[0:09]ಜೇನು ಇಲ್ಲ ಅಂತ ಹೇಳಿದ್ರೆ ನಾವು ಯಾರು ಇರುವುದಿಲ್ಲ. ಜೇನು ಕೃಷಿ ಲಾಭದಾಯಕನಾ? ಜೇನುಹುಳ ಅಮಾವಾಸ್ಯೆ ಹುಣ್ಣಿಮೆಯಲ್ಲಿ ಜೇನುಹುಳಗಳು ತುಪ್ಪನ ಕುಡಿಕೊಳ್ತವೆ ಅನ್ನೋದು ಇರುತ್ತೆ. ಯಾವ ಜೇನು ಶ್ರೇಷ್ಠವಾಗಿದೆ? ಯಾವ ಜೇನು ತುಪ್ಪ ಚೆನ್ನಾಗಿರುತ್ತೆ ತಿನ್ನೋದಕ್ಕೆ? ಮುಂಚೆ ನಾನು ಜೇನು ಹುಳುಗಳನ್ನು ಸಾಕುತ್ತಾ ಇದ್ದೆ. ಈಗ ಜೇನು ಹುಳುಗಳೇ ನನ್ನನ್ನು ಸಾಕುತ್ತಿದ್ದಾವೆ.
[0:35]ನಮ್ಮ ಕೃಷಿ ಚಾನೆಲ್ ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಸೋ ನನ್ನ ಹೆಸರು ಅಶೋಕ್ ಸಿಂಗ್. ಜಾಲಮಂಗಳ ನಮ್ಮ ಊರು, ಕೂಟ್ಕಲ್ ಹೋಬಳಿ, ರಾಮನಗರ ತಾಲೂಕು, ರಾಮನಗರ ಡಿಸ್ಟ್ರಿಕ್ಟ್. ಸೋ ಇದು ಬೆಂಗಳೂರು ಮೈಸೂರು ಹೈವೇನಲ್ಲಿ ಸಿಗುವಂತ ಒಂದು ಊರು. ನಾನು ಇವತ್ತು ಹೇಳಕ್ಕೆ ಹೊರಡ್ತಾ ಇರುವಂತದ್ದು ಜೇನು ಕೃಷಿ ಬಗ್ಗೆ. ಸೋ ಜೇನು ಕೃಷಿ ಬಗ್ಗೆ ನಿಮಗೆ ಕೆಲವೊಂದು ಮಾಹಿತಿನ ಕೊಡ್ತೀನಿ. ಅದರಲ್ಲಿ ಜೇನು ಕೃಷಿನಲ್ಲಿ ಫಸ್ಟ್ ಹೊಸಬ್ರಿಗೆ, ಯಾರು ಹೊಸಬ್ರು ಇರ್ತೀರಾ ಅವರಿಗೆ ಇದು ಜೇನು ಕೃಷಿ ಲಾಭದಾಯಕನಾ? ಅನ್ನೋದರ ಬಗ್ಗೆ ಇವಾಗ ನಾನು ಹೇಳ್ತಾ ಹೋಗ್ತೀನಿ. ಒಂದೊಂದೇ ಒಂದೊಂದೇ ಪಾಯಿಂಟ್ಸ್ ಹೇಳ್ತಾ ಹೋಗ್ತೀನಿ. ಪೂರ್ತಿ ವಿಡಿಯೋ ನೋಡ್ತಾ ಇರಿ. ನಿಮಗೆ ಪೂರ್ತಿ ಇನ್ಫಾರ್ಮೇಷನ್ ಗೊತ್ತಾಗ್ತಾ ಇರುತ್ತೆ. ಓಕೆ. ಫಸ್ಟ್ ಇವಾಗ ಜೇನು ಕೃಷಿ ಅಂದ್ರೆ ಏನು? ಜೇನು ಅಂದ್ರೆ ನೀವೆಲ್ಲ ನೋಡಿರ್ತೀರಾ ಹೊರಗಡೆ ಎಲ್ಲಾ ಮರಗಳ ಮೇಲೆ ಇರುತ್ತೆ. ಕಲ್ಲಿನ ಪೊಟ್ರೆಗಳಲ್ಲಿ ಇರುತ್ತೆ. ಈ ರೀತಿ ಡಿಫರೆಂಟ್ ಡಿಫರೆಂಟ್ ಆಗಿ ನೋಡಿರ್ತೀರಾ. ಯಾವ ಜೇನು ಶ್ರೇಷ್ಠವಾಗಿದೆ? ಯಾವ ಜೇನು ತುಪ್ಪ ಚೆನ್ನಾಗಿರುತ್ತೆ ತಿನ್ನೋದಕ್ಕೆ? ಈ ತರದೆಲ್ಲಾ ಕ್ವೆಶ್ಚನ್ಸ್ ಇರುತ್ತೆ ನಿಮ್ಮಲ್ಲಿ. ಮತ್ತೆ ಜೇನುಹುಳ ಅಮಾವಾಸ್ಯೆ ಹುಣ್ಣಿಮೆಯಲ್ಲಿ ಜೇನುಹುಳಗಳು ತುಪ್ಪನ ಕುಡಿಕೊಳ್ತವೆ ಅನ್ನೋದು ಇರುತ್ತೆ. ತಲೆಗೆ ಸವರಿಕೊಂಡರೆ ಅದು ಕೂದಲು ಬೆಳ್ಳಗಾಗುತ್ತೆ ಅನ್ನೋದು ಇರುತ್ತೆ. ಅಂಟು ಮುಟ್ಟಾದರೆ ಅದು ಚುಚ್ಚುತ್ತೆ ಅನ್ನೋದು ಇರುತ್ತೆ. ಈ ರೀತಿ ಸುಮಾರು ಡೌಟ್ಸ್ ಗಳು ನಿಮಗೆ ಇರುತ್ತೆ. ಇತರದ್ದು ಎಷ್ಟೇ ಡೌಟ್ಸ್ ಗಳಿದ್ರೂನು ಒಂದೊಂದೇ ಒಂದೊಂದನ್ನೇ ನಾನೇ ಕ್ವೆಶ್ಚನ್ ಹೇಳ್ತಾ ಆನ್ಸರ್ ಕೊಡ್ತಾ ಹೋಗ್ತೀನಿ. ಈಗ ಮೊದಲನೆಯದಾಗಿ ನಾವು ಜೇನು ಕೃಷಿ ಅನ್ನೋದು ಏನಾಗುತ್ತೆ ಈ ಒಂದು ಕೃಷಿ ಅಂತ ಮಾಡಬೇಕಾದ್ರೆ ಜೇನು ಕೃಷಿ ಸಪೋರ್ಟಿವ್ ಆಗಿ ಇರುತ್ತೆ. ಯಾವ ರೀತಿ ಅಂತಂದ್ರೆ ಪರಾಗಸ್ಪರ್ಶದಿಂದ. ಸೋ ಪರಾಗಸ್ಪರ್ಶ ಅಂದ್ರೆ ಏನು? ಜೇನು ಎಲ್ಲಾ ಹೂಗಳಲ್ಲೂನು ಕೂಡ ಗಂಡು ಹೂ, ಹೆಣ್ಣು ಹೂ ಅನ್ನೋದು ಇರುತ್ತೆ. ಆ ಒಂದು ಹೂ ಕಾಯಿ ಆಗಬೇಕು ಅಂತ ಹೇಳಿದ್ರೆ ಅದು ಪರಾಗಸ್ಪರ್ಶ ಆಗಬೇಕು.
[2:18]ನಾವೇ ಆದ್ರೆ ಮ್ಯಾನ್ಯುವಲ್ ಆಗಿ ಕೆಲವೊಂದರಲ್ಲಿ ಹೀಗೆ ಟಚ್ ಮಾಡಿದ್ರೆ ಅದು ಪರಾಗಸ್ಪರ್ಶ ಆಗುತ್ತೆ. ಈಗ ನಾವು ಎಲ್ಲಾ ಹೂಗಳಿಗೂನು ಟಚ್ ಮಾಡೋದಕ್ಕೆ ಆಗಲ್ಲ. ಹಾಗಾಗಿ ಏನು ಮಾಡಬಹುದು ಅಂತಂದ್ರೆ ಜೇನು ಹುಳಗಳು ಇಟ್ಕೋಬೇಕಾಗುತ್ತೆ. ಜೇನು ಇಟ್ಕೊಂಡ್ರೆ ಅದು ಪರಾಗಸ್ಪರ್ಶನ ಮಾಡುತ್ತೆ. ಸೋ ಅದಕ್ಕೆ ಬೀ ಕೀಪಿಂಗ್ ಅಂತ ಹೇಳ್ತಿವಿ. ಪ್ರತಿಯೊಬ್ಬರುನು ಕೂಡ ಜೇನು ಕೃಷಿನ ಮಾಡ್ಲೇಬೇಕು. ಯಾರು ವ್ಯವಸಾಯ ಮಾಡ್ತೀವಿ. ಇದರಲ್ಲಿ ಏನಾಗುತ್ತೆ ಅಂದ್ರೆ ಒಬ್ಬರು ಸೈಂಟಿಸ್ಟ್ ಹೇಳಿರೋ ಪ್ರಕಾರ ನಾಲ್ಕು ವರ್ಷದಲ್ಲಿ ನಮಗೆ ಜೇನು ಇಲ್ಲ ಅಂತ ಹೇಳಿದ್ರೆ ನಾವು ಯಾರು ಇರುವುದಿಲ್ಲ ಅಂತ ಹೇಳಿದ್ದಾರೆ. ಸೋ ನನ್ನ ಪ್ರಕಾರ ಸೈಂಟಿಸ್ಟ್ ಹೇಳಿದ್ದಾರೆ ಒಪ್ಕೊಳ್ತೀನಿ ಅದು ಅಕ್ಸೆಪ್ಟೆಡ್. ನನ್ನ ಪ್ರಕಾರ ಒಂದು ವರ್ಷನು ಇರೋದಕ್ಕೆ ಆಗಲ್ಲ ನಮಗೆ ಈಗ ಇರುವಂತ ಪಾಪುಲೇಷನ್ ಅಲ್ಲಿ. ಯಾಕೆ ಹೇಗೆ ಅಂದ್ರೆ, ನೋಡಿ ಇವಾಗ ನಾವು ಪ್ರತಿಯೊಂದನ್ನು ಈಗ ಮೋನೋಕ್ರಾಪ್ ಅಂತ ಹೇಳ್ತಿವಿ, ಸಿಂಗಲ್ ಸಿಂಗಲ್ ಕ್ರಾಪ್ಸ್ ಅಕ್ಕಿ, ರಾಗಿ, ಗೋಧಿ, ಜೋಳ ಈ ತರದನ್ನೆಲ್ಲಾ ಬೆಳೆದಾಗ ಹೈಬ್ರಿಡ್ ತಳಿಗಳು ಬೆಳೆದಾಗ ಪರಾಗಸ್ಪರ್ಶ ಬೇಕಾಗಿಲ್ಲ. ಅಷ್ಟು ಬಿಟ್ಟು ಬೇರೆ ಯಾವುದೇ ನೀವು ತರಕಾರಿಗಳನ್ನ ಹಾಕಿ ಮತ್ತೆ ಬೇರೆ ಏನೇ ಇರಬಹುದು ಈಗ ತೆಂಗು ಇರಬಹುದು, ಅಡಿಕೆ ಇರಬಹುದು. ಈ ತರದ ತೋಟಗಾರಿಕ ಬೆಳೆಗಳು ಅಂತ ಏನು ಬರುತ್ತವೆ, ತರಕಾರಿ ಬೆಳೆಗಳು ಇರಬಹುದು ಇಂತದ್ದು ಎಲ್ಲದಕ್ಕೂನು ಪರಾಗಸ್ಪರ್ಶ ಆಗಿಲ್ಲ ಅಂದ್ರೆ ನಮಗೆ ಅದು ಯಾವುದೇ ತರ ಹೀಲ್ಡ್ ಬರೋದಿಲ್ಲ. ಏನು ಬಂದಿಲ್ಲ ಅಂದ್ರೆ ಡೈಲಿ ಮುದ್ದೆ ತಿನ್ನಕ್ಕೆ ಆಗಲ್ಲ, ಡೈಲಿ ರಾಗಿ ತಿನ್ನಕ್ಕೆ ಆಗಲ್ಲ. ಅಷ್ಟು ಬಿಟ್ಟು ಮಿಕ್ಕಿದಕ್ಕೆಲ್ಲಾ ನಂಚುಕೊಳ್ಳೋದಕ್ಕೆ ಬೇಕಾಗಿರುವಂತಹ ಈ ಸ್ಪೈಸಿಸ್ ಐಟಂ ಅಂತ ಏನು ಹೇಳ್ತಿವಿ ಅದು ಇರಬಹುದು.
[3:41]ಎಲ್ಲಾ ತರದ್ದು ಟೋಟಲ್ ಮಸಾಲ ಐಟಮ್ಸ್ ಗಳು ಟೋಟಲ್ ಆಗಿ ಬೇಕೇ ಬೇಕು. ಅದೆಲ್ಲಾ ನಿಂತಿರೋದೆ ಪರಾಗಸ್ಪರ್ಶದಿಂದ. ಆದ್ರೆ ನಮಗೆ ಇದರ ಬಗ್ಗೆ ಗೊತ್ತು ಇಲ್ಲ, ನಾಲೆಡ್ಜ್ ಇಲ್ಲ. ಯಾಕೆಂದರೆ ಅದು ಗಾಡ್ ಗಿಫ್ಟ್. ಆಟೋಮ್ಯಾಟಿಕ್ ಆಗಿ ಜೇನು ಹುಳುಗಳೇ ಪರಾಗಸ್ಪರ್ಶ ಮಾಡ್ತಾ ಇರೋದ್ರಿಂದ, ಅದೇ ಪರಾಗ ಆಗಿ ಆಗಿ ನಮಗೆ ಹೆವಿ ಹೀಲ್ಡ್ ಆಗ್ತಾ ಇದೆ. ಸೋ ಇದರಲ್ಲಿ ನಾವುಗಳು ಕೆಲವೊಂದು ತಪ್ಪು ಮಾಡ್ತಾ ಇರೋದು ಏನಂತ ಅಂದ್ರೆ ಜೇನು ಹುಳುಗಳನ್ನ ಸಾಯಿಸ್ತಾ ಇರುವಂತದ್ದು. ಸಾಯಿಸ್ತಾ ಇದ್ದೀವಿ, ಸುಟ್ಟಾಕ್ತಾ ಇದ್ದೀವಿ. ಅಂದ್ರೆ ಹೇಗೆ ಗೊತ್ತಿಲ್ವಲ್ಲ? ಜೇನುತುಪ್ಪಕ್ಕೋಸ್ಕರ ಏನು ಮಾಡೋದು ಬೆಂಕಿ ಇಟ್ಬಿಡೋದು, ಆ ಹುಳಗಳನ್ನೆಲ್ಲಾ ಸಾಯಿಸೋದು, ತುಪ್ಪ ನೋಡೋದು. ತುಪ್ಪ ಇಲ್ಲ ಅಂದ್ರೆ ಬಿಟ್ಬಿಡೋದು. ಈ ತರ ಆಗ್ತಾ ಇದೆ. ಇನ್ನು ಕೆಲವರು ಹೆಜ್ಜೆ ಏನೂ ಅಂತ ಇದೆ. ಆ ಹೆಜ್ಜೆನು ಕೂಡ ಸುಟ್ಟಾಕ್ತಾ ಇದ್ದಾರೆ. ಅದನ್ನು ಕೂಡ ಯಾಕೆ ಅಂತ ಅಂದ್ರೆ ತುಪ್ಪಕ್ಕೋಸ್ಕರ. ನನ್ನ ಉದ್ದೇಶ ಏನಂದ್ರೆ ಜೇನು ತುಪ್ಪ ಬೇಕಾದ್ರೆ ನೀವು ಅಲ್ಲಿಂದ ಕದ್ಕೊಳ್ಳಿ. ಯಾಕೆ ಅಂದ್ರೆ ಕದಿಯೋದು ಅಂತಾನೆ ಹೇಳಕ್ಕೆ ಇಷ್ಟ ಪಡ್ತೀನಿ. ಯಾಕೆಂದ್ರೆ ನಾವು ಅದರದ್ದು ಊಟನ ಕದಿತಾ ಇರುವಂತದ್ದು. ಕದಿಬಹುದು. ಆದ್ರೆ ಹುಳಗಳನ್ನ ಸಾಯಿಸುವಂತ ಅಧಿಕಾರ ನಮಗಿಲ್ಲ ಬಟ್ ಬೇಡ ಯಾರನ್ನು ಕೂಡ ಸಾಯಿಸೋದಕ್ಕೆ ಹೋಗ್ಬೇಡಿ. ನಾವಾದ್ರೆ ಏನು ಮಾಡ್ತಾ ಇದ್ದೀವಿ? ಜೇನು ಹುಳಗಳನ್ನ ಅದನ್ನ ಉಳಿಸಿಕೊಡ್ತಾ ಇದ್ದೀವಿ. ಯಾವುದೇ ರೀತಿ ಅದನ್ನ ಸಾಯಿಸ್ತಾ ಇಲ್ಲ. ಅದನ್ನ ಹೆಚ್ಚಿಸ್ತಾ ಇದ್ದೀವಿ. ಇದನ್ನ ನಾವೆಲ್ಲರೂ ಕೂಡ ಮಾಡಬಹುದು. ಇನ್ನ ಜೇನು ಕೃಷಿನಲ್ಲಿ ಇಷ್ಟೆಲ್ಲಾ ಇದೆ ಇನ್ನು ಹೇಳ್ತಾ ಹೋಗ್ತೀನಿ ಮುಂದುಮುಂದೆ ಬಟ್ ಇವಾಗ ನಿಮಗೆ ಅದು ಲಾಭದಾಯಕನಾ ಅನ್ನೋದರ ಬಗ್ಗೆ ಫಸ್ಟ್ ಇಂಪಾರ್ಟೆಂಟ್. ಯಾಕೆ ಅಂದ್ರೆ ಎಲ್ಲರೂ ಯೋಚನೆ ಮಾಡೋದು ಇದು ಲಾಭ ಇದೆಯಾ? ಲಾಭ ಇದೆಯಾ? ಲಾಭ ಇದೆಯಾ? ಅಂತ. ಒಂದೇ ಒಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ. ನನ್ನ ಎಕ್ಸ್ಪೀರಿಯನ್ಸ್ ಅಲ್ಲಿ 95% ಜನ ಜೇನು ಕೃಷಿನ ಮಾಡೋಕೆ ಇಷ್ಟ ಪಡಲ್ಲ. 5% ಜನ ಮಾತ್ರ ಇಷ್ಟಪಡುತ್ತಾರೆ. ಅಲ್ಲಿ ಯೋಚನೆ ಮಾಡಿ 5% ಜನ ಮಾತ್ರ ಇಡೀ ಇಂಡಿಯಾದಲ್ಲಿ ಇರ್ಲಿ ವರ್ಲ್ಡ್ ಅಲ್ಲಿ ಇರ್ಲಿ ಶ್ರೀಮಂತರಾಗಿರೋದು. ಇನ್ನು ಮಿಕ್ಕಿದವರು ಎಲ್ಲರೂ ಮಿಡ್ ಕ್ಲಾಸ್ ಲೆವೆಲ್ ಅಲ್ಲಿ ಇದ್ದೀವಿ ಇಲ್ಲ ಲೋ ಕ್ಲಾಸ್ ಲೆವೆಲ್ ಅಲ್ಲಿ ಇದ್ದೀವಿ. ಆ 5% ಜನನೇ ಆಳ್ತಾ ಇರೋದು. ಅದೇ ತರನೇ ಎಕ್ಸಾಂಪಲ್ ತಗೊಳ್ಳೋದಾದ್ರೆ ನಾವು ಜೇನು ಕೃಷಿ ಮಾಡಿದ್ರೆ ನಾವು 5% ಅಲ್ಲೇ ಇರ್ತೀವಿ. ನಾವು 5% ಅಲ್ಲಿ ಇದ್ದೀವಿ ಅಂತ ಅಂದ್ರೆ ಅಂದ್ರೆ ನಾವುಗಳೇ ಜೇನು ತುಪ್ಪನ ಮಿಕ್ಕಿದವರಿಗೆ ಎಲ್ಲರಿಗೂ ಸಪ್ಲೈ ಮಾಡಬೇಕು. ಈ ರೀತಿ ಆಗಿದೆ. ಹಾಗಾಗಿ ಜೇನು ಕೃಷಿ ಅನ್ನೋದು ತುಂಬಾ ಡಿಮ್ಯಾಂಡ್ ಇರುವಂತಹ ಒಂದು ಪ್ರಾಡಕ್ಟ್. ಸೋ ಜೇನು ಕೃಷಿನಲ್ಲಿ ಜೇನು ಮೇಣ ಬರುತ್ತೆ. ಜೇನುದು ಪರಾಗ ಬರುತ್ತೆ. ಅದರ ಜೊತೆಗೆ ಜೇನುದು ಪ್ರೋಪೋಲಿಸ್ ಅಂತ ಹೇಳ್ತಿವಿ, ವಿಷ ಅಂತ ಹೇಳ್ತಿವಿ. ಮೇಣ, ಟೋಟಲ್ ಆಗಿ ಈ ತರ ರಾಜಸಾಯಿ ರಸ, ಈ ತರದೆಲ್ಲಾ ಬರುತ್ತೆ. ಜೊತೆಗೆ ಜೇನು ಹುಳಗಳನ್ನು ಕೂಡ ನಾವೂ ಸೇಲ್ ಕೂಡ ಮಾಡಬಹುದು. ಯಾವ ರೀತಿ ಹೆಂಗೆ ಹೆಂಗೆ ಅಂತ ಹೇಳ್ತೀನಿ ಅಂದ್ರೆ ಒಂದೊಂದರಲ್ಲೂ ಒಂದೊಂದರಲ್ಲೂನು ಇನ್ಕಮ್ ಇದೆ. ನಮ್ಮ ಹೆಚ್ಚಿನ ಜನ ಕಾನ್ಸಂಟ್ರೇಟ್ ಮಾಡ್ತಾ ಇರುವಂತದ್ದು ಬರಿ ಜೇನು ತುಪ್ಪ ಮಾತ್ರ. ಜೇನು ತುಪ್ಪದಲ್ಲೇನೇ ವೆರೈಟಿ ವೆರೈಟಿ ವೆರೈಟಿ ಇದೆ. ಈಗ ಎಕ್ಸಾಂಪಲ್ ನನ್ನ ಹತ್ರನೇ ಜೇನು ತುಪ್ಪ ಇವಾಗ ಮಲ್ಟಿಫ್ಲೋರ ಒನ್, ಮಲ್ಟಿಫ್ಲೋರ ಟೂ ಅಂತ ಇಟ್ಕೊಂಡಿದ್ದೀವಿ. ಹೊರಗಡೆಯಿಂದ ನಾನು ನೀಲಗಿರಿ ಫ್ಲೇವರ್ದು ಕೂಡ ಜೇನು ತುಪ್ಪ ತರ್ಸಿ ಇಟ್ಕೊಂಡಿದ್ದೀನಿ. ಕೆಲವೊಂದು ಜಾಮುನ್ ಫ್ಲೇವರ್ದು ತರ್ಸಿ ಇಟ್ಕೊಂಡಿದ್ದೀನಿ. ಈ ತರದ್ದು ವೆರೈಟಿನಲ್ಲಿ ಒಂದು 10 12 ಮೋನೋಫ್ಲೋರ ಅಂತ ಬರುತ್ತೆ. ಅಂದ್ರೆ ಅದರದ್ದೇ ಆದಂತಹ ಟೇಸ್ಟ್ ನ ಕೊಡುತ್ತೆ. ಅದು ಹೇಗೆ ಅದನ್ನ ಮಾಡಿರ್ತಾರೆ ಅಂದ್ರೆ ಅದಕ್ಕೆ ಏನು ಮಿಕ್ಸ್ ಮಾಡಿರೋದಿಲ್ಲ. ಒಂದು ಟೋಟಲ್ ಆಗಿ ಒಂದು ಫ್ಲಾಟ್ ಅಲ್ಲಿ ಒಂದು 40 ಎಕರೆ, 50 ಎಕರೆ, 100 ಎಕರೆ ಈ ತರ ಇರುವಂತ ಜಮೀನಲ್ಲಿ ಒಂದೇ ಕ್ರಾಪ್ ಇರುತ್ತೆ. ಅಂತ ಕ್ರಾಪ್ ಇರುವಂತಹ ಜಮೀನಲ್ಲೇ ಬಾಕ್ಸ್ ಗಳನ್ನ ತಗೊಂಡು ಹೋಗಿ ಇಟ್ಟು ಅಲ್ಲಿ ಬರುವಂತ ಒಂದೇ ಒಂದು ಆ ಫ್ಲವರ್ ಸೀಸನ್ ನಲ್ಲಿ ಇಟ್ಟಾಗ ಅದು ಪೂರ್ತಿಯಾಗಿ ಫ್ಲವರ್ ಅಲ್ಲಿ ಅದನ್ನ ತೆಗೆದಾಗ ಅದು ಹೆಚ್ಚಿನ ಪ್ರಮಾಣ ಸೂರ್ಯಕಾಂತಿ ಇರಬಹುದು. ಉಚ್ಚಳ ಇರಬಹುದು ಈ ರೀತಿ ಬೇರೆ ಬೇರೆ ಬೇರೆ ಬೇರೆ ಮೋನೋಫ್ಲೋರಗಳನ್ನ ತೆಗೆಯುವಂತದ್ದು ಆಗುತ್ತೆ. ಹಾಗಾಗಿ ಒಂದೇ ತರ ಟೇಸ್ಟ್ ಸಿಗುವಂತದ್ದು ಕೂಡ ಸಿಗುತ್ತೆ. ನಮ್ ಕಡೆ ಹೆಚ್ಚಿಗೆ ಸಿಗುವಂತದ್ದು ಮಲ್ಟಿ ಫ್ಲೋರ. ಯಾಕೆಂದ್ರೆ ಎಲ್ಲಾ ತರ ಬೆಳೆಗಳು ಇರೋದ್ರಿಂದ ಮಲ್ಟಿಫ್ಲೋರ ಹನಿಗಳು ಕೂಡ ಸಿಗುತ್ತೆ. ಮಲ್ಟಿಫ್ಲೋರ ಹನಿನೇ ತುಂಬಾ ಚೆನ್ನಾಗಿರುವಂತದ್ದು, ಟೇಸ್ಟಿಯಾಗಿರುವಂತದ್ದು. ಕೆಲವೊಂದು ಲಾಸ್ಟ್ ಟೈಮ್ ತಗೊಂಡಿದ್ದೀವಿ ಬೇವಿನದ್ದು ಕೂಡ ತಗೊಂಡಿದ್ದೀವಿ. ನಾವ್ ಗೊತ್ತೇ ಇಲ್ಲ ನಾವು ಹಾರ್ವೆಸ್ಟ್ ಮಾಡ್ಬೇಕಾದ್ರೆ ತಗೆದು ನೋಡ್ತಿವಿ. ತಗೆದು ನೋಡಿದ್ರೆ ಆ ಟೈಮಲ್ಲಿ ಹಿಂದಿನ ಸೀಸನ್ ನಲ್ಲಿನೋ ಬೇವಿನ ಹೂಗಳಿತ್ತು ಅನ್ಸುತ್ತೆ. ತಗೆದು ನೋಡಿದ್ರೆ ಜೇನು ತುಪ್ಪ ಎಷ್ಟು ಕಹಿಯಾಗಿದೆ ಅಂದ್ರೆ ಬೇವಿನ ಎಣ್ಣೆನೇ ಅದ್ರಲ್ಲಿ ಇತ್ತೇನೋ ಅನ್ನೋಷ್ಟು ಕಹಿ ಇತ್ತು. ಬಟ್ ತುಂಬಾ ಒಳ್ಳೇದು. ಯಾಕೆ ಅಂದ್ರೆ ಸಿಹಿ ಕಹಿ ಅಂತ ಎರಡು ಹೇಳೋ ತರ. ತುಂಬಾ ಚೆನ್ನಾಗಿದೆ ಅಂದ್ರೆ ಅದ್ರದ್ದೇ ಆದಂತದ್ದು. ನಾವು ಯಾವಾಗ್ಲೂನು ಜೇನು ಹಿಡಿದಾಗ ಪ್ರತಿಯೊಂದರಲ್ಲೂನು ಒಂದೊಂದು ಸ್ವಲ್ಪ ಸ್ವಲ್ಪ ತಿಂತಾ ಇರ್ತೀವಿ. ಏನುಕೆ ಅಂತ ಅಂದ್ರೆ ತಿನ್ನಬೇಕು ತಿನ್ನಬೇಕು ಅಂತ ಅಲ್ಲ. ತಿಂದು ತಿಂದು ಬೇಜಾರ್ ಆಗ್ಬಿಟ್ಟಿದೆ ಅಷ್ಟು ತಿಂತಾ ಇದ್ದೀವಿ. ಆದ್ರೆ ನಮಗೆ ಇಷ್ಟ ಏನಂದ್ರೆ ಇನ್ನು ಹೊಸ ಟೇಸ್ಟ್ ಸಿಗುತ್ತಾ, ಹೊಸ ಫ್ಲೇವರ್ ಸಿಗುತ್ತಾ, ಏನ್ ಇರಬಹುದು, ಏನ್ ಟೇಸ್ಟ್ ಇರಬಹುದು, ಹೆಂಗಿದೆ ಏನು ಅನ್ನೋದನ್ನ ಅದನ್ನ ಚೆಕ್ ಮಾಡ್ತಿರ್ತೀವಿ. ಇದರಲ್ಲಿ ಥಿಕ್ನೆಸ್ ಕೂಡ ಚೇಂಜಸ್ ಇರುತ್ತೆ. ಗಟ್ಟಿಯಾಗಿರೋದು, ತೆಳ್ಳಗೆ ಇರೋದು ಈ ತರದ್ದು ಬರ್ತಾ ಇರುತ್ತೆ. ಕಲರ್ ಕೂಡ ಚೇಂಜ್ ಆಗ್ತಾ ಇರುತ್ತೆ ಅದು ಫ್ಲೋರ ಮೇಲೆ ಡಿಪೆಂಡ್ ಆಗುತ್ತೆ. ಕೆಲವು ಲೈಟ್ ಕಲರ್ ಇರುತ್ತೆ, ಕೆಲವು ಡಾರ್ಕ್ ಕಲರ್ ಇರುತ್ತೆ. ಇದೆಲ್ಲಾ ಇರುತ್ತೆ. ಕೆಲವರು ಜೇನು ತುಪ್ಪ ಅಂತ ಅಂದ್ರೆ ಹಿಂಗೆ ಇರ್ಬೇಕು ಅಂತ ಅಂದುಕೊಂಡಿದ್ದೀರಾ. ಚಾನ್ಸೇ ಇಲ್ಲ ಯಾವಾಗಲೂ ಒಂದೇ ತರ ಜೇನು ತುಪ್ಪ ಸಿಗೋದೇ ಇಲ್ಲ ನಿಮಗೆ. ಯಾಕೆಂದರೆ ಒಂದೇ ತರ ಫ್ಲವರ್ಸ್ ಇರಲ್ಲ ಅಂದ್ರೆ ಡಿಫರೆಂಟ್ ಡಿಫರೆಂಟ್ ಆಗಿ ಇರುತ್ತೆ. ಒಂದೇ ತರ ಸೀಸನ್ ಇರಲ್ಲ. ಹೀಗಾಗಿ ಬೇರೆ ಬೇರೆ ಸೀಸನ್ ಅಲ್ಲಿ ಬೇರೆ ಬೇರೆ ತರದಲ್ಲಿ ಸಿಗ್ತಾ ಹೋಗುತ್ತೆ. ಟೋಟಲ್ ಆಗಿ ಜೇನು ತುಪ್ಪ ಅನ್ನೋದು ಒಂದು ದೊಡ್ಡ ಬಿಸಿನೆಸ್. ಅದನ್ನು ಕೂಡ ಎಲ್ಲರಿಗೂ ಸಪ್ಲೈ ಮಾಡೋದ್ರಿಂದ ಕೊಡೋದ್ರಿಂದ ನಾವು ಅದನ್ನ ಬೆನಿಫಿಟ್ ನ ತಗೋತಾ ಹೋಗಬಹುದು. ಫಸ್ಟ್ ನೇದು ಜೇನು ತುಪ್ಪ. ಜೇನು ತುಪ್ಪ ಅಲ್ದೆ ಮೇಣ. ಮೇಣ ಅಂತೂ ತುಂಬಾ ಜನಕ್ಕೆ ಬೇಕಾಗಿರುವಂತದ್ದು. ಗೊತ್ತು ಇಲ್ಲ ಏನೇನುಕ್ಕೆ ಯೂಸ್ ಮಾಡ್ತಾರೆ ಅಂತ. ನಮಗೆ ಗೊತ್ತಿರಂಗೆ ಮೇಣದ ಬತ್ತಿ ಅಂತ ಅಷ್ಟೇ ಅನ್ಕೊಂಡಿದ್ದೀವಿ. ಬಟ್ ಅದು ಲಿಸ್ಟ್ ಫಸ್ಟ್ ಕ್ವಾಲಿಟಿ ಇದೆಲ್ಲಾ ಜಂಡು ಬಾಂಬ್ ಅಂತ ಏನು ಹೇಳ್ತೀವಿ ಅಮೃತಾಂಜನ್ ಅಂತ ಏನು ಹೇಳ್ತಿವಿ. ಮತ್ತೆ ಫೇಸ್ ಗೆ ಯೂಸ್ ಮಾಡುವಂತ ಬೀ ವ್ಯಾಕ್ಸ್ ಮುಖಕ್ಕೆ ಬೇಕಾಗಿರುವಂತದ್ದು ಏನೇ ಟೋಟಲ್ ಆಗಿ ಇರುವಂತದ್ದೆಲ್ಲದಕ್ಕೂನು ಬೀ ವ್ಯಾಕ್ಸ್ ನ ಯೂಸ್ ಮಾಡ್ತಾರೆ. ಸೋ ಕಂಟೆಂಟ್ ಬೇಕಾದ್ರೆ ನೀವು ಬಾಟಲ್ ಗಳಲ್ಲಿ ನೋಡ್ದಾಗ ಅದ್ರಲ್ಲಿ ಕಂಟೆಂಟ್ಸ್ ಅಂತ ಇಂಗ್ರಿಡಿಯಂಟ್ಸ್ ಅಂತ ಹಾಕ್ದಾಗ ಅದ್ರಲ್ಲಿ ನಿಮಗೆ ಇರುತ್ತೆ ಬೀ ವ್ಯಾಕ್ಸ್ ಅಂತ. ಸೋ ಆ ರೀತಿ ತುಂಬಾ ಯೂಸ್ ಮಾಡುವಂತದ್ದು ಲಿಪ್ ಬಾಂಬ್ ಇರಬಹುದು. ಸೋ ಇದಕ್ಕೆಲ್ಲದಕ್ಕೂನು ಜೇನು ಮೇಣನ ಯೂಸ್ ಮಾಡ್ತೀವಿ. ಇದಲ್ದೇನೆ ನಾವೇನೆ ಜೇನು ಮೇಣನ ಜೇನಿನ ಮೇಣದ ಹಾಳೆ ಅಂತ ಮಾಡ್ತೀವಿ. ಅದಕ್ಕೋಸ್ಕರ ಬೇಕಾಗುತ್ತೆ. ಅದು ಒಂದು ಶೀಟೇನೆ 50 ರಿಂದ 60 ರೂಪಾಯಿ ಆಗುತ್ತೆ. ಒಂದು ಕೆಜಿ ಗೆ 1200 ರೂಪಾಯಿ ಆಗುತ್ತೆ. ಸೋ ಅಷ್ಟು ಇರುವಂತದ್ದು. ಅಂದ್ರೆ ಅಲ್ಲಿಗೆ ಜೇನು ತುಪ್ಪ ನಾವು 500 550ಕ್ಕೆ ಕೊಟ್ರೆ ಜೇನುದ ಮೇಣನ 1000, 1200 ಕೊಡ್ತೀವಿ. ಅಲ್ಲಿಗೆ ಮೇಣದಿಂದನೇ ದುಡ್ಡನ ಮಾಡಬಹುದು. ಈ ರೀತಿ ಆಗಿದೆ. ಮತ್ತೆ ಇನ್ನೂ ಪರಾಗ ಕೂಡ ಕಲೆಕ್ಟ್ ಮಾಡಬಹುದು. ಪರಾಗ ಕಲೆಕ್ಟ್ ಮಾಡೋದ್ರಿಂದ ಅದ್ರಲ್ಲಿ ಹೈಯೆಸ್ಟ್ ರಿಚ್ ಪ್ರೋಟೀನ್ ಇರೋದ್ರಿಂದ ಅದನ್ನ ಕೂಡ ಸೇಲ್ ಮಾಡಬಹುದು. ಮತ್ತೆ ನಾವೇ ಕೂಡ ತಿನ್ನಬಹುದು ಇಲ್ಲ ಅಂದ್ರೆ ಜೇನುಗಳಿಗೆ ಪರಾಗ ಸಿಗ್ಲಿಲ್ಲ ಅಂದಿದ್ದ ಟೈಮ್ ಅಲ್ಲಿ ರಿಟರ್ನ್ ಕೊಡಬಹುದು. ಈ ರೀತಿ ಎಲ್ಲಾ ಇರುತ್ತೆ. ಅದಾದ್ಮೇಲೆ ವಿಷ ಜೇನಿನ ವಿಷ ಅಂತ ಹೇಳ್ತಿವಿ, ಬೀ ವೆನಮ್ ಅಂತ ಹೇಳ್ತಿವಿ. ಬೀ ವೆನಮ್ ದಂತೂ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿ ಆಗಿದೆ. ಅದು ಜನಗಳಿಗೆ ಇಷ್ಟ. ಫಾರಿನ್ ಅಲ್ಲಂತೂ ಇದು ಯಾವ ರೀತಿ ಇದೆ ಅಂತ ಅಂದ್ರೆ ಬೀ ವೆನಮ್ ಥೆರಪಿ ಅಂತಾನೆ ಇದೆ. ನಮ್ಮ ಇಂಡಿಯಾದಲ್ಲಿ ಇನ್ನುಷ್ಟು ಅಪ್ಗ್ರೇಡ್ ಆಗಿಲ್ಲ ಸ್ವಲ್ಪ ಇನ್ನೂ ನಾಲೆಡ್ಜ್ ಕಮ್ಮಿ ಇದೆ. ಹೊರಗಡೆ ಬಿ ವೆನಮ್ ಥೆರಪಿ ಅಂದ್ರೆ ಹುಳಗಳನ್ನು ಹಿಡ್ಕೊಂಡು ಚುಚ್ಚಿಸಿಕೊಳ್ತಾರೆ. ಚುಚ್ಚಿಸಕೊಳ್ಳೋದಕ್ಕೆ ಅಂತಾನೆ ಹೊರಗಡೆಯಿಂದ ಬರ್ತಾರೆ ಚುಚ್ಚಿಸಿಕೊಳ್ಳೋದ್ರಿಂದ ಅವರು ಸಂಧಿವಾತ ಕಾಯಿಲೆ ಅಂತ ಏನು ಹೇಳ್ತಿವಿ. ಸೋ ಜಾಯಿಂಟ್ ಪ್ರಾಬ್ಲಮ್ಸ್ ಬರೋದು ಆ ತರದ ಎಲ್ಲದೂನು ಕಂಟ್ರೋಲ್ ಆಗೋದಕ್ಕೆ ಬೀ ವೆನಮ್ ನ ಯೂಸ್ ಮಾಡ್ತಾರೆ. ಆಪರೇಷನ್ ಟೈಮ್ ಅಲ್ಲಿ ಸ್ಪೈನಲ್ ಕಾರ್ಡ್ ಗೆ ಇಂಜೆಕ್ಷನ್ ಕೊಡುವಂತದ್ದು ಕೂಡ ಅದ್ರಲ್ಲೂ ಕೂಡ ಬೀ ವೆನಮ್ ದು ಇಂಗ್ರಿಡಿಯೆಂಟ್ ಇರುತ್ತಂತೆ. ಈ ರೀತಿ ಟೋಟಲ್ ಆಗಿ ಬೀ ವೆನಮ್ ಅನ್ನೋದು ವಿಷ ಅನ್ನೋದು ತುಂಬಾ ಒಳ್ಳೇದು. ನಮಗೆ ಹೇಗೆ ಆಗಿದೆ ಅಂತ ಹೇಳಿದ್ರೆ ಜೇನು ಹುಳುಗಳು ಅವಾಗ ಅವಾಗ ಸ್ಟಿಂಗ್ ಮಾಡ್ತಾ ಇರ್ತವೆ, ಚುಚ್ಚುತಾ ಇರ್ತವೆ. ನಮ್ಮ ಬಾಡಿನಲ್ಲಿ ಪಾಯ್ಸನ್ ತರ ಜೇನುಹುಳಗಳು ಚುಚ್ಚಿ ಚುಚ್ಚಿ ಚುಚ್ಚಿ ಚುಚ್ಚಿ ನಮಗೆ ಆಂಟಿಡೋಟ್ ತರ ಆಗೋಗಿದೆ. ಇವಾಗ ಹೇಗೆ ಅಂದ್ರೆ ಚುಚ್ಚಿದ್ರೂನು ಊದ್ಕೊಳ್ಳೋದಿಲ್ಲ. ಮತ್ತೆ ಸ್ವೆಲ್ಲಿಂಗ್ ಬರೋದಿಲ್ಲ ಅಂದ್ರೆ ಸ್ವೆಲ್ಲಿಂಗ್ ಬರೋದಿಲ್ಲ, ಮತ್ತೆ ಉರಿ ಬರೋದಿಲ್ಲ ಈ ತರದೆಲ್ಲ ಕಂಟ್ರೋಲ್ ಆಗಿದೆ. ಮುಂಚೆ ಎಲ್ಲಾ ಫಸ್ಟ್ ಜೇನು ಚುಚ್ಚಿದಾಗ ನಮಗೆ ಜ್ವರ ಬಂದ್ಬಿಡ್ತಾ ಇತ್ತು. ಅಷ್ಟು ನಮಗೆ ಬಾಡಿನಲ್ಲಿ ಇಮ್ಯೂನಿಟಿ ಕಮ್ಮಿ ಇತ್ತು. ಇವಾಗ ಹೇಗೆ ಆಗಿದೆ ಅಂದ್ರೆ ತುಂಬಾ ಚೆನ್ನಾಗಿ ಆಗಿದೆ. ಸೋ ಜೇನು ತುಪ್ಪ ತಿನ್ನೋದಲ್ದೆ ಬೇರೆ ಎಲ್ಲದನ್ನು ಜೇನು ಹುಳಗಳು ಚುಚ್ಚೋದ್ರಿಂದನೂ ಕೂಡ ನಮಗೆ ಬೆನಿಫಿಟ್ಸ್ ಇದ್ದೇ ಇದೆ. ನಮಗೆ ಗೊತ್ತಿರಂಗೆ ಒಬ್ಬರು ನಮ್ಮ ಕರ್ನಾಟಕದಲ್ಲೇನೆ ನಮ್ಮ ಲೋಕಲ್ ಜನಗಳಿಗೆ ಒಬ್ಬರಿಗೆ ಚುಚ್ಚಿಸ್ತಾ ಇದ್ದಾರೆ. ಒಂದು ಹುಳುಕೆ 200 ರೂಪಾಯಿ ಚಾರ್ಜ್ ಮಾಡ್ತಾ ಇದ್ದಾರೆ. ಹೊರಗಡೆಯವರಿಗೆ 400 ರೂಪಾಯಿ ಚಾರ್ಜ್ ಮಾಡ್ತಾ ಇದ್ದಾರೆ. ಸೋ ಈ ರೀತಿ ಜೇನು ಹುಳಗಳಿಂದ ಹಿಡ್ಕೊಂಡು ಚುಚ್ಚಿಸೋದ್ರಿಂದನೂ ಕೂಡ ಇನ್ಕಮ್ ಇದೆ. ಸೋ ಈ ರೀತಿ ಬೆನಿಫಿಟ್ಸ್ ಇದೆ. ಇದಲ್ಲದೆ ರಾಜಸಾಯಿ ರಸ ಅಂತ ಒಂದು ಬರುತ್ತೆ, ರಾಯಲ್ ಜೆಲ್ಲಿ ಅಂತ ಒಂದು ಬರುತ್ತೆ. ಸೋ ರಾಯಲ್ ಜೆಲ್ಲಿ ಕೂಡ ತುಂಬಾ ಚೆನ್ನಾಗಿರುತ್ತೆ. ಅದ್ರಲ್ಲಿ ಆಂಟಿ ಏಜಿಂಗ್ ಇದೆ. ಸೋ ಹೆಲ್ಥಿಯಾಗಿ ಏಜಿಂಗ್ ಆಗಬಹುದು. ನಿಧಾನವಾಗಿ ಏಜಿಂಗ್ ಆಗಬಹುದು. ಸೋ ಆ ತರ ಏಜಿಂಗ್ ಇದೆ. ಜೊತೆಗೆ ಇಮ್ಯೂನಿಟಿ ಚೆನ್ನಾಗಿ ಇದೆ ಅದ್ರಲ್ಲಿ. ರಿಚ್ ಪ್ರೋಟೀನ್ ಕೂಡ ಇದೆ. ಸೋ ಅದಕ್ಕೆ ರಾಜಸಾಯಿ ರಸ ಅಂತ ಹೇಳ್ತಿವಿ. ಅದು ಕಾಸ್ಟ್ಲಿನೇ ಇದೆ. ಸೋ ನೀವೆಲ್ಲ ಬೇಕಾದ್ರೆ ನಾನು ಇದನ್ನ ಏನೇನು ಹೇಳ್ತಾ ಇದೀನಿ ಇದನ್ನೆಲ್ಲದೂನು ಕೂಡ ನೀವು youtube ಅಲ್ಲಿ ಅಥವಾ ಗೂಗಲ್ ಅಲ್ಲಿ ಸರ್ಚ್ ಮಾಡ್ಕೊಂಡಾಗ ನಿಮಗೆ ಇದರ ಬಗ್ಗೆ ಫುಲ್ ಇನ್ಫಾರ್ಮೇಷನ್ ಸಿಗ್ತಾ ಹೋಗುತ್ತೆ. ಸೋ ಅದು ಕೂಡ ರಾಜಸಾಯಿ ರಸನೂ ಕೂಡ ನಾವು ತೆಗಿತಾ ಇದ್ದೀವಿ. ಅದು ಕೂಡ ಚೆನ್ನಾಗಿರುತ್ತೆ. ಈ ರೀತಿ ಟೋಟಲ್ ಆಗಿ ಎಲ್ಲಾ ಇದೆ ಇಷ್ಟೆಲ್ಲಾದ್ರಲ್ಲೂನೂ ಇನ್ಕಮ್ ಮಾಡಬಹುದು. ಇದಲ್ಲದೆ ಹುಳಗಳನ್ನೇ ಕೂಡ ಜೇನು ಹುಳಗಳಲ್ಲಿ ತುಡುವೆ ಜೇನು ಅಂತ ಬರುತ್ತೆ. ನಾನು ಸಾಕ್ತಿರುವಂತದ್ದು. ಆ ತುಡುವೆ ಜೇನುನನ್ನೇ ನೀವು ಇಟ್ಕೊಂಡು ಅದನ್ನ ಸಾಕಿ ಅದನ್ನ ಬೇರೆಯವರಿಗೆ ಕೂಡ ಸೇಲ್ ಮಾಡಬಹುದು. ಎಕ್ಸಾಂಪಲ್ ಒಂದು ಬಾಕ್ಸ್ ಹುಳುಕೆ ಅದ್ರಲ್ಲಿ ನಾಲ್ಕು ಫ್ರೇಮ್ ನಿಂದ ಆರು ಫ್ರೇಮ್ ಹುಳ ಇರುತ್ತೆ. ನಾಲ್ಕು ಫ್ರೇಮ್ ಹುಳುಕೆ ನಾವು 2000 ರೂಪಾಯಿ ಚಾರ್ಜ್ ಮಾಡ್ತಾ ಇದ್ದೀವಿ. ಆರು ಫ್ರೇಮ್ ಹುಳುಕೆ 2000, 3000 ರೂಪಾಯಿ ಒಂದು ಬಾಕ್ಸ್ ಹುಳುಗಳಿಗೆ ಕೊಡ್ತಾ ಇದ್ದೀವಿ ಬರಿ ಹುಳುಗಳು ಮಾತ್ರ, ಬಾಕ್ಸ್ ಅಲ್ಲ. ಬಾಕ್ಸ್ ಗಳು ನಾಲ್ಕು ಫ್ರೇಮ್ ಬಾಕ್ಸ್, ಆರು ಫ್ರೇಮ್ ಬಾಕ್ಸ್, ಎಂಟು ಫ್ರೇಮ್ ಬಾಕ್ಸ್ ಅಂತ ಡಿಫ್ರೆಂಟ್ ಡಿಫ್ರೆಂಟ್ ಆಗಿದೆ. ಇದೆಲ್ಲ ಇರುತ್ತೆ. ಸೋ ನಾನು ಹೇಳ್ತಾ ಇರೋದು ಹುಳುಗಳು. ಹುಳುಗಳು ಜೇನು ತುಪ್ಪ ಮೇಣ ಈ ರೀತಿ ಟೋಟಲ್ ಆಗಿ ಏನಿದೆ ಎಲ್ಲಾದ್ರಿಂದನೂ ಇನ್ಕಮ್ ನ ಮಾಡ್ತಾ ಹೋಗಬಹುದು. ಇಷ್ಟೆಲ್ಲಾ ಬೆನಿಫಿಟ್ಸ್ ಇದೆ. ಮೇನ್ ಇಂಪಾರ್ಟೆಂಟ್ ಮಾಡ್ಬೇಕು ಅನ್ನೋ ಒಂದು ಮನ್ಸ್ ಮಾಡಬೇಕು. ಯಾಕೆ ಅಂದ್ರೆ ಇದು ಇನ್ನೊಂದು ವಿಷಯ ಹೇಳೋದೇನಂದ್ರೆ ಬೇರೆ ಕೃಷಿನಲ್ಲಿ ಇದು ಉಪ ಕೃಷಿಯಾಗಿ ಮಾಡಬಹುದು. ಸೋ ಅಗ್ರಿಕಲ್ಚರ್. ಅಗ್ರಿಕಲ್ಚರ್ ಜೊತೆಗೆ ಜೇನು ಕೃಷಿ. ಇದಕ್ಕೆ ಅಂತ ನೀವು ಕೆಲವೊಂದು ಪಾಯಿಂಟ್ಸ್ ಹೇಳ್ತೀನಿ ಅದನ್ನ ಜ್ಞಾಪಕದಲ್ಲಿ ಇಟ್ಕೊಳ್ಳಿ. ನಾವು ಯಾವುದೇ ರೀತಿ ಜೇನು ಹುಳುಗಳಿಗೆ ಏನು ಜಾಗ ಅನ್ನೋದು ಬೇಕಾಗಿಲ್ಲ. ಅಂದ್ರೆ ಜಾಗ ಅಂದ್ರೆ ಜಸ್ಟ್ ಬೇಕಾಗಿರೋದು ಒಂದಡಿ ಒಂದೂವರೆ ಅಡಿ. ಅಷ್ಟೇ ಅಗಲದಲ್ಲಿ ಅದು ಕುತ್ಕೊಳ್ಳುತ್ತೆ. ಸೋ ಅದೇ ನಾವು ಬೇರೆ ಏನಾದರೂ ಮಾಡಬೇಕು ಕುರಿ ಮೇಕೆ ಹಂದಿ ಅದು ಇದು ಬೇರೆ ಏನಾದ್ರು ಸಾಕಾಣಿಕೆ ಮಾಡಬೇಕು ಅಂದ್ರೆ ಅದಕ್ಕೆ ತುಂಬಾ ಜಾಗ ಬೇಕಾಗುತ್ತೆ. ಇದಕ್ಕೆ ಜಾಗ ಅನ್ನೋದು ಬೇಕಾಗಿಲ್ಲ. ಓಕೆ. ನೆಕ್ಸ್ಟ್ ಯಾರು ಬೇಕಾದ್ರೂ ಇದನ್ನು ಸಾಕ್ಬೋದು. ಯಾಕೆ ಅಂದ್ರೆ ಲ್ಯಾಂಡ್ ಇರ್ಬೇಕು ಅಂತ ಇಲ್ಲ. ಬೆಂಗಳೂರು ಸಿಟಿಗಳಂತ ದೊಡ್ಡ ದೊಡ್ಡ ಸಿಟಿಗಳಲ್ಲೂ ಟೆರೆಸ್ ಗಾರ್ಡನ್ ಅಲ್ಲೂ ಕೂಡ ಬೇಕಾದ್ರೆ ಇದನ್ನ ಸಾಕ್ಕೊಬಹುದು ಬಟ್ ಹೆಚ್ಚಿನ ಪ್ರಮಾಣದಲ್ಲಿ ಸಾಕಕ್ಕೆ ಆಗಿಲ್ಲ ಅಂದ್ರು ಅಟ್ಲೀಸ್ಟ್ ಒನ್ ಆರ್ ಟೂ ತುಪ್ಪಕ್ಕೋಸ್ಕರನಾದ್ರೂ ಅವರು ಇಟ್ಕೊಬಹುದು. ಸೋ ಆ ತರದಲ್ಲಿ ಚಿಕ್ಕ ಜಾಗದಿಂದ ಯಾರು ಬೇಕಾದ್ರೂನು ಸಾಕ್ಬಹುದು. ನೆಕ್ಸ್ಟ್ ಇದಕ್ಕೆ ಯಾವುದೇ ರೀತಿ ಫುಡ್ ಅಂತ ನಾವೇನು ಕೊಡಕ್ಕೆ ಹೋಗಲ್ಲ. ನಾವೇ ಯಾಕೆ ಅಂದ್ರೆ ನಾವೇನು ಹೋಗಿ ತಿನ್ನಿಸಬೇಕಾಗಿಲ್ಲ. ಅದೇ ಹಸುಗಳಿಗೆ ಬೇರೆ ಹೊರಗಡೆ ಯಾವುದೇ ಪ್ರಾಣಿಗಳ ಲೈಫ್ ಸ್ಟಾಕ್ ನ ನಾವು ಆದ್ರೆ ಮೂರು ಟೈಮ್ ಫುಡ್ ನ ಕೊಡ್ಬೇಕಾಗುತ್ತೆ. ಇದಕ್ಕೆ ಮೂರು ಟೈಮ್ ನಾವೇನು ಫುಡ್ ನ ಕೊಡಬೇಕಾಗಿಲ್ಲ. ಮತ್ತೆ ನೀರು. ನೀರುನು ಇವಕ್ಕೆ ಏನು ನಾವು ಏನು ಕುಡಿಸಬೇಕಾಗಿಲ್ಲ. ಸೋ ಹೊರಗಡೆ ಅದಕ್ಕಾದ್ರೆ ಬೇರೆ ಪ್ರಾಣಿಗಳನ್ನು ಸಾಕ್ಕೊಂಡ್ರೆ ನಾವು ನೀರು ಕೊಡಬೇಕಾಗುತ್ತೆ. ಇದಕ್ಕೆ ನೀರು ಕೂಡ ನಾವು ಕೊಡುವ ಅವಶ್ಯಕತೆ ಇಲ್ಲ. ಸೋ ನೆಕ್ಸ್ಟ್ ಎಲೆಕ್ಟ್ರಿಸಿಟಿ ಕೂಡ ಕರೆಂಟ್ ಯಾಕೆಂದರೆ ನಾವು ಎಲ್ಲಿ ಏನೇ ವರ್ಕ್ ಮಾಡೋದ್ರೂ ಅದಕ್ಕೆ ಎಲೆಕ್ಟ್ರಿಸಿಟಿ ಇರ್ಬೇಕಾಗುತ್ತೆ. ಇದಕ್ಕೆ ಕರೆಂಟ್ ಬಿಲ್ ಕೂಡ ನಾವು ಕಟ್ಟೋ ಹಾಗಿಲ್ಲ. ಮತ್ತೆ ಬೇರೆದಕ್ಕೆ ನಾವಿಲ್ಲ ಅಂತ ಹೇಳಿದ್ರೆ ಲೇಬರ್ ಕೂಡ ಇರ್ಬೇಕಾಗುತ್ತೆ. ಇದರಲ್ಲಿ ಲೇಬರ್ ಕೂಡ ಇಲ್ದೇ ಇರೋ ತರ ಅಂದ್ರೆ ಯಾಕೆ ಅಂದ್ರೆ ನಾವು ವಾರಕ್ಕೆ ಒಂದು ದಿನ ಒನ್ ಅವರ್ ಇದ್ರಲ್ಲಿ ನಾವು ಟೈಮ್ ನ ಸ್ಪೆಂಡ್ ಮಾಡಿದ್ರೂನು ಕೂಡ ನಾವು ಜೇನು ಕೃಷಿನ ಮಾಡಬಹುದು. ಇಷ್ಟೆಲ್ಲಾ ಇದೆ. ಹಿಂಗಾಗಿ ಜೇನು ಕೃಷಿ ಅನ್ನೋದು ಇನಿಶಿಯಲ್ ಸ್ಟೇಜ್ ಅಲ್ಲಿ ಸ್ಟಾರ್ಟಿಂಗ್ ಅಲ್ಲಿ ನೀವು ಒಂದು ಎರಡು ಮೂರು ಐದು ಬಾಕ್ಸ್ ಇಂದ ಶುರು ಮಾಡಿ ಆಮೇಲೆ ಆಮೇಲೆ ಅದ್ರಿಂದ ಎಕ್ಸ್ಪೀರಿಯನ್ಸ್ ತಗೊಂಡು ದೊಡ್ಡದಾಗಿ ಮಾಡ್ಕೊಳ್ಳೋದ್ರಿಂದ ಲಕ್ಷ್ ಟುಗೆದರ್ ಅರ್ನ್ ನ ಮಾಡಬಹುದು. ಅಷ್ಟು ಬೆನಿಫಿಟ್ ಇದೆ. ಕೊನೆಯದಾಗಿ ಒಂದೇ ಒಂದು ಪಾಯಿಂಟ್ ಹೇಳೋದೇನು ಅಂತ ಅಂದ್ರೆ ಮುಂಚೆ ನಾನು ಜೇನು ಹುಳಗಳನ್ನ ಸಾಕುತ್ತಾ ಇದ್ದೆ. ಈಗ ಜೇನು ಹುಳುಗಳೇ ನನ್ನನ್ನು ಸಾಕುತ್ತಿದ್ದಾವೆ. ಸೋ ನನ್ನ ಒಂದು ಸಂಸಾರಕ್ಕೆ ಅವುಗಳೇ ನೋಡ್ಕೊಳ್ತಾ ಇದ್ದಾವೆ. ನನ್ನ ಸಂಸಾರನ ಅವು ನೋಡ್ಕೊಳ್ತಾ ಇದ್ದಾವೆ.



