕಾರಿನೂ ಕೆಲಸ ಏನು ಮಾಡ್ತಿರಲಿಲ್ಲ 83ರ ನಂತರ ಉದಾಸಿಯವರು ಫೋನ್ ಮಾಡಿದರೆ ಎದ್ದುನಿಂತು ಸಲ್ಯೂಟ್ ಹೊಡೆದು ಕೆಲಸ ಮಾಡುವರು ನಾನು ಕೇಳ್ತೀನಿ ಜನಕ್ಕೆ ಅಲ್ಲಪ್ಪ ವ್ಯಕ್ತಿ ಒಬ್ಬರೇ 83ರ ಹಿಂದನು ಅದೇ ಉದಾಸಿ 83 ಆದಮೇಲೂ ಕೂಡ ಅವರೇ ಉದಾಸಿಯವರೇ ಉದಾಸಿಯವರು 83ರ ಹಿಂದೆ ಫೋನ್ ಮಾಡಿದ್ರೆ ಆಗಲಿದ್ದು 83ರ ನಂತರ ಯಾಕೆ ಆಯ್ತಪ್ಪ ಅಂತ ಕೇಳಿದರೆ ಮುಂಚೆ ಮಾಡಿದವರು ವ್ಯಕ್ತಿ ಬರೀ ಉದಾಸಿ ಅಂತ ಒಬ್ಬ ವ್ಯಕ್ತಿ ಫೋನ್ ಮಾಡಿದಂಗೆ 83ರ ನಂತರ ಅಂದರೆ ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷೇತರವಾಗಿ ಗೆದ್ದ ನಂತರ ಉದಾಸಿ ಫೋನ್ ಮಾಡಿದ್ರೆ ಅವನ ಯಾರಿಗೆ ಫೋನ್ ಮಾಡಿರುತ್ತಲ್ಲ ಅಧಿಕಾರಿ ಅವನಿಗೆ ಬರಿ ಒಬ್ಬ ವ್ಯಕ್ತಿ ಫೋನ್ ಮಾಡಿದಂಗೆ ಅಲ್ಲ ಉದಾಸಿ ಹಿಂದೆ ಐದು ಲಕ್ಷ ಜನ ನಿಂತುಕೊಂಡು ಫೋನ್ ಮಾಡಿದಂಗೆ ಅದು ಜನರ ಶಕ್ತಿ ಆ ಶಕ್ತಿ ಜನ ಉದಾಸಿಲಿ ತುಂಬಿದಕ್ಕೆ ಉದಾಸಿ ಅನ್ನುವಂತಹ ಒಬ್ಬ ವ್ಯಕ್ತಿ ತುಂಬಿದಕ್ಕೆ ಆ ಶಕ್ತಿ ಪರಿವರ್ತನೆಗೊಂಡು ಎಲ್ಲಾ ಜನಕ್ಕೆ ಸುಖವಾದ ಜೀವನ ಸಿಕ್ತು ಅಭಿವೃದ್ಧಿ ಕಂಡರು ಹಲವಾರು ಪ್ರಾಜೆಕ್ಟ್ ಗಳು ಬಂದು ಅದೇ ರೀತಿ ಮನೋಹರ್ ತಹಸೀಲ್ದಾರ್ ಇಬ್ಬರಲ್ಲೂ ಅದೇ ಸಾಮ್ಯತೆ ಇತ್ತು ನಾನು ಕೂಡ ಇವತ್ತು ಜನರಿಗೆ ಏನು ಹೇಳ್ತಾ ಇರೋದು ಅಂದ್ರೆ ನೀವು ಸುಮ್ಮನೆ ಮನೆಯಲ್ಲಿ ಕೂತ್ಕೊಂಡರೆ ಆಯ್ತು ಅಂತ ತಿಳ್ಕೋಬೇಡಿ ಚುನಾವಣೆಗಳು ಆಟೋಮ್ಯಾಟಿಕ್ ಆಗಿ ಆಗ್ತವೆ ಶಾಸಕರು ಆಟೋಮ್ಯಾಟಿಕ್ ಆಗಿ ಆಗುತ್ತೆ ಅಂತ ಅನ್ಕೋಬೇಡಿ ಆಟೋಮ್ಯಾಟಿಕ್ ಆಗಿ ಆಗುವ ಸಿಸ್ಟಮ್ ಆಟೋಮ್ಯಾಟಿಕ್ ಆಗಿ ನಡೀತಾ ಇರುತ್ತೆ ನೀವಂತೂ ಉದ್ದಾರ ಆಗೋದಿಲ್ಲ ಅದನ್ನ ಆಟೋಮೆಟಿಕ್ ಇಂದ ಮ್ಯಾನುಯಲ್ ಮೋಡ್ ತರಬೇಕು ಅಂದ್ರೆ ನೀವು ಸಂಘಟನೆಯನ್ನು ನೀವು ಫಸ್ಟ್ ಬೀಗಿಯಾಗಿ ಮಾಡಬೇಕು ಆ ಸಂಘಟನೆ ಶಕ್ತಿಯನ್ನು ಒಬ್ಬ ವ್ಯಕ್ತಿ ತುಂಬಿದ್ರೆ ಆ ವ್ಯಕ್ತಿ ಶಾಸಕನಾದ ಮೇಲೆ ಅದನ್ನ ಎಲ್ಲರಿಗೂ ಹಂಚ್ತಾನೆ ಸೋ ಕರ್ತವ್ಯ ಎರಡೂ ಕಡೆಯಿಂದ ಇದೆ ಈಗ ನೀವು ಶಾಸಕರಾದ್ರಿ ಅಂತ ಅಂದುಕೊಳ್ಳೋಣ ಹಾನಗಲ್ ತಾಲೂಕಲ್ಲಿ ಏನು ಮಾಡ್ತೀರಾ ನೀವು ಏನು ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡ್ತೀರಾ ಏನು ಸಮಸ್ಯೆಗಳಿದೆ ಮತ್ತು ಏನು ಪರಿಹಾರಗಳನ್ನು ಸೂಚಿಸುತ್ತೀರಿ ಜನರ ಪಾಕೆಟ್ ಮೇಲೆ ಹೊಣೆ ಆಗದೆ ರೀತಿಯಲ್ಲಿ ಅವರ ಕೆಲಸ ಈಜಿ ಆಗೋ ರೀತಿಯಲ್ಲಿ ಎಲ್ಲಾ ಅಧಿಕಾರಿಗಳು ಕರೆಕ್ಟಾಗಿ ಕೆಲಸ ಮಾಡೋ ರೀತಿಯಲ್ಲಿ ಏನು ಮಾಡಬಹುದು ಅಂತ ನಿಮಗೆ ಹೇಳಿಬಿಟ್ಟಿದ್ದೀನಿ ಅವರಾಗಿ ಅಭಿವೃದ್ಧಿ ದೃಷ್ಟಿಯಲ್ಲಿ ಕಾಂಟ್ರಾಕ್ಟರ್ಸ್ ಆಗಲಿ ಇವೆರಡನ್ನು ಎಕ್ಸ್ಪ್ಲೈನ್ ಮಾಡಿದ್ದೀನಿ ಮುಂದೆ ಏನು ಮಾಡಬೇಕು ಅಂದ್ರೆ ನಾನು ಅನುಭವ ಯಾತ್ರೆಯಲ್ಲಿ ಇಳಿಬೇಕು ನಾನು ಸ್ಟೂಡೆಂಟ್ ಆಗ್ಬೇಕು ನಾನು ನಮ್ಮ ಜನರ ಹತ್ತಿರ ಕೂತ್ಕೊಂಡು ಅವರು ಕೊಡುವ ಟಾಸ್ಕ್ ಗಳನ್ನು ಫಸ್ಟ್ ಕಲಿಬೇಕು ಆ ಆಯಾಮಗಳನ್ನು ಕಲಿತ ನಂತರ ವಿದ್ಯಾರ್ಥಿ ಆದ ನಂತರ ನಾನು ಡಿಗ್ರಿ ತಗೋಬಹುದು ನಾನು ಇನ್ನು ಎಲ್ಕೆಜಿ ಯಲ್ಲಿ ಇದ್ದೀನಿ ಇನ್ನು ಪಿಎಚ್ಡಿ ಮಾಡೋದು ಇದೆ ನೋಡೋಣ ಹೋಗ್ತಾ ಹೋಗ್ತಾ ಏನೇನು ಬರುತ್ತೆ ಜನ ಏನೇನು ಕಲಿಸ್ತಾರೆ ನಾನು ಕಲಿಯೋಕೆ ರೆಡಿ ಇದ್ದೀನಿ ಜನ ಕಲಿಸಕ್ಕೆ ರೆಡಿ ಇರಬೇಕು ಬಟ್ ನೀವು ನಿಮ್ಮ ತಾಲೂಕು ಅಂದರೆ ನೀವು ಅದೇ ತಾಲೂಕಿನವರು ಆಗಿರೋದ್ರಿಂದ ಮತ್ತು ಈಗ ಪಾದಯಾತ್ರೆ ಕೂಡ ಮಾಡಿರೋದ್ರಿಂದ ನಿಮಗೆ ಬ್ರಾಡ್ ಆಗಿ ಅನಿಸಿರುತ್ತೆ ಈ ಸಮಸ್ಯೆಗಳು ಇಲ್ಲಿದೆ ಅಥವಾ ಈ ಯೋಜನೆಗಳನ್ನು ಇಲ್ಲಿ ತರಬಹುದು ಅಂತ ಹೇಳಿ ಆತರದ್ದು ಏನಾದರೂ ಇದೆಯಾ ನಾನು ನೋಡಿದಂಗೆ ಕಮ್ಯುನಿಕೇಶನ್ ಇಸ್ ಫಸ್ಟ್ ಅಂದರೆ ರೋಡ್ ಗಳು ಮುಂಚೆ ಉದಾಸಿಯವರು ಪಿ ಡಬ್ಲ್ಯೂ ಡಿ ಮಂತ್ರಿ ಆದಾಗ ಅಸೆಂಬ್ಲಿಯಲ್ಲಿ ಅಪೋಸಿಷನ್ ಪಾರ್ಟೀಸ್ ಎಲ್ಲಾ ಎದ್ದುಬಿಟ್ಟು ಉದಾಸಿಯವರೇ ನೀವು ಪಿಡಬ್ಲ್ಯೂಡಿ ಮಂತ್ರಿ ರಾಜ್ಯಕ್ಕೆ ಬರೀ ಹಾನಗಲ್ ಗೆ ಅಲ್ಲ ಅಂತ ಹೇಳ್ತಾ ಇದ್ರು ಅಂದರೆ ಆ ರೀತಿಯಲ್ಲಿ ಪ್ರತಿ ಒಂದು ಗ್ರಾಮಕ್ಕೆ ಕುಗ್ರಾಮಕ್ಕೆ ಕೂಡ ಟಾರ್ ರೋಡ್ ಮಾಡಿದ್ದು ಅಂತ ವ್ಯಕ್ತಿ ಇವತ್ತು ಅದರ ಸ್ಥಿತಿ ನೋಡ್ಬಿಟ್ಟರೆ ಅದೋಗತಿ ಏನಾದ್ರೂ ಸ್ವಲ್ಪ ಗರ್ಭಿಣಿ ಹೆಂಗಸೇನಾದರೂ ಹೋದರೆ ಹಾಸ್ಪಿಟಲ್ ಮುಟ್ಟುವಷ್ಟೊತ್ತಿಗೆ ದಾರಿಯಲ್ಲೇ ಡೆಲಿವರಿ ಆಗುವಂತಹ ಪರಿಸ್ಥಿತಿ ಬಂದಿದೆ ಆತರ ನಮ್ಮ ರೋಡಿನ ವ್ಯವಸ್ಥೆ ಆಗಿದೆ ಮೊದಲು ಫಸ್ಟ್ ನಾವು ಮಾಡಬೇಕಾಗಿರೋದು ನನ್ನ ದೃಷ್ಟಿಯಲ್ಲಿ ರೋಡ್ ಗಳಿಗೆ ಆದ್ಯತೆ ಕೊಡಬೇಕು ಅದು ರೈತನಿಗೂ ಉಪಯೋಗ ಆಗುತ್ತೆ ಸ್ಕೂಲಿಗೆ ಹೋಗುವಂತಹ ಮಕ್ಕಳಿಗೂ ಉಪಯೋಗ ಆಗುತ್ತೆ ಸೋ ಫಸ್ಟ್ ರೋಡ್ಗಳನ್ನು ಸರಿ ಮಾಡಬೇಕು ಎರಡು ಆರೋಗ್ಯ ಕೇಂದ್ರಗಳಲ್ಲಿ ಒಳ್ಳೆಯ ಡಾಕ್ಟರ್ಸ್ ನಾವು ಬೇರೆ ಬೇರೆ ಕಡೆಯಿಂದ ತಂದು ಅದನ್ನ ಉರ್ಜಿತಗೊಳಿಸಬೇಕು ಈಗ ಏನಾಗಿದೆ ಏನು ಯಾರು ಬಂದ್ರುನು ತಾಲೂಕಿನಲ್ಲಿ ಇರುವಂತಹ ಹಾಸ್ಪಿಟಲ್ ಅಲ್ಲಿ ಏನು ಚಿಕಿತ್ಸೆ ಇಲ್ಲ ನೀವು ಜಿಲ್ಲಾ ಮಟ್ಟಕ್ಕೆ ಹೋಗಬೇಕು ಅಥವಾ ಹುಬ್ಬಳಿಗೆ ಹೋಗಬೇಕು ಅನ್ನುವಂತಹ ಸ್ಥಿತಿ ಅಲ್ಲಿ ಹೋಗುವಷ್ಟೊತ್ತಿಗೆ ಎಷ್ಟೋ ಜನ ಹಾರ್ಟ್ ಅಟ್ಯಾಕ್ ಹಾರ್ಟ್ ಪೇಶೆಂಟ್ಸ್ ಎಷ್ಟೋ ಜನ ಹೋಗ್ಬಿಟ್ಟಿರುತ್ತಾರೆ ಪಿಎಚ್ಸಿ ಪ್ರೈಮರಿ ಹೆಲ್ತ್ ಸೆಂಟರ್ ಅನ್ನ ಬಿಗಿ ಮಾಡಿದ್ರೆ ಆರೋಗ್ಯವನ್ನ ಕೊಡಬಹುದು ಮೂರನೆಯದು ಶಾಲೆಯ ವ್ಯವಸ್ಥೆ ನಮ್ಮ ಈ ಗವರ್ನಮೆಂಟ್ ಸ್ಕೂಲ್ಗಳು ಅಂದ್ರೆ ಒಂತರ ಅದು ಹೆಚ್ಚು ಕಮ್ಮಿ ಹಂಗೆ ಇದೆ ಅದು ನೀವು ನೋಡಿದ್ರೆ ಅದು ಬಹಳ ಕನಿಷ್ಠ ಸ್ಥಿತಿಗೆ ಮುಟ್ಟಿಬಿಟ್ಟಿದಾವೆ ಆದರೆ ಗವರ್ನಮೆಂಟ್ ಸ್ಕೂಲ್ಗಳಲ್ಲಿ ಮೇಜಾರಿಟಿ ಮಕ್ಕಳು ಓದ್ತಾ ಇರೋದು ನಮ್ಮ ಹಳ್ಳಿಗಳ ಮಕ್ಕಳು ಹೇಳ್ತಾ ಇದ್ದೀನಿ ಪೇಟೆ ಟೌನ್ ಅಲ್ಲಿ ಓದಿರುವರಿಗೆಲ್ಲ ಅವಕಾಶಗಳು ಇದಾವೆ ಬಟ್ ಹಳ್ಳಿ ಮಕ್ಕಳಿಗೆ ಹೋಗೋದೆ ಗವರ್ನಮೆಂಟ್ ಶಾಲೆಯಲ್ಲಿ ಅಲ್ಲಿ ಅವರಿಗೆ ಇನ್ಫ್ರಾಸ್ಟ್ರಕ್ಚರ್ ಇಲ್ಲ ಟೀಚರ್ಸ್ ಇಲ್ಲ 300 ಜನ ಸ್ಟೂಡೆಂಟ್ಸ್ ಇದ್ರೆ ಒಂದೇ ಟೀಚರ್ ಈ ತರ ಹಲವಾರು ಸ್ಕೂಲ್ ಈ ತರ ಇದನ್ನೆಲ್ಲ ನಾನು ನೋಡ್ತಾ ಇದ್ದೀನಿ ಈಗ ಆಲ್ರೆಡಿ ಪ್ರಾಬಬ್ಲಿ ಈ ಮೂರು ಅಂಶವನ್ನ ನಾನು ಫಸ್ಟ್ ಎಲ್ಲ ಮಾಡಿಬಿಡ್ತೀವಿ ಅಂತ ಅನ್ಕೊಳೋದಲ್ಲ ಮೂರು ಸೆಕ್ಟರ್ ಹಿಡ್ಕೋಬೇಕು ಯಾವಾಗಲೂ ಈ ಮೂರು ಸೆಕ್ಟರ್ಸ್ ರೈತರು ಮಾತ್ರ ಅತ್ಯಂತ ಇಂಪಾರ್ಟೆಂಟ್ ಪಾರ್ಟ್ ನಮ್ಮಲ್ಲಿಗೆ ಫಾರ್ಚುನೇಟ್ಲಿ ನಮಗೆ ನೀರಿನ ವ್ಯವಸ್ಥೆ ನಾವು ಅರೆ ಮಲ್ನಾಡು ಇರೋದ್ರಿಂದ ಮಳೆ ಆಗಲಿ ನೀರಿನ ವ್ಯವಸ್ಥೆ ಆಗ್ತಾ ಇದೆ ಅದೇನು ತೊಂದರೆ ಇಲ್ಲ ಆದರೆ ಬೆಳೆ ಹಾನಿ ಅನ್ನೋದು ಮಾತ್ರ ಯಾವಾಗಲೂ ನಡ್ಕೊಂಡಿದೆ ಎಲ್ಲರಿಗೂ ಈ ಕ್ರಾಪ್ ಇನ್ಶೂರೆನ್ಸ್ ಕಡಿಮೆ ಆಗಿದೆ ಅಂತ ಅದು ಉದಾಸಿಯವರು ಇದ್ದಾಗ ಯಾವಾಗಲೂ ಕ್ರಾಪ್ ಇನ್ಶೂರೆನ್ಸ್ ಬರ್ತಾ ಇತ್ತು ಈಗ ಬರ್ತಾ ಇಲ್ಲ ಅನ್ನುವಂತದ್ದು ಒಂದು ಸಮಸ್ಯೆ ಆ ಸಮಸ್ಯೆಗೆ ಒಂದು ಸೂಕ್ತವಾದ ಪರಿಹಾರ ಕಂಡು ಹಿಡ್ಕೊಂಡ್ರೆ ಐ ಥಿಂಕ್ ಎಲ್ಲರಿಗೂ ನಾವು ಸುಸಜ್ಜಿತವಾಗಿ ಮುನ್ನಡೆಯಬಹುದು ಅಂತ ನನ್ನ ಭಾವನೆ ಸೋ ಸಂದೀಪ್ ಪಾಟೀಲ್ ಅವರೊಂದಿಗೆ ಮಾತಾಡ್ತಿರ್ಬೇಕಾದ್ರೆ ಎರಡು ಮೂರು ಅಂಶಗಳು ನನ್ನ ಗಮನ ಸೆಳ್ದಿದ್ದು ಅಂದ್ರೆ ಮೊದಲನೆಯದು ನಾನು ಇತ್ತೀಚಿಗೆ ಅವರು ಹೇಳಿದ ಹಾಗೆ ತುಂಬಾ ಯೋಜನೆಗಳು ತುಂಬಾ ಪ್ಲಾನ್ ಗಳನ್ನ ಹೇಳ್ಬಿಟ್ರೆ ಸಂಶಯ ಬರುತ್ತೆ ಓ ಇದು ಇಷ್ಟೆಲ್ಲ ಮಾಡ್ತಾರೆ ಅಂತ ಹೇಳಿ ಕಡಿಮೆ ಹೇಳಿದಷ್ಟು ಬಹಳ ಒಳ್ಳೆಯದು ನನಗೆ ಅನ್ಸುತ್ತೆ ಆಮೇಲೆ ಬೇಸಿಕ್ಸ್ ಹೇಳಿದ್ರಿ ನೀವು ಆಕ್ಚುವಲಿ ಅದು ಬಹಳ ಒಳ್ಳೆಯದು ಅಂತ ಅನ್ಸುತ್ತೆ ಎರಡನೆಯದು ನಮ್ಮೆಲ್ಲರಿಗೂ ಕೂಡ ನಮ್ಮೂರಿಗೆ ಹೋಗಬೇಕು ಮಾಡಬೇಕು ಅನ್ನೋದು ಇರುತ್ತೆ ಅಲ್ವಾ ಸೋ ಅದನ್ನ ಅವರು ಮಾಡ್ತಾ ಇದ್ದಾರೆ ಹೀಗಾಗಿ ನನ್ನ ವೈಯಕ್ತಿಕ ಮೆಚ್ಚುಗೆ ನಿಮ್ಮ ಬಗ್ಗೆ ಸೋ ಯಾಕೆಂದರೆ ನೀವು ಗೆದ್ದರೆ ಈ ತರ ಮನಸ್ಸು ಏನಿದೆ ಏನ್ ಮನಸ್ಸು ಎಲ್ಲರ ಮನಸ್ಸಲ್ಲಿ ಇದೆಯೋ ಆ ಎಲ್ಲಾ ವ್ಯಕ್ತಿಗಳು ಗೆದ್ದ ಹಾಗೆ ಬೆಂಗಳೂರಲ್ಲೋ ಇನ್ನೊಂದು ಕಡೆ ಹೋಗಿ ಅಥವಾ ಬೇರೆ ದೇಶದಲ್ಲಿ ಇರುವಂತಹ ವ್ಯಕ್ತಿಗಳು ಕೂಡ ನಮ್ಮೂರಿಗೆ ಏನಾದರೂ ಮಾಡಬೇಕು ಅಂತ ಅನ್ಕೊಂಡಿರುತ್ತಾರ ಅಲ್ವಾ ಅವರೆಲ್ಲರೂ ಗೆದ್ದ ಹಾಗೆ ಅಂತ ಅನ್ಸುತ್ತೆ ಮೂರನೆಯದು ಅವರ ವೈಯಕ್ತಿಕ ಒಂದು ಮಾತು ಮತ್ತು ನಮ್ಮ ಅದು ಅದು ನಮ್ಮ ನಮ್ಮ ನಮ್ಮ ಎಥೋಸ್ ಅಂತಾರಲ್ಲ ನಮ್ಮ ಮನಸ್ಸಲ್ಲಿ ಇರುವಂತಹ ಮಾತು ಏನಂದ್ರೆ ನಮ್ಮ ಮನೆ ನಾವು ನೋಡಿಕೊಳ್ಳಬೇಕು ಅನ್ನೋದು ಆ ಪಾಯಿಂಟ್ ಬಹಳ ಚೆನ್ನಾಗಿದೆ ನನಗೆ ಅದು ನನಗೆ ಫಸ್ಟ್ ಕನ್ವಿನ್ಸ್ ಆಗಿರಲಿಲ್ಲ ಅದು ಯಾರಾದರೂ ನೋಡಿಕೊಂಡ್ರೆ ಒಳ್ಳೆಯದಲ್ಲವಾ ಅನ್ನೋತರ ಇತ್ತು ಬಟ್ ನೀವು ಹೇಳಿದ ಮೇಲೆ ಹಂಗೆ ಅನಿಸ್ತು ಹೌದಲ್ಲ ಇದು ಕರೆಕ್ಟ್ ಪಾಯಿಂಟ್ ಅನಿಸ್ತು ನಾಲ್ಕನೆಯದು ಬಹಳ ಇಂಪಾರ್ಟೆಂಟ್ ಪಾಯಿಂಟ್ ನನಗೆ ಅನ್ಸಿದ್ದು ಕರಪ್ಶನ್ ರಿಲೇಟೆಡ್ ಸೋ ಅದು ನಾನು ಕೂಡ ನಿರಾಶಾವಾದಿ ಆ ದೃಷ್ಟಿಯಲ್ಲಿ ಓ ಇದು ಸಾಧ್ಯವಿಲ್ಲ ಬಿಡು ಸುಮ್ಮನೆ ಏನೋ ಮಾತಾಡ್ತಾರೆ ಅನ್ನೋತರನೇ ನನ್ನ ಮನಸ್ಸಲ್ಲಿ ಇತ್ತು ಬಟ್ ನಾನು ಕೇಳೋಕಿಂತ ಮುಂಚೆನೇ ನೀವು ಆ ವಿಚಾರ ಬಗ್ಗೆ ಹೇಳಿದ್ರೆ ನಾನು ಒಂದು ಅಷ್ಟು ಪ್ರಶ್ನೆಗಳನ್ನ ಕೇಳಿದೆ ಬಟ್ ಅದನ್ನು ಕೂಡ ಸರಿ ಮಾಡಬಹುದು ಅನ್ನೋ ಒಂದು ಆಶಾವಾದ ಅವರ ಮನಸ್ಸಲ್ಲಿದೆ ನಾನು 100% ಅದನ್ನ ಐ ಡೋಂಟ್ ಟ್ರಸ್ಟ್ ದಟ್ ನನಗೆ ಗೊತ್ತಿಲ್ಲ ಇನ್ನೂ ಆಗುತ್ತೆ ಅಂತ ಹೇಳಿ ಬಟ್ ನೀವು ಮಾಡಿ ತೋರಿಸಿದರೆ ಐ ವಿಲ್ ಬಿ ದ ಯುನೋ ಹ್ಯಾಪಿಯಸ್ಟ್ ಪರ್ಸನ್ ಸೋ ಹೀಗಾಗಿ ಅವರ ಈ ಒಂದು ಅಭಿಯಾನಕ್ಕೆ ಒಳ್ಳೆಯದಾಗಲಿ ಅಂತ ಹೇಳ್ತೀನಿ ಆಮೇಲೆ ಇನ್ನೊಂದು ಫೈನಲ್ ಆಗಿ ಇನ್ನೊಂದು ಹೇಳಬೇಕು ಅಂದ್ರೆ ಈ ತರ ದುಡ್ಡು ಕೊಡಲ್ಲ ಅಂತ ಅಂದಾಗ ಈ ತರ ನಾನು ಏನೋ ನಿಮಗೆ ಬೆನಿಫಿಟ್ ಮಾಡಿಕೊಡಲ್ಲ ವೈಯಕ್ತಿಕ ಬೆನಿಫಿಟ್ ಗಳನ್ನು ಮಾಡಿಕೊಡಲ್ಲ ಆದರೂ ನೋಡಿ ಬರ್ತೀರಾ ನೀವು ಅಂತ ಅಂದಾಗ ಯಾರು ಬರ್ತಾರೆ ಅಂದ್ರೆ ನಿಜವಾಗಲೂ ನಿಸ್ವಾರ್ಥ ಜೀವಿಗಳೇ ಬರ್ತಾರೆ ಅಲ್ಲಿ ಅಥವಾ ನಮ್ಮ ಜನರಿಗೆ ಏನಾದರೂ ಒಳ್ಳೆಯದಾಗಲಿ ಅನ್ಕೊಂಡವರು ಮಾತ್ರ ಬರಕ್ಕೆ ಸಾಧ್ಯ ಉಳಿದವರು ದೂರ ನಿಂತು ಹೋಗಿಬಿಡುತ್ತಾರೆ ಅಥವಾ ದೂರ ನಿಂತು ನೋಡ್ತಾರೆ ಯಾಕೆಂದರೆ ಅವರು ಕರಪ್ಟ್ ಇರಬಹುದು ಅಥವಾ ಅವರು ಅವರ ಮನಸ್ಸಲ್ಲಿ ಸ್ವಾರ್ಥ ಇರಬಹುದು ಬಟ್ ಅವರು ಕೂಡ ಒಳ್ಳೆಯವರೇ ನೀವು ಹೇಳಿದ ಹಾಗೆ ರಾವಣ ಇರಬಹುದು ಬಟ್ ರಾಮ ಆಗೋ ಅವಕಾಶ ಸಿಗ ಸಿಗಬೇಕಲ್ಲ ಅವರಿಗೆ ಯಾರೋ ಒಬ್ಬರು ರಾಮನ್ ತರ ಇದಾನೆ ಅಂದ್ರೆ ಅವರು ಬರ್ತಾರೆ ಕರೆಕ್ಟ್ ಅಲ್ವಾ ಸೋ ಹಂಗಾಗಿ ಅವರು ಕೂಡ ನಿಮ್ಮ ಜೊತೆಗೆ ಅಂದರೆ ಇವತ್ತು 10 ಜನ ಇರುವಂತವರು ನಾಳೆ 100 ಜನ 1000 ಜನ ಆಗಬಹುದು ಬಟ್ ಫೈನಲಿ ಏನಂದ್ರೆ ನಿಮ್ಮ ಮನಸ್ಸಲ್ಲಿ ಇರುವಂತಹ ಕನ್ವಿಕ್ಷನ್ ಪ್ರಾಮಾಣಿಕವಾದದ್ದು ಅಂತ ನಮಗೆ ಅನಿಸಬೇಕು ಅದು ಅದಲ್ಲಾಕೆ ಮುಖ್ಯ ಬಟ್ ನನಗೊಂದು ಯಾವಾಗ್ಲೂ ಅನಿಸುತ್ತೆ ಎರಡು ಪಾಯಿಂಟ್ಗಳನ್ನು ನಮ್ಮ ಜನರ ಬಗ್ಗೆ ನಾನು ಯಾವಾಗ್ಲೂ ಹೇಳ್ತಿರ್ತೀನಿ ಏನಂದ್ರೆ ನಮ್ಮ ಜನ ಮೂಲತ ಕರಪ್ಟ್ ಅಲ್ಲ ಸೋ ಅದರ ಬಗ್ಗೆ ನನಗೆ 100% ನಂಬಿಕೆ ಇದೆ ಸೋ ನಾನು ಯಾವಾಗ್ಲೂ ಈ ಉದಾಹರಣೆ ಕೊಡ್ತಿರ್ತೀನಿ ನಮ್ಮ ಜನ ಕರಪ್ಟ್ ಅಂದಾಗ ನಿಮ್ಮ ಹತ್ರ ದುಡ್ಡು ಕೇಳಿದ್ರಲ್ವಾ ಮಹಾತ್ಮ ಗಾಂಧಿ ಹತ್ತಿರ ಹೋಗಿ ದುಡ್ಡು ಕೇಳಿದ್ರಾ ಜನ ಕರೆಕ್ಟ್ ಅಲ್ವಾ ಯಾಕೆಂದರೆ ಮಹಾತ್ಮ ಗಾಂಧಿ ಹತ್ತಿರ ದುಡ್ಡಿಲ್ಲ ಅಂತ ಗೊತ್ತಿತ್ತು ಜನರಿಗೆ ಅಥವಾ ನಜೀರ್ ಸಾಬ್ ಹತ್ರ ಹೋಗಿ ಕೇಳಿದ್ರಾ ಸುಮ್ಮನೆ ಉದಾಹರಣೆ ಈಗ ನನಗೆ ತಲೆಗೆ ಹೊಡೆದಿದ್ದು ಹೇಳ್ತಾ ಇದ್ದೀನಿ ಅಲ್ವಾ ಸೋ ಆ ತರ ಎಷ್ಟೋ ರಾಜಕಾರಣಿಗಳ ಹತ್ತಿರ ಹೋಗಿ ಜನ ಕೇಳಿಲ್ಲ ಅವರ ಹತ್ತಿರ ಅವರು ಯಾರ ಹತ್ತಿರ ಕೇಳ್ತಾರೆ ಅಂದ್ರೆ ಇವರ ಹತ್ತಿರ ದುಡ್ಡಿದೆ ಮತ್ತು ಆ ದುಡ್ಡು ಕರಪ್ಟ್ ಮೀನ್ಸ್ ಇಂದ ಕರಪ್ಟ್ ದಾರಿಯಿಂದ ಇವರು ಪಡ್ಕೊಂಡಿದ್ದಾರೆ ಕಷ್ಟಪಟ್ಟು ಗೆದ್ದು ದುಡ್ಡು ಗಳಿಸಿರುವ ಹತ್ತಿರನೂ ಕೇಳಲ್ಲ ಜನ ಕರಪ್ಟ್ಶನ್ ದಾರಿಯಿಂದ ಕೇಳಿರ್ತಾರಲ್ವಾ ಗಳಿಸಿರುತ್ತಾರಲ್ಲ ಅಂತವರ ಹತ್ತಿರನೇ ಹೋಗಿ 100 ರೂಪಾಯಿ ಅವಶ್ಯಕತೆ ಇದ್ದರೆ 1000 ರೂಪಾಯಿ ಕೇಳ್ತಾರೆ ಆಮೇಲೆ ಫೈನಲ್ ಪಾಯಿಂಟ್ ನನಗೆ ಹೇಳಬೇಕು ಅನಿಸಿರೋದಂದ್ರೆ ನಮ್ಮ ಜನರಿಗೆ ಅನ್ಸೆಡ್ ಕೂಡ ಅರ್ಥ ಆಗುತ್ತೆ ನೀವೇನು ಹೇಳಬಹುದು ನೀವು ಹೇಳ್ದೆನು ಇರಬಹುದು ನಿಮ್ಮ ಮನಸ್ಸೊಳಗಡೆ ನೀವೇನು ಇರ್ತೀರಲ್ವಾ ಇದನ್ನ ನಾನು ಇದು ನನ್ನ ತುಂಬಾ ಆನೆಸ್ಟ್ ಆಗಿ ಫೀಲ್ ಮಾಡ್ತೀನಿ ಜನರಿಗೆ ಅದು ಅರ್ಥ ಆಗುತ್ತೆ ನೀವು ಸುಳ್ಳು ಹೇಳ್ತಾ ಇದ್ದೀರಾ ನೀವು ನಿಜ ಹೇಳ್ತಾ ಇದ್ದೀರಾ ನೀವು ನಾಟಕ ಮಾಡ್ತಾ ಇದ್ದೀರಾ ನೀವು ನಿಜವಾಗಲೂ ಆ ತರ ಇದ್ದೀರಾ ಅನ್ನೋದು ಜನರಿಗೆ 100% ಅರ್ಥ ಆಗುತ್ತೆ ಸೋ ಹೀಗಾಗಿ ನಿಮ್ಮ ಮನಸ್ಸಲ್ಲಿ ಇರುವಂತಹ ಭಾವನೆ ಅವರಿಗೆ ತಲುಪಲಿ ಮತ್ತು ನಿಮ್ಮ ಮೂಲಕ ಜನರಿಗೆ ಒಳ್ಳೆಯದಾಗಲಿ ಅಂತ ನಾನು ಹಾರೈಸ್ತೀನಿ ಸಂದೀಪ್ ಪಾಟೀಲ್ ಅವರೇ ಆಲ್ ದಿ ಬೆಸ್ಟ್ ನಿಮಗೆ ಒಳ್ಳೆಯದಾಗಲಿ ಸೋ ಆಮೇಲೆ ಇನ್ನೊಂದು ಫೈನಲ್ ಆಗಿ ಇನ್ನೊಂದು ಹೇಳಬೇಕು ಅಂತ ಅಂದ್ರೆ ಒಂದು ಮಾಡೆಲ್ ಸೆಟ್ ಮಾಡುವಂತ ಅವಶ್ಯಕತೆ ಕೂಡ ಇದೆ ಈಗ ನಾವೆಲ್ಲ ಈ ಪ್ರಶ್ನೆಗಳು ಯಾಕೆ ಕೇಳ್ತೀವಿ ಈ ಅನುಮಾನ ಯಾಕೆ ಇದೆ ಅಂದ್ರೆ ನಮಗೆ ನಮಗೆ ಒಂದು ಮಾಡೆಲ್ ಇಲ್ಲ ಓ ಈ ತರ ಮಾಡಬಹುದು ಅಂತ ಯಾರೋ ಒಬ್ಬರು ತೋರಿಸಿದರೆ ಇನ್ನೂ ಒಂದು 10 ಜನ ಇದೇ ಮಾಡೆಲ್ ನ ಟ್ರೈ ಮಾಡೋಕೆ ಶುರು ಮಾಡ್ತಾರೆ ಅವಾಗ ನಿಜವಾಗಲೂ ರಾಮ ರಾಜ್ಯ ಅಂತ ನಾವು ಏನೋ ಅದು ಅದು ಆಗಕ್ಕೆ ಸಾಧ್ಯ ನಮ್ಮ ಎದುರುಗಡೆ ಆ ತರ ಮಾಡೆಲ್ ಗಳೇ ನಮ್ಮ ಈ ಈ ಜನರೇಶನ್ ಎದುರುಗಡೆ ಇಲ್ಲದೆ ಇರೋದ್ರಿಂದ ಏ ಇದು ಸಾಧ್ಯ ಇಲ್ಲ ಬಿಡು ಅನ್ನೋತರ ಆಗಿಬಿಟ್ಟಿದೆ ಯಾರೋ ಒಬ್ಬರು ಮಾಡಿ ತೋರಿಸಿದಾಗ ಓ ನೋಡ್ರಿ ಆಗುತ್ತೆ ನಾವು ಮಾಡಬಹುದು ಅನ್ನೋತರದ್ದು ಆಗುತ್ತೆ ಸೋ ಹಂಗಾಗಲಿ ಅಂತ ಆಶಿಸ್ತೀನಿ ಸೋ ನಮ್ಮ ಜೊತೆಗೆ ಇಷ್ಟು ಹೊತ್ತು ಮಾತಾಡಿದ್ರಿ ಸೋ ಥ್ಯಾಂಕ್ ಯು ವೆರಿ ಮಚ್ ನಿಮಗೆ ಮತ್ತು ನಿಮ್ಮ ನಮ್ಮ ನಮ್ಮೂರು ನಮ್ಮವರು ಈ ಸಂಘಟನೆಗೆ ಮತ್ತು ಆ ಮೂಲಕ ನಿಮ್ಮ ಜನರಿಗೆ ನಮ್ಮ ಜನರಿಗೆ ಒಳ್ಳೆಯದಾಗಲಿ ಧನ್ಯವಾದಗಳು ಥ್ಯಾಂಕ್ಯು ಸೋ ಸ್ನೇಹಿತರೆ ಇದು ಸಂದೀಪ್ ಪಾಟೀಲ್ ಅವರೊಂದಿಗೆ ಮಾತುಕತೆ ಮೂರು ಎಪಿಸೋಡ್ಗಳಲ್ಲಿ ಮಾಡಿದ್ದೀವಿ ನಾವು ಮೂರು ಎಪಿಸೋಡ್ ಸೇರಿಸಿಕೊಂಡು ನಾವು ಒಂದು ಫುಲ್ ಎಪಿಸೋಡ್ ಮಾಡಿರ್ತೀವಿ ಅದನ್ನು ಕೂಡ ನೋಡಿ ನೋಡೋದಕ್ಕೆ ಆಗದೆ ಇರೋರು ಮುಂಚೆ ಮತ್ತು ನಿಮ್ಮ ಅನಿಸಿಕೆಗಳನ್ನು ತಿಳಿಸಿ ಸಂದೀಪ್ ಪಾಟೀಲ್ ಅವರ ಬಗ್ಗೆ ಅನಿಸಿಕೆಗಳಲ್ಲ ಇವರ ವಿಚಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಿಮಗೆ ನಿಜವಾಗಲೂ ಇದು ವರ್ಕೇಬಲ್ ಅನ್ಸುತ್ತಾ ಓಕೆ ನೀವು ಹಾನಗಲ್ ಮತದಾರರಾಗಿದ್ರೆ ಏನು ಯೋಚನೆ ಮಾಡ್ತಾ ಇದ್ದೀರಾ ನಾವು ಹಾನಗಲ್ ಮತದಾರರಲ್ಲ ನಾವು ಬೇರೆ ಮತದಾರರು ಬಟ್ ಈ ಈ ಒಂದು ಮಾಡೆಲ್ ಬಗ್ಗೆ ನಿಮಗೆ ಏನು ಅನ್ಸುತ್ತೆ ಈ ತರ ನಾಯಕರಿಗೆ ಸಪೋರ್ಟ್ ನಮ್ಮ ಜನ ಮಾಡ್ತಾರಾ ಈ ಪ್ರಶ್ನೆಗೆ ದಯವಿಟ್ಟು ನಿಮ್ಮ ಮನಸ್ಸಲ್ಲಿ ಏನಿದೆ ಅದನ್ನ ಆನೆಸ್ಟ್ ಆಗಿ ಉತ್ತರ ಕೊಡಿ ಆಗಲ್ಲ ಅಂದ್ರೆ ಆಗಲ್ಲ ಅಂತ ಹೇಳಿ ಆಗುತ್ತೆ ಅಂದ್ರೆ ಆಗುತ್ತೆ ಅಂತ ಹೇಳಿ ಬಟ್ ಒಂದು ಮುಕ್ತ ಮನಸ್ಸಿನಿಂದ ನೀವು ಯೋಚನೆ ಮಾಡಿ ಹೇಳಿ ಅಂತ ಹೇಳ್ತಾ ಇವತ್ತಿನ ಈ ಎಪಿಸೋಡ್ ಮುಗಿಸ್ತಾ ಇದ್ದೀನಿ ನೋಡ್ತಾ ಇರಿ ಗೌರೀಶ್ ಶಕ್ತಿ ಸ್ಟುಡಿಯೋ ನೋಡ್ತಾ ಇರಿ ಒಳ್ಳೆಯ ಕಾರ್ಯಕ್ರಮಗಳನ್ನ ನಮಸ್ಕಾರ

Need another transcript?

Paste any YouTube URL to get a clean transcript in seconds.

Get a Transcript