[0:00]ಕಪಿ ಸೈನ್ಯ ಲಂಕೆಗೆ ಹೋಗಬೇಕಿತ್ತು. ಆದರೆ ಮಧ್ಯದಲ್ಲಿ ವಿಶಾಲವಾದ ಸಮುದ್ರ. ಈ ಸಮುದ್ರವನ್ನು ಈಜುತ್ತಾ ದಾಟುವುದಾಗಲಿ ಹಾರಿ ದಾಟುವುದಾಗಲಿ ಹನುಮಂತನಿಗೆ ಹೊರತು ಇನ್ಯಾರಿಗೂ ಆಗದ ಮಾತಾಗಿತ್ತು. ಹನುಮ ಒಂದಷ್ಟು ಸೈನ್ಯವನ್ನು ಭುಜದ ಮೇಲೆ ಕೂಡಿಸಿಕೊಂಡು ಸಮುದ್ರ ದಾಟಬಹುದು. ಆದರೆ ಇಡೀ ಕಪಿ ಸೈನ್ಯವನ್ನು ಆ ಕಡೆ ದಡಕ್ಕೆ ಸಾಗಿಸುವುದು ತಾನೇ ಹೇಗೆ? ಅದಕ್ಕೆ ಎಷ್ಟೊಂದು ಸಮಯ ಬೇಕು ಎಂದೆಲ್ಲಾ ಕಪಿ ಸೈನ್ಯ ಸಮುದ್ರ ದಡದಲ್ಲಿ ರಾಮ ಲಕ್ಷ್ಮಣ ರೊಡನೆ ಯೋಚಿಸುತ್ತಾ ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ಹನುಮಂತ ಸಮುದ್ರಕ್ಕೊಂದು ಸೇತುವೆ ಕಟ್ಟಿದರೆ ಎಂದ. ಆಗ ಶ್ರೀರಾಮ ತುಂಬಾ ಯೋಚಿಸಿ ಆಗಲಿ ಎಂದನು. ಶ್ರೀರಾಮನ ಅನುಮತಿ ದೊರೆತ ಕೂಡಲೇ ಕಪಿ ಸೈನ್ಯ ದೊಡ್ಡ ದೊಡ್ಡ ಬಂಡೆ ಕಲ್ಲುಗಳನ್ನು ಹೊತ್ತು ತಂದು ಜೈ ಶ್ರೀರಾಮ್ ಎನ್ನುತ್ತಾ ಸಮುದ್ರದಲ್ಲಿ ಹಾಕಲಾರಂಭಿಸಿತು. ರಾಮನ ಶಕ್ತಿಯೋ ಇಲ್ಲ ಕಪಿಗಳ ಭಕ್ತಿಯೋ ಹಾಕಿದ ಕಲ್ಲುಗಳು ಆ ಕಡೆ ಈ ಕಡೆ ಚಲಿಸದೆ ಸೇತುವೆ ನಿರ್ಮಾಣವಾಗುತ್ತಾ ಬಂದಿತು. ಸಮುದ್ರ ತೀರದಲ್ಲಿ ಒಂದು ಅಳಿಲು ಇತ್ತು.
[1:40]ಆ ಅಳಿಲು ಕಪಿಗಳೆಲ್ಲ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತು ಸಮುದ್ರಕ್ಕೆ ಎಸೆಯುತ್ತಿದ್ದನ್ನು ನೋಡಿ ತಾನು ಕೂಡ ಚಿಕ್ಕ ಚಿಕ್ಕ ಕಲ್ಲುಗಳನ್ನು ತಂದು ತಂದು ಸಮುದ್ರಕ್ಕೆ ಎಸೆಯಲು ಪ್ರಾರಂಭಿಸಿತು. ಆ ಪುಟ್ಟ ಪ್ರಾಣಿಯ ಕಾರ್ಯಶ್ರದ್ಧೆಯನ್ನು ಶ್ರೀರಾಮ ಕಂಡನು. ಅಳಿಲನ್ನು ಪ್ರೀತಿಯಿಂದ ಎತ್ತಿಕೊಂಡನು. ತನ್ನ ಕೈಯಿಂದ ಅದರ ಬೆನ್ನನ್ನು ನೇವರಿಸಿದನು. ಒಗ್ಗಟ್ಟಿನಲ್ಲಿ ಬಲವಿದೆ ಎಂದನು. ಸೇತುವೆ ನಿರ್ಮಾಣವಾಯಿತು. ಕಪಿ ಸೈನ್ಯ ಕೇಕೆ ಹಾಕುತ್ತಾ ಸಮುದ್ರವನ್ನು ದಾಟಿತು. ಲಂಕಾ ನಗರವನ್ನು ಸೇರಿ ಯುದ್ಧೋತ್ಸಾಹದಿಂದ ಕುಣಿದಾಡುತ್ತಿತ್ತು. ಸಾರಾಂಶ ಒಮ್ಮದಾಗಿ ಬಾಳೋಣ ಗುರಿಯನ್ನು ಸೇರೋಣ



