Thumbnail for ಜೇನುಕೃಷಿ ಆರಂಭಿಸಲು ಅವಶ್ಯವಿರುವ ಮುಖ್ಯ ವಸ್ತುಗಳು ಯಾವು..? | Main things needed to start beekeeping | by Namma Kannada

ಜೇನುಕೃಷಿ ಆರಂಭಿಸಲು ಅವಶ್ಯವಿರುವ ಮುಖ್ಯ ವಸ್ತುಗಳು ಯಾವು..? | Main things needed to start beekeeping |

Namma Kannada

7m 52s1,095 words~6 min read
Auto-Generated

[0:16]ಒಬ್ಬ ರೈತ ಜೇನು ಕೃಷಿಗೆ ಬಂದ್ರೆ ಏನೇನು ಇಂಪಾರ್ಟೆಂಟ್ ಆಗಿ ಬೇಕಾಗುತ್ತೆ ಅನ್ನೋದರ ಬಗ್ಗೆ ಹೇಳ್ತಾ ಹೋಗ್ತೀನಿ. ಫಸ್ಟ್ ಲ್ಯಾಂಡ್ ಅನ್ನೋದು ಏನಾದ್ರೂ ಇತ್ತಂತಂದ್ರೆ ಬೇಕಾದ್ರೆ ಒಂದು ಗುಂಟೆ ಇದ್ರೂನು ಓಕೆ. ಲ್ಯಾಂಡ್ ಇಲ್ಲ ಅಂದ್ರೂನೂ ಓಕೆ ಯಾಕೆ ಅಂತ ಹೇಳಿದ್ರೆ ಎಕ್ಸಾಂಪಲ್ ನಂದೇ ಎಕ್ಸಾಂಪಲ್ ತಗೊಳ್ತೀನಿ. ನನ್ನ ಸ್ನೇಹಿತರುಗಳು ನಮ್ಮ ಊರೂರು ಪಕ್ಕದಲ್ಲಿ ಎಲ್ಲಾ ಊರುಗಳಲ್ಲೂನು ಕೂಡ ಎಲ್ಲೆಲ್ಲಿ ಊರುಗಳ ಇದೆಯೋ ಗೊತ್ತಿರೋರು ಇದ್ದಾರೋ ಅವರವರ ಮನೆಗಳ ಹತ್ರನೇ ಕೂಡ ನಾವು ಒಂದೊಂದು ಐದೈದು ಬಾಕ್ಸ್ಗಳನ್ನ ಇಟ್ಕೊಂಡಿದ್ದೀವಿ. ಸೋ ಆ ರೀತಿನಲ್ಲಿ ಎಷ್ಟೊಂದು ಕಡೆ ನಾವು ಇಟ್ಕೊಳ್ಳೋದ್ರಿಂದ ಜಾಗ ನಮ್ಮದೇ ಬೇಕು ಅಂತ ಏನಿಲ್ಲ. ಸೋ ಎಲ್ಲಿ ಬೇಕಾದ್ರೂ ಇಡಬಹುದು. ಆ ತರ ಅವಾಗ ಏನಾಗುತ್ತೆ ಅವರಿಗೆ ಒಂದು ಪಾಲಿನೇಷನ್ಸ್ ಗೆ ಹೆಲ್ಪ್ ಆಗುತ್ತೆ. ನಮಗೆ ಅವರಿಗೆ ಸ್ವಲ್ಪ ತುಪ್ಪ ಕೊಡ್ತೀವಿ ನಾವು ಕೂಡ ತುಪ್ಪನ ತಗೊಳ್ತೀವಿ. ಸೋ ಈ ರೀತಿ ಮೊದಲನೇ ವಿಷಯ ಜಾಗ. ಎರಡನೆಯದು ನಾವು ಇದಕ್ಕೆ ಏನು ಬಾರ್ಡರ್ ತರ ಏನು ಮಾಡಂಗಿಲ್ಲ ಡ್ಯೂರಿ ಸೆಕ್ಷನ್ ಅಂತ ಏನು ಹೇಳ್ತೀವಿ ಆ ತರ ಏನು ನಾವು ಫಿಕ್ಸ್ ಮಾಡಕ್ಕೆ ಆಗಲ್ಲ ಹುಳಗಳಿಗೆ. ಹಾಗಾಗಿ ಏನಾಗುತ್ತದೆ ನಾವು ಎಲ್ಲಿ ಹುಳಗಳನ್ನು ಇಟ್ಟಿರ್ತೀವಿ ಅಲ್ಲಿಂದ ತುಡುವೆ ಜೇನು ಆಯ್ತು ಅಂತಂದ್ರೆ ಮ್ಯಾಕ್ಸಿಮಮ್ ಎರಡರಿಂದ ಎರಡೂವರೆ ಕಿಲೋಮೀಟರ್ ವರೆಗೂ ಹೋಗಿ ಬರುತ್ತೆ. ಹಾಗಾಗಿ ರಿಸ್ಟ್ರಿಕ್ಷನ್ಸ್ ಇಲ್ಲ ಅದಕ್ಕೆ ಎಲ್ಲಾ ಕಡೆನೂ ಹೋಗಿ ಬರುತ್ತದೆ. ಯಾಕೆ ಈ ವಿಷಯ ಹೇಳಿದೆ ಅಂತ ಹೇಳಿದ್ರೆ ನಾವೇ ನಾವೇ ಏನಾದ್ರೂ ಒಂದಷ್ಟು ಬೆಳೆಗಳನ್ನು ಹಾಕೊಂಡು ಬಿಡೋಣ. ನಾವೇ ಒಂದಷ್ಟು ಕೈ ತೋಟ ಮಾಡಿಕೊಂಡು ಬಿಡೋಣ. ಒಂದಷ್ಟು ಹೂಗಳನ್ನು ಹಾಕೊಂಡು ಬಿಟ್ಟರೆ ನಮಗೆ ತುಪ್ಪ ಸಿಗುತ್ತೆ ಅಂತ ಅಂದುಕೊಳ್ಳುತ್ತೇವೆ. ಸೋ ನಾವುಗಳು ಅಷ್ಟು ಎಷ್ಟು ಬೇಕೋ ಅಷ್ಟು ಹೂಗಳನ್ನು ಹಾಕೋದು ಕಷ್ಟ ಬಟ್ ಅದನ್ನೇ ಮಾಡ್ತಿದ್ರೆ ಆಗುತ್ತೆ ಇಲ್ಲ ಅಂತ ಅಲ್ಲ ಎಕ್ಕರೆಗಟ್ಟಲೆ ಹಾಕಬಹುದು. ಅದಕ್ಕೆ ನಾವು ಏನು ಮಾಡ್ತೀವಿ ಎಲ್ಲೆಲ್ಲಿ ಹೂಗಳು ಇರುತ್ತೆ ಏನೇನು ಸಿಗುತ್ತೆ ಇದರಲ್ಲಿ ನಾವು ತಿಳ್ಕೊಬೇಕಾಗಿರೋದು ಏನಂದ್ರೆ ಪರಾಗ ಯಾವುದರಲ್ಲಿ ಸಿಗುತ್ತೆ ಮಕರಂದ ಎಲ್ಲಿ ಸಿಗುತ್ತೆ ಅನ್ನೋದು ಎರಡನ್ನು ತಿಳ್ಕೊಬೇಕಾಗುತ್ತೆ. ಪೋಲನ್ ಯಾವುದು ನೆಕ್ಟರ್ ಯಾವುದು ಅಂತ ಈ ಎರಡನ್ನು ಯಾವ ಯಾವುದರಲ್ಲಿ ಸಿಗುತ್ತೆ ಅಂತ ನಮಗೆ ಗೊತ್ತಾದರೆ ನಮಗೆ ಯಾವಾಗ ಯಾವುದು ಶಾರ್ಟ್ ಫಾಲ್ ಇರುತ್ತೆ ಅದನ್ನ ನೋಡಿಕೊಂಡು ಆ ಒಂದು ಪ್ಲೇಸ್ ಗೆ ಶಿಫ್ಟ್ ನ ಮಾಡಬಹುದು. ಸೋ ಮೈಗ್ರೇಷನ್ ಅಂತ ಹೇಳ್ತೀವಿ ಸ್ಥಲಾಂತರ ಜೇನು ಕೃಷಿ ಅಂತ ಹೇಳ್ತೀವಿ ಆ ಜಾಗಕ್ಕೆ ಅವುಗಳನ್ನು ಇಟ್ಟಾಗ ಅಲ್ಲಿ ಅವು ಡೆವಲಪ್ ಆಗೋದಕ್ಕೆ ಹೆಲ್ಪ್ ಆಗುತ್ತೆ. ಈ ರೀತಿಯಾಗಿ ನಾವು ಬೇರೆ ಬೇರೆ ಬೇರೆ ಬೇರೆ ಕಡೆ ಪ್ಲೇಸ್ ಅಲ್ಲಿ ಕೂಡ ಇಟ್ಕೋಬಹುದು. ಇನ್ನು ಇದಕ್ಕೆ ಸಾಕಾಣಿಕೆ ಮಾಡೋದಕ್ಕೆ ಬೇಕಾಗಿರುವಂತದ್ದು ಏನು ಅಂತಂದ್ರೆ ಇವಾಗ ನೀವು ಪ್ಲೇಸ್ ಗಳನ್ನ ನೋಡೋರು ತಿಳ್ಕೊಂಡ್ರಿ ಅದ್ಬಿಟ್ಟರೆ ಫ್ಲವರ್ಸ್ ಇಂಪಾರ್ಟೆಂಟ್. ಈ ಫ್ಲವರ್ಸ್ ಮತ್ತೆ ಪ್ಲೇಸ್ ಅಲ್ದೇನೆ ಇದರಲ್ಲಿ ವೆದರ್ ಇಂಪಾರ್ಟೆಂಟ್ ಆಗುತ್ತೆ. ಸೋ ಟೆಂಪರೇಚರ್ ಅನ್ನೋದು ಏನಾಗುತ್ತೆ ಬಾಕ್ಸ್ ಒಳಗಡೆ ತುಂಬಾ ಇಂಪಾರ್ಟೆಂಟ್ ಆಗುತ್ತೆ. ಸೊ ಅದನ್ನ ಮಾಡೋದು ಪ್ರಾಕ್ಟೀಸ್ ಇಂದ ಬರುತ್ತೆ ಬಟ್ ಎಕ್ಸ್ಪೀರಿಯನ್ಸ್ ಇಂದ ಬರುತ್ತೆ. ಹೇಗೆ ನೋಡ್ಕೋಬೇಕು ಏನು ಅಂತ. ಸೋ ನಾನು ಮಾಡ್ತಾ ಇರೋದ್ರಲ್ಲಿ ನಿಮಗೆ ಹೇಳ್ಕೊಡ್ತೀನಿ. ಸ್ಟಾರ್ಟಿಂಗ್ ನಾವು ಡಿವಿಷನ್ ಮಾಡಿದಾಗ ಫೋರ್ ಫ್ರೇಮ್ ಬಾಕ್ಸ್ ಅಲ್ಲಿ ಇಟ್ಟಿರ್ತೀವಿ. ಅವಾಗ ಬೆಚ್ಚಗೆ ಇರುತ್ತೆ. ಫೋರ್ ಫ್ರೇಮ್ ಅಲ್ಲಿ ಹೆಚ್ಚಾಗಿ ಹೆಚ್ಚಿದಾಗ ಹುಳುಗಳನ್ನ ಅದನ್ನ ಸಿಕ್ಸ್ ಫ್ರೇಮ್ ಶಿಫ್ಟ್ ಮಾಡ್ತೀವಿ. ಅಲ್ಲಿ ಹೆಚ್ಚುತ್ತಾ ಹೋದಾಗ ಏಟ್ ಫ್ರೇಮ್ ಶಿಫ್ಟ್ ಮಾಡ್ತೀವಿ. ಹಾಗೆ ಎಲ್ಲಿ ಯಾವ ಹಂತದಲ್ಲಿ ನಮಗೆ ತುಪ್ಪಕ್ಕೆ ಬರುತ್ತೆ ಆ ತುಪ್ಪದ ಹಂತದಲ್ಲಿ ತುಪ್ಪವನ್ನು ತಗೊಳ್ತೀವಿ. ಡಿವಿಷನ್ ಅಂತ ಬರುತ್ತೆ ಡಿವಿಷನ್ ಟೈಮ್ ಅಲ್ಲಿ ಡಿವಿಷನ್ ಕೂಡ ಮಾಡಿಕೊಳ್ಳುತ್ತೇವೆ. ಇಷ್ಟಲ್ಲದೆ ಇದಕ್ಕೆ ಬಾಕ್ಸ್ಗಳು ಕೂಡ ಇಂಪಾರ್ಟೆಂಟ್ ಆಗುತ್ತೆ. ಜೇನು ಕೃಷಿಯಲ್ಲಿ ಏನು ಬೇಕಾಗುತ್ತೆ ಬಾಕ್ಸ್ ಬೇಕಾಗುತ್ತೆ. ಇದು ಬಿಟ್ಟರೆ ಹ್ಯಾಂಡಲ್ ಮಾಡೋದಕ್ಕೆ ಸ್ಟಾರ್ಟಿಂಗ್ ನಮಗೆ ಬೇಕಾಗಿರುವಂತದ್ದು ಬೀ ವೇಲ್ ಅಂತ ಇದೆ. ಸೋ ಬೀ ವೇಲ್ ಅಂದ್ರೆ ಮುಖ ಪರದೆ, ಮುಖಕ್ಕೆ ಹಾಕಿಕೊಳ್ಳುವಂತದ್ದು ಇರುತ್ತೆ ಫೇಸ್ ಕವರ್ ಆಗುತ್ತೆ. ಯಾಕೆ ಯಾಕೆ ಫೇಸ್ ಮಾತ್ರ ಕವರು ಬಾಡಿಗೆಲ್ಲ ಹಾಕೋಕಾಗಲ್ವಾ ಅಂತ. ಸ್ಟಾರ್ಟಿಂಗ್ ಬೇಕಾದ್ರೆ ನೀವು ಬಾಡಿಗೆ ಪೂರ್ತಿ ಸೂಟ್ ಬರುತ್ತೆ ಬೀ ಸೂಟ್ ಅಂತ ಅದನ್ನು ಕೂಡ ಹಾಕೋಬಹುದು. ನಾನು ಆಮೇಲೆ ಆಮೇಲೆ ಆಮೇಲೆ ಏನು ಹೇಳಿದೆ ನಾನು ಆಗಲೇ ಹೇಳಿದಂಗೆ ಬಿ ವೆನಮ್ ಅಂತ ಜೇನು ವಿಷ ನಮಗೆ ಚುಚ್ಚೋದ್ರಿಂದ ಒಳ್ಳೆಯದು ಅಂದ್ರೆ ಹಾಗಾಗಿ ಬಾಡಿಗೆ ನಮಗೆ ಹೊಡೆದರೆ ತುಂಬಾ ಒಳ್ಳೇದು ಆದ್ರೆ ತಲೆಗೆ ಹೊಡಿಬಾರ್ದು. ಯಾಕೆಂದರೆ ತಲೆ ತುಂಬಾ ಸೆನ್ಸಿಟಿವ್ ಆಗಿರೋದ್ರಿಂದ ತಲೆಗೆ ಹೊಡಿಬಾರದು ಅದಕ್ಕೋಸ್ಕರ ಬಿ ಸೂಟ್ ನ ಹಾಕೊಳ್ತೀವಿ. ಅದಕ್ಕೆ ಬೀ ಸೂಟ್ ಕೂಡ ಬೇಕಾಗುತ್ತೆ. ಒಂದು ಇಟ್ಕೊಳ್ಳೋದು ತುಂಬಾ ಒಳ್ಳೆಯದು. ಅದರ ಜೊತೆಗೆ ಸ್ಮೋಕರ್ ಅಂತ ಬರುತ್ತೆ ಒಗೆ ತಿದಿ ಅಂತ ಹೇಳ್ತೀವಿ ಆ ಒಗೆ ತಿದಿ ಏನುಕ್ಕೆ ಅಂದ್ರೆ ಇವು ರಾಶ್ ಇರುವಂತ ಟೈಮಲ್ಲಿ ಅವುಗಳಿಗೆ ಸ್ವಲ್ಪ ಸ್ಮೋಕ್ ಕೊಟ್ಟು ಅವುನ ಸ್ವಲ್ಪ ಡಲ್ ಮಾಡೋದಕ್ಕೋಸ್ಕರ ಒಗೆ ತಿದಿ ಬೇಕಾಗುತ್ತೆ. ಆ ಒಗೆ ತಿದಿಗೆ ಏನೇನು ಹಾಕಿಕೊಳ್ಳುವುದಿಲ್ಲ ಸಿಂಪಲ್ ಆಗಿ ನಾವು ಹಾಕಿಕೊಳ್ಳೋದು ತೆಂಗಿನದು ಜುಂಗು ನಾರು ಅಂತ ಏನು ಬರುತ್ತೆ ಅದನ್ನ ಹಾಕಿಕೊಳ್ಳುತ್ತೇವೆ ಅಷ್ಟೇ. ಅದಕ್ಕೆ ಏನು ಬೇರೆ ಏನು ಎಲೆಗಳು ಔಷಧಿ ಅದು ಇದು ಬೇರೆ ಏನು ಹಾಕಲ್ಲ. ನ್ಯಾಚುರಲ್ ಆಗಿ ಏನು ಇರುತ್ತೋ ಅದನ್ನ ಕೊಡ್ತೀವಿ. ಒಗೆ ಅಂದ್ರೆ ಅದಕ್ಕೆ ಆಗಲ್ಲ. ಹಾಗಾಗಿ ಸ್ವಲ್ಪ ಸ್ಮೋಕ್ ಕೊಟ್ಟಾಗ ಕಂಟ್ರೋಲ್ ಗೆ ಬರುತ್ತದೆ. ಹಾಗಾಗಿ ಸ್ಮೋಕರ್ ಇದರ ಜೊತೆಯಲ್ಲಿ ಎಕ್ವಿಪ್ಮೆಂಟ್ಸ್ ಗಳು ಅಂತ ಹೇಳಿದ್ರೆ ಬೇರೆ ಏನೇನೆಲ್ಲಾ ಬೇಕಾಗಬಹುದು ಅಂತ ಅಂದ್ರೆ ರಾಣಿ ಗೇಟ್ ಅಂತ ಹೇಳ್ತೀವಿ ರಾಣಿ ತಡೆ ಗೇಟ್ ಅಂತ ಬರುತ್ತೆ. ಅದನ್ನ ನಾವು ಹೊರಗಡೆಯಿಂದ ಹೈವ್ ಮಾಡಿದಾಗ ಅದನ್ನ ಅಡ್ಡ ಇಡೋದಕ್ಕೋಸ್ಕರ ರಾಣಿ ತಡೆ ಗೇಟ್ ನ ನಾವು ಬಳಸ್ತೀವಿ. ಇದು ಬಿಟ್ಟರೆ ಹೈವಿಂಗ್ ಮಾಡಬೇಕಾದ್ರೆ ಹೈವಿಂಗ್ ಅಂತ ಅಂದ್ರೆ ಹೊರಗಡೆ ಇರುವಂತ ಸಂಸಾರನ ನಮ್ಮ ಒಂದು ಬಾಕ್ಸ್ ಗೆ ಶಿಫ್ಟ್ ಮಾಡೋದು ಅಂತ ಹೇಳ್ತೀವಿ. ಅವಾಗ ನಮಗೆ ಒಂದು ರಾಣಿ ಪಂಜರ ಅಂತ ಬೇಕಾಗುತ್ತೆ. ಆ ರಾಣಿ ಪಂಜರ ಇನ್ ಕೇಸ್ ರಾಣಿ ಸಿಕ್ಕಿದ್ರೆ ಅದನ್ನ ಹಿಡಿದು ಆ ಪಂಜರದ ಒಳಗಡೆ ಹಾಕಿ ಇಟ್ಟುಕೊಂಡ್ರೆ ಬೇರೆ ಹುಳಗಳನ್ನ ನಾವು ಹಿಡಿಯುವಂತ ಅವಶ್ಯಕತೆ ಇರೋದಿಲ್ಲ. ಹಾಗಾಗಿ ರಾಣಿ ಪಂಜರ ನಮಗೆ ಬೇಕಾಗುತ್ತೆ. ಇದರ ಜೊತೆಗೆ ಜೇನಿನ ಮೇಣದ ಹಾಳೆಗಳು ಅಂತ ಬರುತ್ತದೆ. ಅದು ಸಂಸಾರ ಕೋಣೆಗೂ ಕೊಡ್ತೀವಿ ಮತ್ತೆ ಮೇಲ್ಗಡೆ ಜೇನು ಕೋಣೆ ಅಂತ ಬರುತ್ತೆ ಅದಕ್ಕೂ ಕೂಡ ಕೊಡ್ತೀವಿ. ಅದನ್ನ ಕೊಡೋದ್ರಿಂದ ನಮಗೆ ಕಮರ್ಷಿಯಲ್ ಆಗಿ ನಾವು ಥಿಂಕ್ ಮಾಡೋದ್ರಿಂದ ಫಾಸ್ಟ್ ಆಗಿ ನಮಗೆ ಈ ಒಂದು ಜೇನು ತುಪ್ಪ ಬರೋದಕ್ಕೆ ಆಗ್ಲಿ ಈ ಫ್ಯಾಮಿಲಿ ಗ್ರೋಥ್ ಆಗೋದಕ್ಕೆ ಆಗ್ಲಿ ಅದು ಎರಡಕ್ಕೂನು ಕೂಡ ಮೇಣದ ಹಾಳೆ ಮುಖ್ಯ ಆಗುತ್ತೆ. ಈ ರೀತಿನಲ್ಲಿ ಒಂದೊಂದು ಒಂದೊಂದು ಒಂದೊಂದು ಎಕ್ವಿಪ್ಮೆಂಟ್ಸ್ ಗಳು ಕೂಡ ಬೇಕಾಗುತ್ತೆ. ಇದೆಲ್ಲಾ ಆದ್ಮೇಲೆ ಹನಿನ ನಾವು ಹಾರ್ವೆಸ್ಟ್ ಮಾಡಬೇಕು ಅಂತ ಹೇಳಿದ್ರೆ ಹನಿದು ಎಕ್ಸ್ಟ್ರಾಕ್ಟರ್ ಅಂತ ಬರುತ್ತೆ. ಸೋ ಅದು ಟೂ ಫ್ರೇಮ್ಸ್ ಇದೆ ಫೋರ್ ಫ್ರೇಮ್ಸ್ ದು ಇದೆ. ಸೋ ಅದು ಒಂದು ಸ್ಟಾರ್ಟಿಂಗ್ ಅಲ್ಲಿ ಒಂದು ಎರಡು ಮೂರು ಬಾಕ್ಸ್ ಇಟ್ಕೊಂಡ್ರೆ ಬೇಕಾಗಲ್ಲ. ಎತ್ತೇಚ್ಚವಾಗಿ ನೆಕ್ಸ್ಟ್ ಜಾಸ್ತಿ 15 20 ಬಾಕ್ಸ್ಗಳನ್ನ ಇಟ್ಟುಕೊಂಡ್ರೆ ನಿಮಗೆ ಒಂದು ಎಕ್ಸ್ಟ್ರಾಕ್ಟರ್ ಬೇಕಾಗುತ್ತೆ. ಸೋ ನನ್ನ ಹತ್ರ ಕೂಡ ಒಂದು ಎಕ್ಸ್ಟ್ರಾಕ್ಟರ್ ಇಟ್ಕೊಂಡಿದ್ದೀನಿ. ಅದು ಕೂಡ ಇನ್ವೆಸ್ಟ್ಮೆಂಟ್ ಮಾಡ್ಕೋಬಹುದು ಬಟ್ ಎಲ್ಲಾ ಜೇನು ಕೃಷಿ ಮಾಡಿ ಕೊನೆಗೆ ನೀವು ಹನಿ ತೆಗಿತೀನಿ ಅನ್ನೋ ಟೈಮ್ ಅಲ್ಲಿ ಅದಕ್ಕೆ ಇನ್ವೆಸ್ಟ್ಮೆಂಟ್ ಮಾಡಿ. ಫಸ್ಟ್ ಫಸ್ಟ್ ಇನ್ವೆಸ್ಟ್ಮೆಂಟ್ ಮಾಡೋಕೆ ಹೋಗಬೇಡಿ. ನನ್ನ ಕಡೆಯಿಂದ ನಾನೇನು ಮಾಡ್ತಾ ಇದ್ದೀನಿ ಬಾಕ್ಸ್ಗಳು ಯಾರ್ಯಾರು ಕೊಟ್ಟಿದ್ದೀನಿ ಯಾರ್ಯಾರು ಹನಿ ತೆಗಿತೀನಿ ಅಂತ ಹೇಳ್ತಾರೆ ಅದನ್ನ ತಗೊಂಡು ಹೋಗ್ತಾರೆ. ತಗೊಂಡು ಹೋಗಿ ಅವರು ಹನಿ ಹಾರ್ವೆಸ್ಟ್ ಮಾಡ್ಕೊಂಡು ವಾಪಸ್ ತಂದು ಕೊಡ್ತಾರೆ. ಸೋ ಅದು ಫ್ರೀ ಆಫ್ ಕಾಸ್ಟ್ ಅಲ್ಲಿ ಕೊಡ್ತಾ ಇದೀನಿ ಅದಕ್ಕೆ ಏನು ಚಾರ್ಜಸ್ ಏನು ಮಾಡ್ತಾ ಇಲ್ಲ. ಸೋ ಈ ರೀತಿನಲ್ಲಿ ಎಲ್ಲಾ ಎಕ್ವಿಪ್ಮೆಂಟ್ಸ್ ಗಳನ್ನು ಕೂಡ ಬಳಸಬೇಕಾಗುತ್ತೆ. ಇದರ ಜೊತೆಯಲ್ಲಿ ಇನ್ನೂ ಒಂದು ಮುಖ್ಯವಾಗಿ ಇರೋದು ಏನು ಅಂತ ಅಂದ್ರೆ ಸ್ಟ್ಯಾಂಡ್ ಅಂತ ಹೇಳ್ತೀವಿ. ಜೇನ್ನ ಇಡಬೇಕಾದ್ರೆ ಒಂದು ಸ್ಟ್ಯಾಂಡ್ ಮುಖ್ಯವಾಗಿರುತ್ತೆ. ಯಾಕೆ ಸ್ಟ್ಯಾಂಡ್ ಮುಖ್ಯ ಹಂಗೆ ಇಡಬಹುದಲ್ಲ ಅಂದ್ರೆ ಜೇನು ಯಾವಾಗಲೂ ಸಿಹಿ ಇರೋದ್ರಿಂದ ಅದಕ್ಕೆ ಅಟ್ರಾಕ್ಟ್ ಆಗುವಂತದ್ದು ಎಲ್ಲರೂ ಅಟ್ರಾಕ್ಟ್ ಆಗ್ತಾ ಇರ್ತಾರೆ.

[6:08]ಅದರಲ್ಲಿ ಏನಂದ್ರೆ ಇರುವೆಗಳು ಕೆಂಜಿಗಳು ಈ ರೀತಿಯಾಗಿ ಅದರಿಂದ ಪ್ರೊಟೆಕ್ಟ್ ಮಾಡೋದಕ್ಕೋಸ್ಕರ ಸ್ಟ್ಯಾಂಡ್ ಅನ್ನೋದು ತುಂಬಾ ಮುಖ್ಯ ಆಗುತ್ತೆ. ಈ ರೀತಿ ಪ್ರತಿಯೊಂದನ್ನು ಕೂಡ ಎಕ್ವಿಪ್ಮೆಂಟ್ಸ್ ಗಳು ಮುಖ್ಯ ಆಗುತ್ತೆ. ಇದರಲ್ಲಿ ಇನ್ನೊಂದು ಹೈವಿಂಗ್ ದು ಇದು ಬರುತ್ತೆ ಏನು ಟೂಲ್ ಅಂತ ಹೇಳ್ಬಿಟ್ಟು ನಾವು ಒಂದು ಚಾಕು ತರ ಇಟ್ಕೊಂಡಿರ್ತೀವಿ. ಅದಕ್ಕೆ ಅಂತಾನೆ ಬೇರೆ ತರ ಕರಣಿ ಅಂತ ನೋಡಿರ್ತೀರಾ ನೀವು ಈ ರೀತಿ ಇರುತ್ತೆ ಆ ತರದ್ದು ಒಂದು ಟೂಲ್ಸ್ ಇಟ್ಕೊಂಡಿರ್ತೀವಿ. ಅದಿರುತ್ತೆ ಇದೆಲ್ಲಾ ಒಂದು ಪ್ರತಿಯೊಂದಕ್ಕೂನು ಕೂಡ ಬೇಕಾಗಿರುವಂತದ್ದು ಅದನ್ನ ಕಟ್ ಮಾಡೋದಕ್ಕೆ ಆಗಿರಬಹುದು. ಹೊರಗಡೆಯಿಂದ ಹಿಡ್ಕೊಂಡು ಬರಬೇಕಾದರೆ ಬಾಳೆ ನಾರನ್ನ ಇದು ಮಾಡ್ತೀವಿ. ಅದೆಲ್ಲ ನಿಮಗೆ ಪೂರ್ತಿ ತುಡುವೆ ಜೇನು ಅಂತ ಹಿಡಿಬೇಕು ಅಂದಾಗಲೇ ಅದಕ್ಕೆ ಏನು ಏನು ಬೇಕು ಟೂಲ್ಸ್ ಅನ್ನೋದರ ಬಗ್ಗೆ ನಾನು ನಿಮಗೆ ಇನ್ಫರ್ಮೇಷನ್ ಕೊಡ್ತೀನಿ. ಬಟ್ ಇವಾಗ ಜೇನು ಕೃಷಿ ಅಂತ ಬಂದಾಗ ಇಷ್ಟೆಲ್ಲಾವುದನ್ನು ಮುಖ್ಯ ಆಗುತ್ತದೆ ಇದನ್ನ ನೀವು ಪ್ರತಿಯೊಬ್ಬರುನು ಗಮನದಲ್ಲಿ ಇಟ್ಕೋಬೇಕಾಗುತ್ತೆ. ಅಂದ್ರೆ ಹೂಗಳು ಇರಬಹುದು ಬಾಕ್ಸ್, ಸ್ಟ್ಯಾಂಡ್, ಸ್ಮೋಕರ್, ಬೀ ವೇಲ್, ಬೀ ಸೂಟ್ ಈ ತರದೆಲ್ಲಾ ಇಂಪಾರ್ಟೆಂಟ್ ಆಗುತ್ತೆ. ಇಷ್ಟು ಇನ್ಫರ್ಮೇಷನ್ ಹೇಳೋದಕ್ಕೆ ಇಷ್ಟ ಪಡ್ತೀನಿ. ಇದು ಟೋಟಲಿ ಎಕ್ವಿಪ್ಮೆಂಟ್ಸ್ ಗಳು ಇನ್ನು ಮುಂದಕ್ಕೆ ಇನ್ನೇನಾದ್ರೂ ಬೇಕು ಅನ್ನೋದಾದ್ರೆ ಅದನ್ನ ಬಳಸಿಕೋಬಹುದು. ಅದರಲ್ಲಿ ಪರಾಗ ತೆಗೆಯೋದು ಅಂತ ಒಂದು ಮಷೀನ್ ಬರುತ್ತೆ. ಅದು ನೆಕ್ಸ್ಟ್ ನೆಕ್ಸ್ಟ್ ನಾವು ಅಪ್ಗ್ರೇಡ್ ಆಗ್ತಾ ಅಪ್ಗ್ರೇಡ್ ಆಗ್ತಾ ಪರಾಗ ಹೇಗೆ ತೆಗೆಯೋದು ಅನ್ನೋದು ಒಂದು ಮಷೀನ್ ಬರುತ್ತೆ. ಬಿ ವೆನಮ್ ತೆಗೆಯೋದಕ್ಕೆ ಅಂದ್ರೆ ಜೇನಿನ ವಿಷ ತೆಗೆಯೋದಕ್ಕೆ ಅಂತಾನೆ ಒಂದು ಎಕ್ವಿಪ್ಮೆಂಟ್ ಇದೆ. ಅದು ಕೂಡ ಡಿಫ್ರೆಂಟ್. ಈ ರೀತಿ ಟೋಟಲ್ ಆಗಿ ಎಕ್ವಿಪ್ಮೆಂಟ್ಸ್ ಅಂತ ಬಂದ್ರೆ ಸುಮಾರಿದೆ. ಸೋ ಬೀ ಹೈವಿಂಗ್ ಅಂತಾನೆ ಹೇಳ್ತೀವಿ ಬಾಕ್ಸ್ ಬೇರೆ ಬೇರೆ ತರ ಬರುತ್ತೆ. ಸೋ ಫ್ಲೋಯಿಂಗ್ ಹೈವೇ ಅಂತ ಬರುತ್ತೆ ಅಂದ್ರೆ ನಾವು ಜಸ್ಟ್ ಓಪನ್ ಮಾಡಿದ ತಕ್ಷಣನೇ ಅದು ಜೇನು ತುಪ್ಪ ಬಾಟಲ್ ಗೆ ಬರುತ್ತೆ. ಅದೆಲ್ಲ ಫಾರಿನ್ ನಲ್ಲಿ ತುಂಬಾ ಚೆನ್ನಾಗಿ ನಡೀತಾ ಇದೆ. ಸೋ ಆ ತರದ ಬೇರೆ ಬೇರೆ ಇದೆ. ಸೋ ಇದರಲ್ಲಿ ನಾವು ಇಂಡಿಯಾದಲ್ಲಿ ಇರೋದ್ರಿಂದ ನಾವು ಮಾಡೋದಕ್ಕೆ ಬೇಸಿಕ್ ಆಗಿ ಬೇಕಾಗಿರೋಷ್ಟು ಇನ್ಫರ್ಮೇಷನ್ ನ ನಾನು ಇವಾಗ ಇಲ್ಲಿ ಕೊಟ್ಟಿದ್ದೀನಿ. ಇನ್ನೊಂದಷ್ಟು ಮಾಹಿತಿನ ಮುಂದೆ ಕೊಡ್ತಾ ಹೋಗ್ತೀನಿ ನೋಡ್ತಾ ಇರಿ. ಥ್ಯಾಂಕ್ಯು

Need another transcript?

Paste any YouTube URL to get a clean transcript in seconds.

Get a Transcript