Thumbnail for shakuni dialogue -1|kurukshetra drama |@PunithHopeUjjani #Shakunisongs by PunithHopeUjjani - ಪುನೀತ್ ಭರವಸೆ ಉಜ್ಜನಿ

shakuni dialogue -1|kurukshetra drama |@PunithHopeUjjani #Shakunisongs

PunithHopeUjjani - ಪುನೀತ್ ಭರವಸೆ ಉಜ್ಜನಿ

7m 11s292 words~2 min read
Auto-Generated

[0:13]ಏಕೆ ಸುಪುಣಿ ಮೌನವಾಗಿ ನಿಂತಿದ್ದೆ? ಏಕೆ? ಅಂದು ನಿನ್ನ ಸಹೋದರನಿಗೆ ಆ ದುರ್ಯೋಧನನ ವಂಶವನ್ನು ನಿರ್ವಂಶವಾಗಿ ಮಾಡುತ್ತೇನೆಂದು ನೀನು ಕೊಟ್ಟ ವಚನ ಏನಾಯಿತು? ಏನಾಯಿತು ನಿನ್ನ ಪ್ರತಿಜ್ಞೆ ಮರೆತೆಯಾ? ಮರೆದುಬಿಟ್ಟೆಯಾ? ಆಗ ಒಂದು ವೇಳೆ ಮರೆತೆ ಆದಲ್ಲಿ, ಆ ನಿನ್ನ ಸಹೋದರರ ಆತ್ಮಗಳು ಭೂತಪ್ರೇತಗಳಾಗಿ ನಿನ್ನನ್ನು ಹಿಂಸಿಸುವವು. ದುರ್ಯೋಧನನ ಅನ್ನಕ್ಕೆ ಮರುಳಾಗಿ ಆ ನಿನ್ನ ಸಹೋದರನಿಗೆ ಕೊಟ್ಟ ವಚನವನ್ನು ಮರೆತೆಯಾ? ಏನಾಯಿತು ನಿನ್ನ ಪ್ರತಿಜ್ಞೆ? ಏನಾಯಿತು ನಿನ್ನ ಶಪಥ?

[1:04]ಸತ್ತ!

[1:14]ಈ ಸೌಬಲ ರಾಜ ಶಕುನಿಯ ಆಶ್ವಾಸನೆಯನ್ನೇ ಹಲ್ಲೆಗೈಯುತ್ತಿರುವ ಆದಮ ಮರುಳುಗಳೇ ಸತ್ತ!

[1:30]ಏನಿ ಬಗೆಯ ಕುಕ್ಷಿ ಬಗಿಯುತ್ತಿರುವ ಕುಹಕ ಕಂಠದ ಕರುಳ ಕೇಕೆ?

[1:41]ಏನಿ ಪ್ರಳಯ ಆಗ್ನಿ ಜ್ವಾಲೆಯನ್ನು ಪ್ರಚೋದನೆ ಗೈಯ್ಯುತ್ತಿರುವ ಪ್ರಚಂಡ ಮಾರುತದ ಪ್ರಳಯ ತಾಂಡವ! ಅಖಂಡ ಭರತ ಕಂಠಕ್ಕೆ ಕುಹಕ ಕೂಟದ ಕುಕ್ಷಿ ಕತೆಯ ಪ್ರವೀಣ ಮಾತ್ಸರ್ಯದ ಮಹಾನಿಪುಣ!

[2:08]ಕಪಟ ದ್ಯೂತ ವಿದ್ಯಾವಿಶಾರದನಾದ ಈ ಸೌಬಲ ರಾಜ ಶಕುನಿಯೊಡನೆ ನಿಮ್ಮಗಳ ಸರಸ ಸಲ್ಲಾಪ.

[2:24]ಓ ನನ್ನ ಗಾಂಧಾರ ವಂಶಕ್ಷಯಕ್ಕೆ ಕಾರಣಕರ್ತನಾದ ದೂರ್ತ! ದುರ್ನೀತಾ! ದುರ್ಜಾತ! ದುರುಳ ದುರ್ಯೋಧನನೇ! ಅಂದು ನಿರಪರಾಧಿಗಳು ಗಾಂಧಾರ ವಂಶೋದ್ಧಾರಕರು ಆದ ನನ್ನ 99 ಮಂದಿ ಸಹೋದರರನ್ನು ನನ್ನನ್ನು ನನ್ನ ಜನ್ಮದಾತನನ್ನು ನಿನ್ನ ಕತ್ತಲೆಯ ಕಾರಾಗೃಹದಲ್ಲಿ ಬಂಧಿಸಿ ನೀನು ನೀಡುತ್ತಿದ್ದ ಆ ಚಿತ್ರ ವಿಚಿತ್ರವಾದ ಶಿಕ್ಷೆಯನ್ನು ಸ್ಮರಿಸಿಕೊಂಡರೆ ಅಬ್ಬಾ!

[3:10]ಕೋಟಿ ಕಠಾರಿಗಳು ನನ್ನ ಗುಂಡಿಗೆಗೆ ತಾಗಿದಂತಾಗಿ ನನ್ನ ಗುಂಡಿಗೆಯೂ ನಡುಗುತ್ತಿರುವುದು. ನನ್ನ ಕೈ ಕಾಲುಗಳು ಕಂಪಿಸುತ್ತಿರುವುದು.

[3:26]ನನ್ನ ನರನಾಡಿಗಳೆಲ್ಲ ರಕ್ತವೇ ಕುದಿಯುತ್ತಿರುವುದು ದುರ್ಯೋಧನಾ!

[3:36]ದುರ್ಯೋಧನಾ, ಅಂದು ನೀನು ನನ್ನ 99 ಮಂದಿ ಹತಭಾಗ್ಯ ಸಹೋದರರಿಗೆ ನನಗೆ ದಿನಕ್ಕೆ ಒಂದು ಹಿಡಿಯನ್ನ ಒಂದು ಒಳಲು ನೀರನ್ನು ಕೊಡುತ್ತಿದ್ದೆ. ಆದರೆ ನೀನು ಕೊಡುತ್ತಿದ್ದ ಆ ಹಿಡಿ ಕುಳು, ಒಳಲ ನೀರಿನಿಂದ ನಮ್ಮಗಳ ಕುಕ್ಷಿ ಬಾದೆಯು ನೀಗುತ್ತಿರಲಯ್ಯ ದುರ್ಯೋಧನ. ಆದರಿಂದ ಆ ನನ್ನ ಹತಭಾಗ್ಯ ಸಹೋದರರೆಲ್ಲರೂ ನೀನು ಕೊಡುತ್ತಿದ್ದ ಹಿಡಿಯನ್ನ ಒಳಲೆ ನೀರು ಎಲ್ಲವನ್ನು ನನಗಿತ್ತು, ನನ್ನ ಈ ಶ್ವಾಸಕೋಶದಲ್ಲಿ ಉಸಿರು ಉಳಿಯುವಂತೆ ಮಾಡಿ

[4:24]ಶಕುನಿ! ಅಣ್ಣ ಶಕುನಿ! ನೀನೊಬ್ಬನಾದರೂ ಜೀವಂತವಾಗಿ ಉಳಿದು ನಾವು ಅನುಭವಿಸುತ್ತಿರುವ ಈ ನರಕ ಯಾತನೆಯ ಸೇಡನ್ನು ತೀರಿಸುವೆಯ ಅಣ್ಣ ಶಕುನಿ! ಎಂದು ನನ್ನೊಡನೆ ಕರ್ಕಶ ಧ್ವನಿಯಿಂದ ಕೀರುತ್ತಾ ಬೇಡುತ್ತಾ ಉಪವಾಸದಿಂದ ನರಳಿ ನರಳಿ ಒಬ್ಬೊಬ್ಬರಾಗಿ ಒಬ್ಬೊಬ್ಬರಾಗಿಯೇ ಸತ್ತರು ದುರ್ಯೋಧನಾ!

[5:14]ಒಬ್ಬೊಬ್ಬರಾಗಿಯೇ ಸತ್ತರು. ದುರ್ಯೋಧನಾ, ಆ ನಿನ್ನ ಕಜ್ಜತ್ತಲೆ ಕಾರಾಧಾರವನ್ನು ನಾನಿನ್ನು ಮರೆತಿಲ್ಲ. ನನ್ನ 99 ಮಂದಿ ಹತಭಾಗ್ಯ ಸಹೋದರರಾದ ಮೃತ ದೇಹಗಳ ಆ ದಾರುಣ ದೃಶ್ಯವು ಈಗಲೂ ಈಗಲೂ ನನ್ನ ಸ್ತುತಿ ಪಡಲದಿಂದ ಚಳಿಯದೆ ಉಳಿದು ನಿರಂತರ ಬಡಬಾಗ್ನಿ ಜ್ವಾಲೆಯಲ್ಲಿ ನೊಂದು ಬೆಂದು ಕುಂದಿ ಕುಂದಿ ಕುಶವಾಗುತ್ತಿರುವ ನನ್ನ ಈ ದೇಹವನ್ನು ಅಣು ಅಣುವಾಗಿ ಅಣು ಅಣುವಾಗಿ ಚಿತ್ತರಿಸಿದರೂ ಪ್ರತೀಕಾರಕ್ಕೆ ಪ್ರತೀಕಾರ! ಸೇಡಿಗೆ ಸೇಡು! ರಕ್ತಕ್ಕೆ ರಕ್ತ!

[6:17]ಎಂಬ ಮಾತ್ಸರ್ಯದ ಹೊರತಾಗಿ ಮತ್ಯಾವ ಆಸೆ ಆಕಾಂಕ್ಷೆಗಳು ನನ್ನ ನರಸಲ ಸಾಧ್ಯ ದುರ್ಯೋಧನಾ!

[6:34]ಅಳದೇ ಅಳಬೇಡಿ ನನ್ನ ಹತಭಾಗ್ಯ ಸಹೋದರನೇ ಅಣ್ಣ! ಅಣ್ಣ!

[6:58]ಅದೇ ರೋದನದ ಕೂಗು ದುರ್ಯೋಧನಾ!

Need another transcript?

Paste any YouTube URL to get a clean transcript in seconds.

Get a Transcript